ಕನ್ನಡ ಸುದ್ದಿ  /  Nation And-world  /  Business News Gold Silver Rate For 20 March 2024 In Bengaluru Mysuru Mandya Mangaluru Rsm

Gold Rate: ಏರಿಕೆ ಆಗುತ್ತಲೇ ಇದೆ ಚಿನ್ನ; ನಿಮ್ಮ ನಿಮ್ಮ ಊರುಗಳಲ್ಲಿ ಬೆಳ್ಳಿ, ಬಂಗಾರದ ಬೆಲೆ ಎಷ್ಟು? ಇಲ್ಲಿದೆ ವಿವರ

Gold Rate: ಆಭರಣಪ್ರಿಯರಿಗೆ ಕಳೆದ ಕೆಲವು ದಿನಗಳಿಂದ ನಿರಾಸೆ ಕಾಡುತ್ತಿದೆ. ಚಿನ್ನದ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೆ ಏರುತ್ತಿದೆ. ಚಿನ್ನದ ಅಂಗಡಿಗೆ ಹೋಗಲೂ 10 ಬಾರಿ ಯೋಚಿಸುವಂತೆ ಆಗಿದೆ. ರಾಜ್ಯದ ಇತರ ನಗರಗಳು ಹಾಗೂ ಹೊರ ರಾಜ್ಯಗಳಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಹೇಗಿದೆ ನೋಡೋಣ.

ಮಾರ್ಚ್‌ 20ರ ಚಿನ್ನ, ಬೆಳ್ಳಿ ದರ
ಮಾರ್ಚ್‌ 20ರ ಚಿನ್ನ, ಬೆಳ್ಳಿ ದರ

ಬೆಂಗಳೂರು: ಚಿನ್ನದ ಬೆಲೆ ದಿನೇ ದಿನೆ ಹೆಚ್ಚುತ್ತಲೇ ಇದೆ. ಕಳೆದ ತಿಂಗಳು ಗ್ರಾಂಗೆ 5 ಸಾವಿರ ಆಸುಪಾಸಿನಲ್ಲಿದ್ದ ಚಿನ್ನ ಈಗ 6 ಸಾವಿರ ರೂಗೆ ಏರಿದೆ. ಆದರೆ ಬೆಳ್ಳಿ ಇಂದು ಇಳಿಕೆ ಕಂಡಿದೆ. ಬೆಂಗಳೂರು, ಮಂಗಳೂರು. ಮೈಸೂರು, ಹೊರ ದೇಶ ಸೇರಿದಂತೆ ಇಂದು (ಮಾರ್ಚ್‌ 20)ರಂದು ಚಿನ್ನದ ಬೆಲೆಯ ವಿವರ ಇಲ್ಲಿದೆ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

22 ಕ್ಯಾರೆಟ್‌ ಚಿನ್ನದ ಬೆಲೆ

1 ಗ್ರಾಂಗೆ 22 ಕ್ಯಾರೆಟ್‌ ಚಿನ್ನದ ಬೆಲೆ ನಿನ್ನೆ 6,038 ಇದ್ದರೆ ಇಂದು 6,080 ರೂ ಆಗಿದೆ. ಗ್ರಾಂಗೆ 42 ರೂ. ಏರಿಕೆ ಆಗಿದೆ. 8 ಗ್ರಾಂಗೆ ನಿನ್ನೆ 48,304 ರೂ ಇದ್ದರೆ ಇಂದು 48,640 ಇದೆ. ಹಾಗೇ 10 ಗ್ರಾಂ ಚಿನ್ನಕ್ಕೆ ಇಂದು 60,800 ರೂ. 100 ಗ್ರಾಂ ಚಿನ್ನಕ್ಕೆ 6,08,000 ರೂ. ಏರಿಕೆ ಆಗಿದೆ.

ಇದನ್ನೂ ಓದಿ:

24 ಕ್ಯಾರೆಟ್‌ ಚಿನ್ನದ ಬೆಲೆ

1 ಗ್ರಾಂಗೆ 24 ಕ್ಯಾರೆಟ್‌ ಚಿನ್ನದ ಬೆಲೆ ನಿನ್ನೆ6,587 ಇದ್ದರೆ ಇಂದು 6,633 ರೂ ಆಗಿದೆ. ಗ್ರಾಂಗೆ 46 ರೂ. ಏರಿಕೆ ಆಗಿದೆ. 8 ಗ್ರಾಂಗೆ ನಿನ್ನೆ 52,696 ರೂ ಇದ್ದರೆ ಇಂದು 53,064 ಇದೆ. ಹಾಗೇ 10 ಗ್ರಾಂ ಚಿನ್ನಕ್ಕೆ ಇಂದು 66,330 ರೂ. 100 ಗ್ರಾಂ ಚಿನ್ನಕ್ಕೆ 6,63,300 ರೂ. ಏರಿಕೆ ಆಗಿದೆ.

ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್‌ ಚಿನ್ನದ ಬೆಲೆ 60,800 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 66,330 ರೂ. ಇದೆ. ಬೆಂಗಳೂರು ಮಾತ್ರವಲ್ಲ ರಾಜ್ಯದ ಇತರ ನಗರಗಳಾದ ಮೈಸೂರು, ಮಂಗಳೂರು, ದಾವಣಗೆರೆ, ಹುಬ್ಬಳ್ಳಿ ಹಾಗೂ ಇನ್ನಿತರ ನಗರಗಳಲ್ಲಿ ಕೂಡಾ ಚಿನ್ನದ ಬೆಲೆ ಒಂದೇ ಇದೆ. ಮಜೂರಿ, ಇತರೆ ಶುಲ್ಕ, ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಲಿದೆ.

ಹೊರ ರಾಜ್ಯಗಳಲ್ಲಿ ಚಿನ್ನದ ದರ

ಚೆನ್ನೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 61,350 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 66,930 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 60,800 ರೂ. 24 ಕ್ಯಾರೆಟ್‌ ಚಿನ್ನದ ಬೆಲೆ 66,330 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 60,950 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 66,480 ರೂ. ಇದೆ. ಕೊಲ್ಕೊತ್ತಾದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 60,800 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 66,330 ರೂ. ನಿಗದಿಯಾಗಿದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 60,800 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 66,330 ರೂ. ಇದೆ. ವಡೋದರದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 60,850 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 66,380 ರೂ. ಇದೆ. ಅಹಮದಾಬಾದ್‌ನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 60,850 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 66,380 ರೂ. ಇದೆ.

ಬೆಳ್ಳಿ ದರ

ಬೆಳ್ಳಿ ದರ ನಿನ್ನೆಗಿಂತ ಗಾಂಗೆ 10 ಪೈಸೆ ಕಡಿಮೆ ಆಗಿದೆ. 1 ಗ್ರಾಂಗೆ 75.90 ರೂ. 8 ಗ್ರಾಂಗೆ 607.20 ರೂ. 10 ಗ್ರಾಂಗೆ 759 ರೂ. 100 ಗ್ರಾಂಗೆ 7,590 ರೂ. ಹಾಗೂ 1 ಕಿಲೋಗೆ 75,900 ರೂ ಬೆಲೆ ನಿಗದಿ ಆಗಿದೆ.