Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆ ಕಂಡ ಚಿನ್ನದ ಬೆಲೆ, ಸತತ ಒಂದು ವಾರದಿಂದ ಏರುತ್ತಿದೆ ಬೆಳ್ಳಿ ದರ; ಇಂದಿನ ದರ ಗಮನಿಸಿ
ಭಾನುವಾರವಾದ್ರೂ ಚಿನ್ನ ದರ ಇಳಿಕೆಯಾಗಲಿ ಎಂದು ನೀವು ಬಯಸುತ್ತಿದ್ದರೆ, ಇಂದು ಖಂಡಿತ ನಿಮಗೆ ಶುಭಸುದ್ದಿ ಇದೆ. ಇಂದು 10 ಗ್ರಾಂ ಚಿನ್ನದ ಮೇಲೆ 300 ರೂ ಇಳಿಕೆಯಾಗಿದೆ. ಚಿನ್ನ ದರ ಎಂದಿನಂತೆ ಏರಿಕೆಯಾಗಿದೆ. ದೇಶದಲ್ಲಿಂದು ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ ಗಮನಿಸಿ.
ಬೆಂಗಳೂರು: ಭಾರತದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಚಿನ್ನದ ದರದಲ್ಲಿ ಏರಿಳಿತವಾಗುತ್ತಲೇ ಇದೆ. ಬೆಳ್ಳಿ ಕಡಿಮೆ ನಿರಂತರವಾಗಿ ಕಡಿಮೆಯಾಗುತ್ತಿದ್ದದ್ದು, ಇದೀಗ ಒಂದಿಷ್ಟು ದಿನಗಳಿಂದ ಸತತ ಏರಿಕೆ ಕಾಣುತ್ತಿದೆ. ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಇಳಿಕೆಯು ಆಭರಣ ಪ್ರಿಯರಿಗೆ ಖುಷಿ ಕೊಡುತ್ತಿಲ್ಲ. ಅದಕ್ಕೆ ಕಾರಣ ಚಿನ್ನದ ದರವು ಸ್ವಲ್ಪ ಸ್ವಲ್ಪವೇ ಇಳಿಕೆಯಾಗಿ ಮೂರು ಪಟ್ಟು ಏರಿಕೆಯಾಗುತ್ತಿರುವುದು ಇದೀಗ ಇಂದು (ಮೇ 12) ಚಿನ್ನದ ದರ ತುಸು ಇಳಿಕೆಯಾಗಿದೆ. ಬೆಳ್ಳಿ ದರ ಹೆಚ್ಚಾಗಿದೆ. ಕರ್ನಾಟಕ, ತಮಿಳುನಾಡು, ಹೈದಾರಾಬಾದ್ ಸೇರಿದಂತೆ ಭಾರತದಾದ್ಯಂತ ಚಿನ್ನ, ಬೆಳ್ಳಿ ದರ ಎಷ್ಟಾಗಿದೆ ಗಮನಿಸಿ.
22 ಕ್ಯಾರೆಟ್ ಚಿನ್ನದ ಬೆಲೆ
ಇಂದು 1 ಗ್ರಾಂ ಚಿನ್ನಕ್ಕೆ 6,725 ರೂ. ಇದೆ. ನಿನ್ನೆ 6,755 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 30 ರೂ ಇಳಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 53,800 ರೂ. ನೀಡಬೇಕು. ನಿನ್ನೆ 54,040 ರೂ ಇದ್ದು, ನಿನ್ನೆ ದರಕ್ಕೆ ಹೋಲಿಸಿದರೆ ಇಂದು 240 ರೂ. ಕಡಿಮೆಯಾಗಿದೆ. 10 ಗ್ರಾಂ ಚಿನ್ನಕ್ಕೆ 67,250 ರೂ ಇದೆ. ನಿನ್ನೆ 66,550 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 300 ರೂ. ಇಳಿಕೆಯಾಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 6,72,500 ರೂ. ನೀಡಬೇಕು. ನಿನ್ನೆ 6,75,500 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 3,000 ರೂ. ಕಡಿಮೆಯಾಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ
24 ಕ್ಯಾರೆಟ್ ಚಿನ್ನಕ್ಕೆ 1 ಗ್ರಾಂಗೆ 7,336 ರೂ. ಇದೆ. ನಿನ್ನೆ 7,369 ರೂ. ಇದು ಈ ದರಕ್ಕೆ ಹೋಲಿಸಿದರೆ 33 ರೂ ಇಳಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 58,688 ರೂ. ನೀಡಬೇಕು. ನಿನ್ನೆ 58,952 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 264 ರೂ. ಕಡಿಮೆಯಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 73,360 ನೀಡಬೇಕು. ನಿನ್ನೆ 73,690 ರೂ. ಇದ್ದು, ಈ ದರಕ್ಕೆ ಹೋಲಿಸಿದರೆ 330 ರೂ ಕಡಿಮೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ 7,33,600 ರೂ. ಇದೆ. ನಿನ್ನೆ 7,36,900 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 3,300 ರೂ ಕಡಿಮೆಯಾಗಿದೆ.
ಕರ್ನಾಟಕದಲ್ಲಿ ಚಿನ್ನದ ಬೆಲೆ (10 ಗ್ರಾಂ)
ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 67,250 ರೂ. ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 73,360 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.
ಹೊರ ರಾಜ್ಯಗಳಲ್ಲಿ ಚಿನ್ನದ ದರ (10 ಗ್ರಾಂ)
ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 67,500 ರೂ. 24 ಕ್ಯಾರೆಟ್‌ಗೆ 73,640 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 67,250 ರೂ. 24 ಕ್ಯಾರೆಟ್‌ಗೆ 73,360 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 67,400 ರೂ. 24 ಕ್ಯಾರೆಟ್‌ಗೆ 73,510 ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 67,250 ರೂ. 24 ಕ್ಯಾರೆಟ್‌ಗೆ 73,360 ರೂ. ಇದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 67,250 ರೂ. ಇದ್ದರೆ, 24 ಕ್ಯಾರೆಟ್‌ಗೆ 73,360 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 67,250 ರೂ. 24 ಕ್ಯಾರೆಟ್‌ಗೆ 73,360 ರೂ. ಆಗಿದೆ.
ಬೆಳ್ಳಿ ದರ
ಇಂದು ಬೆಳ್ಳಿ ದರ ಏರಿಕೆಯಾಗಿದೆ. ಒಂದು ಗ್ರಾಂ ಬೆಳ್ಳಿಗೆ 87.10 ರೂ. ಇದೆ. 8 ಗ್ರಾಂಗೆ 696.80 ರೂ ಇದ್ದರೆ, 10 ಗ್ರಾಂಗೆ 871 ರೂ. ಇದೆ. 100 ಗ್ರಾಂಗೆ 8,710 ರೂ. ಹಾಗೂ 1 ಕಿಲೋಗೆ 87,100 ರೂ. ಬೆಲೆ ನಿಗದಿ ಆಗಿದೆ.