ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Rate Today: ಬುಧವಾರ ಇಳಿಕೆಯಾಯ್ತು ಚಿನ್ನದ ದರ, ಬೆಳ್ಳಿ ದರ ಸ್ಥಿರ; ರಾಜ್ಯದಲ್ಲಿಂದು ಹಳದಿ ಲೋಹದ ಬೆಲೆ ಎಷ್ಟಿದೆ ಗಮನಿಸಿ

Gold Rate Today: ಬುಧವಾರ ಇಳಿಕೆಯಾಯ್ತು ಚಿನ್ನದ ದರ, ಬೆಳ್ಳಿ ದರ ಸ್ಥಿರ; ರಾಜ್ಯದಲ್ಲಿಂದು ಹಳದಿ ಲೋಹದ ಬೆಲೆ ಎಷ್ಟಿದೆ ಗಮನಿಸಿ

ಕಳೆದ ತಿಂಗಳು ಚಿನ್ನದ ದರ ಏರಿಕೆಯಾಗಿ ಭಯ ಮೂಡಿಸಿದ್ದು, ಇದೀಗ ಇಳಿಕೆಯತ್ತ ಸಾಗುತ್ತಿದೆ. ಬುಧವಾರ (ಜೂನ್‌ 19) ಚಿನ್ನದ ಬೆಲೆ ತುಸು ಇಳಿಕೆಯಾಗಿದ್ದರೆ, ಬೆಳ್ಳಿ ದರ ಸ್ಥಿರವಾಗಿದೆ. ಕರ್ನಾಟಕ ಸೇರಿದಂತೆ ದೇಶದಾದ್ಯಂತ ಇಂದಿನ ಚಿನ್ನದ ದರ ಎಷ್ಟಿದೆ ಗಮನಿಸಿ.

ಬುಧವಾರ ಇಳಿಕೆಯಾಯ್ತು ಚಿನ್ನದ ದರ, ಬೆಳ್ಳಿ ದರ ಸ್ಥಿರ
ಬುಧವಾರ ಇಳಿಕೆಯಾಯ್ತು ಚಿನ್ನದ ದರ, ಬೆಳ್ಳಿ ದರ ಸ್ಥಿರ (PTI)

ಬೆಂಗಳೂರು: ಭಾರತದಲ್ಲಿ ಚಿನ್ನದ ದರ ಕಡಿಮೆಯಾಗುವುದನ್ನೇ ಕಾಯುವವರು ಹಲವರು. ಮೇ ತಿಂಗಳಿಗೆ ಹೋಲಿಸಿದರೆ ಜೂನ್‌ ತಿಂಗಳಲ್ಲಿ ಬಹುತೇಕ ಚಿನ್ನದ ದರ ಕಡಿಮೆ ಇತ್ತು. ಇದೀಗ ಬುಧವಾರ (ಜೂನ್‌ 19) ಹಳದಿ ಲೋಹದ ಬೆಲೆ ತುಸು ಇಳಿಕೆಯಾಗಿದೆ. ಬೆಳ್ಳಿ ದರ ಸ್ಥಿರವಾಗಿದೆ. ಕರ್ನಾಟಕ, ತಮಿಳುನಾಡು, ಹೈದರಾಬಾದ್‌, ಕೇರಳ, ದೆಹಲಿ ರಾಜ್ಯಗಳಲ್ಲಿ ಇಂದು ಚಿನ್ನದ ದರ ಎಷ್ಟಿದೆ ಗಮನಿಸಿ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

22 ಕ್ಯಾರೆಟ್‌ ಚಿನ್ನದ ಬೆಲೆ

ಇಂದು 1 ಗ್ರಾಂ ಚಿನ್ನಕ್ಕೆ 6,620 ರೂ ಇದೆ. ನಿನ್ನೆ 6,630 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 10 ರೂ ಇಳಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 52,960 ರೂ ನೀಡಬೇಕು. ನಿನ್ನೆ 53,040 ರೂ ಇದ್ದು, ನಿನ್ನೆ ದರಕ್ಕೆ ಹೋಲಿಸಿದರೆ ಇಂದು 80 ರೂ. ಕಡಿಮೆಯಾಗಿದೆ. 10 ಗ್ರಾಂ ಚಿನ್ನಕ್ಕೆ 66,200 ರೂ ಇದೆ. ನಿನ್ನೆ 66,300 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 100 ರೂ. ಕಡಿಮೆಯಾಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 6,62,000 ರೂ. ನೀಡಬೇಕು. ನಿನ್ನೆ 6,63,000 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 1,000 ರೂ. ಇಳಿಕೆಯಾಗಿದೆ.

24 ಕ್ಯಾರೆಟ್‌ ಚಿನ್ನದ ಬೆಲೆ

24 ಕ್ಯಾರೆಟ್‌ ಚಿನ್ನಕ್ಕೆ 1 ಗ್ರಾಂಗೆ 7,222 ರೂ. ಇದೆ. ನಿನ್ನೆ 7,233 ರೂ. ಇದು ಈ ದರಕ್ಕೆ ಹೋಲಿಸಿದರೆ 11 ರೂ ಇಳಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 57,776 ರೂ. ನೀಡಬೇಕು. ನಿನ್ನೆ 57,864 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 88 ರೂ. ಕಡಿಮೆಯಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 72,220 ನೀಡಬೇಕು. ನಿನ್ನೆ 72,330 ರೂ. ಇದ್ದು, ಈ ದರಕ್ಕೆ ಹೋಲಿಸಿದರೆ 110 ರೂ ಕಡಿಮೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ 7,22,200 ರೂ. ಇದೆ. ನಿನ್ನೆ 7,23,300 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 1,100 ರೂ ಕಡಿಮೆಯಾಗಿದೆ.

ಟ್ರೆಂಡಿಂಗ್​ ಸುದ್ದಿ

ಕರ್ನಾಟಕದಲ್ಲಿ ಚಿನ್ನದ ಬೆಲೆ (1 ಗ್ರಾಂ)

ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 6,620 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 7,222 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.

ಹೊರ ರಾಜ್ಯಗಳಲ್ಲಿ ಚಿನ್ನದ ದರ (1 ಗ್ರಾಂ)

ಚೆನ್ನೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 6,695 ರೂ. 24 ಕ್ಯಾರೆಟ್‌ಗೆ 7,304 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 6,620 ರೂ. 24 ಕ್ಯಾರೆಟ್‌ಗೆ 7,222 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 6,635 ರೂ. 24 ಕ್ಯಾರೆಟ್‌ಗೆ 7,247 ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 6,620 ರೂ. 24 ಕ್ಯಾರೆಟ್‌ಗೆ 7,222 ರೂ. ಇದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 6,620 ರೂ. ಇದ್ದರೆ, 24 ಕ್ಯಾರೆಟ್‌ಗೆ 7,222 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 6,620 ರೂ. 24 ಕ್ಯಾರೆಟ್‌ಗೆ 7,222 ರೂ. ಆಗಿದೆ.

ಬೆಳ್ಳಿ ದರ

ಇಂದು ಬೆಳ್ಳಿ ದರ ಇಳಿಕೆಯಾಗಿದೆ. ಒಂದು ಗ್ರಾಂ ಬೆಳ್ಳಿಗೆ 91 ರೂ. ಇದೆ. 8 ಗ್ರಾಂಗೆ 728 ರೂ ಇದ್ದರೆ, 10 ಗ್ರಾಂಗೆ 910 ರೂ. ಇದೆ. 100 ಗ್ರಾಂಗೆ 9,100 ರೂ. ಹಾಗೂ 1 ಕಿಲೋಗೆ 91,000 ರೂ. ಬೆಲೆ ನಿಗದಿ ಆಗಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.