Gold Rate Today: ಬುಧವಾರ ಇಳಿಕೆಯಾಯ್ತು ಆಭರಣ ದರ; 10ಗ್ರಾಂ ಚಿನ್ನಕ್ಕೆ 600 ರೂ, 1ಕೆಜಿ ಬೆಳ್ಳಿಗೆ 6000 ರೂ ಇಳಿಕೆ
ಚಿನ್ನದ ಖರೀದಿ ಮಾಡಬೇಕು ಎಂದು ಅಂದುಕೊಂಡವರು ಇಂದು (ಮೇ 22) ಚಿನ್ನದ ಮಳಿಗೆಗೆ ಭೇಟಿ ನೀಡುವುದು ಉತ್ತಮ. ಯಾಕೆಂದರೆ ಬಹಳ ದಿನಗಳ ನಂತರ ಚಿನ್ನದ ಮೇಲೆ ಕೊಂಚ ಹೆಚ್ಚೇ ಇಳಿಕೆಯಾಗಿದೆ. ಜೊತೆಗೆ ಬೆಳ್ಳಿ ದರವೂ ಕಡಿಮೆಯಾಗಿದೆ. ದೇಶದಲ್ಲಿ ಇಂದು ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ ಗಮನಿಸಿ.

ಬೆಂಗಳೂರು: ಚಿನ್ನದ ದರದ ಏರಿಳಿತವನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಬಹುತೇಕ ಚಿನ್ನದ ದರ ಏರುಗತಿಯಲ್ಲೇ ಸಾಗುತ್ತಿದೆ. ಇದರಿಂದ ಆಭರಣ ಪ್ರಿಯರಿಗೆ ಭಾರಿ ನಿರಾಸೆ ಆಗಿರುವುದು ಸುಳ್ಳಲ್ಲ. ಆದರೆ ಕಳೆದ ಒಂದಿಷ್ಟು ದಿನಗಳಿಗೆ ಹೋಲಿಸಿದರೆ ಇಂದು (ಮೇ 22) ಚಿನ್ನದ ದರದಲ್ಲಿ ಕೊಂಚ ಇಳಿಕೆಯಾಗಿದೆ. 10ಗ್ರಾಂ ಚಿನ್ನದ ಮೇಲೆ 600 ರೂ ಕಡಿಮೆಯಾಗಿದೆ. ಅಲ್ಲದೇ ಬೆಳ್ಳಿ ದರವೂ ಕೆಜಿ ಮೇಲೆ 6000 ರೂ ಕಡಿಮೆಯಾಗಿದೆ. ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಇಂದು ಚಿನ್ನ, ಬೆಳ್ಳಿ ದರ ಎಷ್ಟಿದೆ ನೋಡಿ.
22 ಕ್ಯಾರೆಟ್ ಚಿನ್ನದ ಬೆಲೆ
ಇಂದು 1 ಗ್ರಾಂ ಚಿನ್ನಕ್ಕೆ 6,830 ರೂ. ಇದೆ. ನಿನ್ನೆ 6,890 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 60 ರೂ ಕಡಿಮೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 54,640 ರೂ. ನೀಡಬೇಕು. ನಿನ್ನೆ 55,120 ರೂ ಇದ್ದು, ನಿನ್ನೆ ದರಕ್ಕೆ ಹೋಲಿಸಿದರೆ ಇಂದು 480 ರೂ. ಕಡಿಮೆಯಾಗಿದೆ. 10 ಗ್ರಾಂ ಚಿನ್ನಕ್ಕೆ 68,300 ರೂ ಇದೆ. ನಿನ್ನೆ 68,900 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 600 ರೂ. ಕಡಿಮೆಯಾಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 6,83,000 ರೂ. ನೀಡಬೇಕು. ನಿನ್ನೆ 6,89,500 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 6,000 ರೂ. ಇಳಿಕೆಯಾಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ
24 ಕ್ಯಾರೆಟ್ ಚಿನ್ನಕ್ಕೆ 1 ಗ್ರಾಂಗೆ 7,451 ರೂ. ಇದೆ. ನಿನ್ನೆ 7,516 ರೂ. ಇದು ಈ ದರಕ್ಕೆ ಹೋಲಿಸಿದರೆ 65 ರೂ ಕಡಿಮೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 59,608 ರೂ. ನೀಡಬೇಕು. ನಿನ್ನೆ 60,128 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 520 ರೂ. ಕಡಿಮೆಯಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 74,510 ನೀಡಬೇಕು. ನಿನ್ನೆ 75,160 ರೂ. ಇದ್ದು, ಈ ದರಕ್ಕೆ ಹೋಲಿಸಿದರೆ 650 ರೂ ಕಡಿಮೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ 7,45,100 ರೂ. ಇದೆ. ನಿನ್ನೆ 7,51,600 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 6,500 ರೂ ಕಡಿಮೆಯಾಗಿದೆ.
ಕರ್ನಾಟಕದಲ್ಲಿ ಚಿನ್ನದ ಬೆಲೆ (1 ಗ್ರಾಂ)
ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 6,830 ರೂ. ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 7,451 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.
ಹೊರ ರಾಜ್ಯಗಳಲ್ಲಿ ಚಿನ್ನದ ದರ (1 ಗ್ರಾಂ)
ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 6,860 ರೂ. 24 ಕ್ಯಾರೆಟ್‌ಗೆ 7,484 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 6,830 ರೂ. 24 ಕ್ಯಾರೆಟ್‌ಗೆ 7,451 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 6,845 ರೂ. 24 ಕ್ಯಾರೆಟ್‌ಗೆ 7,466 ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 6,830 ರೂ. 24 ಕ್ಯಾರೆಟ್‌ಗೆ 7,451 ರೂ. ಇದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 6,830 ರೂ. ಇದ್ದರೆ, 24 ಕ್ಯಾರೆಟ್‌ಗೆ 7,451 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 6,830 ರೂ. 24 ಕ್ಯಾರೆಟ್‌ಗೆ 7,451 ರೂ. ಆಗಿದೆ.
ಬೆಳ್ಳಿ ದರ
ಇಂದು ಬೆಳ್ಳಿ ದರವೂ ಏರಿಕೆಯಾಗಿದೆ. ಒಂದು ಗ್ರಾಂ ಬೆಳ್ಳಿಗೆ 92.50 ರೂ. ಇದೆ. 8 ಗ್ರಾಂಗೆ 740 ರೂ ಇದ್ದರೆ, 10 ಗ್ರಾಂಗೆ 925 ರೂ. ಇದೆ. 100 ಗ್ರಾಂಗೆ 9,250 ರೂ. ಹಾಗೂ 1 ಕಿಲೋಗೆ 92,500 ರೂ. ಬೆಲೆ ನಿಗದಿ ಆಗಿದೆ.
