ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Rate Today: ವಾರಾಂತ್ಯದಲ್ಲಿ ಚಿನ್ನದೊಂದಿಗೆ ಬೆಳ್ಳಿ ದರವೂ ಇಳಿಕೆ, ಆಭರಣ ಖರೀದಿಸುವ ಯೋಚನೆ ಇರುವವರು ದರ ಗಮನಿಸಿ

Gold Rate Today: ವಾರಾಂತ್ಯದಲ್ಲಿ ಚಿನ್ನದೊಂದಿಗೆ ಬೆಳ್ಳಿ ದರವೂ ಇಳಿಕೆ, ಆಭರಣ ಖರೀದಿಸುವ ಯೋಚನೆ ಇರುವವರು ದರ ಗಮನಿಸಿ

ಭಾರತದಲ್ಲಿ ಚಿನ್ನದ ದರ ಕೊಂಚ ಕಡಿಮೆಯಾಯ್ತು ಎಂದರೂ ಆಭರಣ ಪ್ರಿಯರ ಮೊಗದಲ್ಲಿ ಸಂತಸ ಅರಳುತ್ತದೆ. ಇದೀಗ ಇಂದು (ಜೂನ್‌ 15) ಚಿನ್ನ ಬೆಲೆಯ ಜೊತೆಗೆ ಬೆಳ್ಳಿ ದರವೂ ಕಡಿಮೆಯಾಗಿದೆ. ನೀವು ಆಭರಣ ಖರೀದಿಸುವ ಯೋಚನೆ ಇದ್ದರೆ ಇಂದಿನ ದರ ಗಮನಿಸಿ.

Gold Price: ಮಂಗಳವಾರವೂ ಚಿನ್ನದ ದರ ಏರಿಕೆ; ಚಿನ್ನದಂಗಡಿಗೆ ಹೋಗುವ ಮುನ್ನ ಧಾರಣೆ ತಿಳಿಯಿರಿ
Gold Price: ಮಂಗಳವಾರವೂ ಚಿನ್ನದ ದರ ಏರಿಕೆ; ಚಿನ್ನದಂಗಡಿಗೆ ಹೋಗುವ ಮುನ್ನ ಧಾರಣೆ ತಿಳಿಯಿರಿ (AFP)

ಬೆಂಗಳೂರು: ಚಿನ್ನದ ದರ ಯಾವಾಗ ಕಡಿಮೆಯಾಗಬಹುದು ಎಂದು ಕಾಯುತ್ತಿರುವವರಿಗೆ ಕಳೆದ ಎರಡು ದಿನಗಳಿಂದ ಶುಭ ಸುದ್ದಿ ಸಿಕ್ಕಿತ್ತು. ಚಿನ್ನದ ದರದಲ್ಲಿ ಇಳಿಕೆಯಾಗುತ್ತಿದ್ದು, ವಾರಾಂತ್ಯದಲ್ಲಿ ಬೆಲೆ ಕಡಿಮೆಯಾಗಿರುವುದು ಖುಷಿ ನೀಡುವ ಸಂಗತಿಯಾಗಿದೆ. ಇದರೊಂದಿಗೆ ಬೆಳ್ಳಿ ದರವೂ ಇಳಿಕೆಯಾಗಿದೆ. ಒಂದಿಷ್ಟು ದಿನಗಳಿಂದ ಚಿನ್ನದ ಖರೀದಿ ಮಾಡಬೇಕು ಎಂದು ಅಂದುಕೊಂಡು ಹಣ ಕೂಡಿ ಇಟ್ಟಿದ್ದರೆ ನೀವು ಚಿನ್ನದೊಂದಿಗೆ ಬೆಳ್ಳಿಯನ್ನು ಕೂಡ ಖರೀದಿ ಮಾಡಬಹುದು. ಶನಿವಾರ (ಜೂನ್‌ 15) ದೇಶದಾದ್ಯಂತ ಚಿನ್ನ ಹಾಗೂ ಬೆಳ್ಳಿ ದರ ಎಷ್ಟಾಗಿದೆ ಗಮನಿಸಿ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

22 ಕ್ಯಾರೆಟ್‌ ಚಿನ್ನದ ಬೆಲೆ

ಇಂದು 1 ಗ್ರಾಂ ಚಿನ್ನಕ್ಕೆ 6,590 ರೂ ಇದೆ. ನಿನ್ನೆ 6,615 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 25 ರೂ ಇಳಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 52,720 ರೂ ನೀಡಬೇಕು. ನಿನ್ನೆ 52,920 ರೂ ಇದ್ದು, ನಿನ್ನೆ ದರಕ್ಕೆ ಹೋಲಿಸಿದರೆ ಇಂದು 200 ರೂ. ಕಡಿಮೆಯಾಗಿದೆ. 10 ಗ್ರಾಂ ಚಿನ್ನಕ್ಕೆ 65,900 ರೂ ಇದೆ. ನಿನ್ನೆ 66,150 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 250 ರೂ. ಕಡಿಮೆಯಾಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 6,59,000 ರೂ. ನೀಡಬೇಕು. ನಿನ್ನೆ 6,61,500 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 2,500 ರೂ. ಇಳಿಕೆಯಾಗಿದೆ.

24 ಕ್ಯಾರೆಟ್‌ ಚಿನ್ನದ ಬೆಲೆ

24 ಕ್ಯಾರೆಟ್‌ ಚಿನ್ನಕ್ಕೆ 1 ಗ್ರಾಂಗೆ 7,189 ರೂ. ಇದೆ. ನಿನ್ನೆ 7,216 ರೂ. ಇದು ಈ ದರಕ್ಕೆ ಹೋಲಿಸಿದರೆ 27 ರೂ ಇಳಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 57,512 ರೂ. ನೀಡಬೇಕು. ನಿನ್ನೆ 57,728 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 216 ರೂ. ಕಡಿಮೆಯಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 71,890 ನೀಡಬೇಕು. ನಿನ್ನೆ 72,160 ರೂ. ಇದ್ದು, ಈ ದರಕ್ಕೆ ಹೋಲಿಸಿದರೆ 270 ರೂ ಕಡಿಮೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ 7,18,900 ರೂ. ಇದೆ. ನಿನ್ನೆ 7,21,600 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 2,700 ರೂ ಹೆಚ್ಚಾಗಿದೆ.

ಟ್ರೆಂಡಿಂಗ್​ ಸುದ್ದಿ

ಕರ್ನಾಟಕದಲ್ಲಿ ಚಿನ್ನದ ಬೆಲೆ (1 ಗ್ರಾಂ)

ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 6,590 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 7,189 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.

ಹೊರ ರಾಜ್ಯಗಳಲ್ಲಿ ಚಿನ್ನದ ದರ (1 ಗ್ರಾಂ)

ಚೆನ್ನೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 6,650 ರೂ. 24 ಕ್ಯಾರೆಟ್‌ಗೆ 7,255 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 6,590 ರೂ. 24 ಕ್ಯಾರೆಟ್‌ಗೆ 7,189 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 6,605 ರೂ. 24 ಕ್ಯಾರೆಟ್‌ಗೆ 7,204 ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 6,590 ರೂ. 24 ಕ್ಯಾರೆಟ್‌ಗೆ 7,189 ರೂ. ಇದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 6,590 ರೂ. ಇದ್ದರೆ, 24 ಕ್ಯಾರೆಟ್‌ಗೆ 7,189 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 6,590 ರೂ. 24 ಕ್ಯಾರೆಟ್‌ಗೆ 7,189 ರೂ. ಆಗಿದೆ.

ಬೆಳ್ಳಿ ದರ

ಇಂದು ಬೆಳ್ಳಿ ದರ ಇಳಿಕೆಯಾಗಿದೆ. ಒಂದು ಗ್ರಾಂ ಬೆಳ್ಳಿಗೆ 90.40 ರೂ. ಇದೆ. 8 ಗ್ರಾಂಗೆ 723.50 ರೂ ಇದ್ದರೆ, 10 ಗ್ರಾಂಗೆ 904 ರೂ. ಇದೆ. 100 ಗ್ರಾಂಗೆ 9,040 ರೂ. ಹಾಗೂ 1 ಕಿಲೋಗೆ 90,400 ರೂ. ಬೆಲೆ ನಿಗದಿ ಆಗಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.