Gold Rate Today: ಮೇ ತಿಂಗಳ ಮೊದಲ ದಿನ ಸ್ಥಿರವಾದ ಚಿನ್ನ, ಬೆಳ್ಳಿ ದರ; ಕರ್ನಾಟಕದ ಇಂದಿನ ಬೆಲೆ ಗಮನಿಸಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Rate Today: ಮೇ ತಿಂಗಳ ಮೊದಲ ದಿನ ಸ್ಥಿರವಾದ ಚಿನ್ನ, ಬೆಳ್ಳಿ ದರ; ಕರ್ನಾಟಕದ ಇಂದಿನ ಬೆಲೆ ಗಮನಿಸಿ

Gold Rate Today: ಮೇ ತಿಂಗಳ ಮೊದಲ ದಿನ ಸ್ಥಿರವಾದ ಚಿನ್ನ, ಬೆಳ್ಳಿ ದರ; ಕರ್ನಾಟಕದ ಇಂದಿನ ಬೆಲೆ ಗಮನಿಸಿ

ಚಿನ್ನದ ದರ ಕಡಿಮೆಯಾಗಬಹುದು ಎಂಬ ನಿರೀಕ್ಷೆ ಇರಿಸಿಕೊಂಡು ತಿಂಗಳ ಆರಂಭಕ್ಕೆ ಕಾಯುತ್ತಿದ್ದರೆ ಇಂದು (ಮೇ 1) ನಿಮಗೆ ಖುಷಿ ಸುದ್ದಿ ಇದೆ. ಮೇ ತಿಂಗಳ ಮೊದಲ ದಿನ ಚಿನ್ನ, ಬೆಳ್ಳಿ ದರ ಸ್ಥಿರವಾಗಿದೆ. ಕರ್ನಾಟಕ ಸೇರಿದಂತೆ ಭಾರತದ ವಿವಿಧ ರಾಜ್ಯಗಳಲ್ಲಿನ ಇಂದಿನ ಚಿನ್ನದ ದರ ಗಮನಿಸಿ.

ಮೇ 1 ರಂದು ಸ್ಥಿರವಾದ ಚಿನ್ನ, ಬೆಳ್ಳಿ ದರ
ಮೇ 1 ರಂದು ಸ್ಥಿರವಾದ ಚಿನ್ನ, ಬೆಳ್ಳಿ ದರ

ಬೆಂಗಳೂರು: ಅಂತರರಾಷ್ಟ್ರೀಯ ಮಟ್ಟದ ಜಾಗತಿಕ ವಿದ್ಯಮಾನಗಳು ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ. ರಷ್ಯಾ-ಉಕ್ರೇನ್‌ ಯುದ್ಧದ ದಿನಗಳಿಂದ ಚಿನ್ನಾಭರಣ ದರದಲ್ಲಿ ಭಾರಿ ವ್ಯತ್ಯಾಸವಾಗುತ್ತಿದೆ. ಒಂದು ದಿನ ಇಳಿಕೆಯಾದರೆ ಇನ್ನೆರಡು ದಿನ ಏರಿಕೆಯಾಗುತ್ತಿದೆ. ಆದರೆ ಮೇ ತಿಂಗಳ ಮೊದಲ ದಿನ ಚಿನ್ನ ಹಾಗೂ ಬೆಳ್ಳಿ ದರ ಎರಡೂ ಸ್ಥಿರವಾಗುವ ಮೂಲಕ ಆಭರಣ ಪ್ರಿಯರಿಗೆ ಖುಷಿ ತಂದಿದೆ. ರಾಜ್ಯ ಹಾಗೂ ದೇಶದ ಇಂದಿನ ಚಿನ್ನ, ಬೆಳ್ಳಿ ದರ ಗಮನಿಸಿ.

22 ಕ್ಯಾರೆಟ್‌ ಚಿನ್ನದ ಬೆಲೆ

ಇಂದು 1 ಗ್ರಾಂ ಚಿನ್ನಕ್ಕೆ 6,655 ರೂ. ಇದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 53,240 ರೂ. ನೀಡಬೇಕು. 10 ಗ್ರಾಂ ಚಿನ್ನಕ್ಕೆ 66,550 ರೂ ಇದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 6,65,500 ರೂ. ನೀಡಬೇಕು.

24 ಕ್ಯಾರೆಟ್‌ ಚಿನ್ನದ ಬೆಲೆ

24 ಕ್ಯಾರೆಟ್‌ ಚಿನ್ನಕ್ಕೆ 1 ಗ್ರಾಂಗೆ 7,260 ರೂ. ಇದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 58,080 ರೂ. ನೀಡಬೇಕು. ಇಂದು 10 ಗ್ರಾಂ ಚಿನ್ನಕ್ಕೆ 72,600 ನೀಡಬೇಕು. 100 ಗ್ರಾಂ ಚಿನ್ನದ ಬೆಲೆ 7,26,000 ರೂ. ಇದೆ.

ಕರ್ನಾಟಕದಲ್ಲಿ ಚಿನ್ನದ ಬೆಲೆ (10 ಗ್ರಾಂ)

ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 66,550 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 72,600 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.

ಹೊರ ರಾಜ್ಯಗಳಲ್ಲಿ ಚಿನ್ನದ ದರ (10 ಗ್ರಾಂ)

ಚೆನ್ನೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 67,400 ರೂ. 24 ಕ್ಯಾರೆಟ್‌ಗೆ 73,530 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 66,550 ರೂ. 24 ಕ್ಯಾರೆಟ್‌ಗೆ 72,600 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 66,700 ರೂ. 24 ಕ್ಯಾರೆಟ್‌ಗೆ 72,750 ರೂ. ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 66,550 ರೂ. 24 ಕ್ಯಾರೆಟ್‌ಗೆ 72,600 ರೂ. ಇದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 66,550 ರೂ. ಇದ್ದರೆ, 24 ಕ್ಯಾರೆಟ್‌ಗೆ 72,600 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 66,550 ರೂ. 24 ಕ್ಯಾರೆಟ್‌ಗೆ 72,600 ರೂ. ಆಗಿದೆ.

ಬೆಳ್ಳಿ ದರ

ಇಂದು ಬೆಳ್ಳಿ ದರವೂ ಸ್ಥಿರವಾಗಿದೆ. ಒಂದು ಗ್ರಾಂ ಬೆಳ್ಳಿಗೆ 83.50 ರೂ. ಇದೆ. 8 ಗ್ರಾಂಗೆ 668 ರೂ ಇದ್ದರೆ, 10 ಗ್ರಾಂಗೆ 835 ರೂ. ಇದೆ. 100 ಗ್ರಾಂಗೆ 8,350 ರೂ. ಹಾಗೂ 1 ಕಿಲೋಗೆ 83,500 ರೂ. ಬೆಲೆ ನಿಗದಿ ಆಗಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.