Gold Rate: ಆಭರಣ ಪ್ರಿಯರಿಗೆ ಗುರುವಾರ ಶುಭಸುದ್ದಿ, ಚಿನ್ನದೊಂದಿಗೆ ಬೆಳ್ಳಿ ದರವೂ ಸ್ಥಿರ
ಚಿನ್ನಾಭರಣ ಪ್ರಿಯರಿಗೆ ಗುರುವಾರ ಶುಭದಿನ. ಕಳೆದ ಎರಡು ದಿನಗಳಿಂದ ಇಳಿಕೆಯಾಗಿದ್ದ ಚಿನ್ನದ ಬೆಲೆ ಇಂದು (ಜೂನ್ 20) ಸ್ಥಿರವಾಗಿದೆ. ನಿನ್ನೆಯೂ (ಜೂನ್ 19) ಸ್ಥಿರವಾಗಿದ್ದ ಬೆಳ್ಳಿ ದರ ಇಂದು ಕೂಡ ಸ್ಥಿರವಾಗಿದೆ. ಆಭರಣ ಮಳಿಗೆಗೆ ಹೋಗುವ ಯೋಚನೆ ಇದ್ದರೆ ದರ ಗಮನಿಸಿ.
ಬೆಂಗಳೂರು: ಭಾರತದಲ್ಲಿ ಚಿನ್ನಾಭರಣ ದರ ಏರಿಳಿತವಾಗುವುದು ಸಹಜ. ಚಿನ್ನ ಹಾಗೂ ಬೆಳ್ಳಿ ಎರಡಕ್ಕೂ ಭಾರಿ ಬೇಡಿಕೆ ಇರುವ ದೇಶಗಳಲ್ಲಿ ಭಾರತವೂ ಒಂದು. ಆದರೆ ಕಳೆದೊಂದು ದಶಕದಿಂದ ಚಿನ್ನದ ದರ ಏರಿಕೆಯಾಗುತ್ತಲೇ ಇದೆ. ಕೊಂಚ ಚಿನ್ನದ ದರ ಇಳಿಕೆಯಾದ್ರೂ ಆಭರಣ ಪ್ರಿಯರು ಸಂತಸ ಪಡುತ್ತಾರೆ. ಜೂನ್ ತಿಂಗಳಲ್ಲಿ ಬಹುತೇಕ ದಿನ ಚಿನ್ನದ ಬೆಲೆ ಕಡಿಮೆಯಾಗುತ್ತಲೇ ಇತ್ತು. ಜೂನ್ 20 ರಂದು ಚಿನ್ನದೊಂದಿಗೆ ಬೆಳ್ಳಿ ದರವೂ ಸ್ಥಿರವಾಗಿದೆ. ಇಂದು ದೇಶದಲ್ಲಿ ಚಿನ್ನ ಬೆಳ್ಳಿ ದರ ಎಷ್ಟಿದೆ ಗಮನಿಸಿ.
22 ಕ್ಯಾರೆಟ್ ಚಿನ್ನದ ಬೆಲೆ
ಇಂದು 1 ಗ್ರಾಂ ಚಿನ್ನಕ್ಕೆ 6,620 ರೂ ಇದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 52,960 ರೂ ನೀಡಬೇಕು. 10 ಗ್ರಾಂ ಚಿನ್ನಕ್ಕೆ 66,200 ರೂ ಇದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 6,62,000 ರೂ. ನೀಡಬೇಕು.
24 ಕ್ಯಾರೆಟ್ ಚಿನ್ನದ ಬೆಲೆ
24 ಕ್ಯಾರೆಟ್ ಚಿನ್ನಕ್ಕೆ 1 ಗ್ರಾಂಗೆ 7,222 ರೂ. ಇದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 57,776 ರೂ. ನೀಡಬೇಕು. ಇಂದು 10 ಗ್ರಾಂ ಚಿನ್ನಕ್ಕೆ 72,220 ನೀಡಬೇಕು. 100 ಗ್ರಾಂ ಚಿನ್ನದ ಬೆಲೆ 7,22,200 ರೂ. ಇದೆ.
ಕರ್ನಾಟಕದಲ್ಲಿ ಚಿನ್ನದ ಬೆಲೆ (1 ಗ್ರಾಂ)
ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 6,620 ರೂ. ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 7,222 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.
ಹೊರ ರಾಜ್ಯಗಳಲ್ಲಿ ಚಿನ್ನದ ದರ (1 ಗ್ರಾಂ)
ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 6,695 ರೂ. 24 ಕ್ಯಾರೆಟ್‌ಗೆ 7,304 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 6,620 ರೂ. 24 ಕ್ಯಾರೆಟ್‌ಗೆ 7,222 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 6,635 ರೂ. 24 ಕ್ಯಾರೆಟ್‌ಗೆ 7,247 ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 6,620 ರೂ. 24 ಕ್ಯಾರೆಟ್‌ಗೆ 7,222 ರೂ. ಇದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 6,620 ರೂ. ಇದ್ದರೆ, 24 ಕ್ಯಾರೆಟ್‌ಗೆ 7,222 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 6,620 ರೂ. 24 ಕ್ಯಾರೆಟ್‌ಗೆ 7,222 ರೂ. ಆಗಿದೆ.
ಬೆಳ್ಳಿ ದರ
ಇಂದು ಬೆಳ್ಳಿ ದರ ಇಳಿಕೆಯಾಗಿದೆ. ಒಂದು ಗ್ರಾಂ ಬೆಳ್ಳಿಗೆ 91 ರೂ. ಇದೆ. 8 ಗ್ರಾಂಗೆ 728 ರೂ ಇದ್ದರೆ, 10 ಗ್ರಾಂಗೆ 910 ರೂ. ಇದೆ. 100 ಗ್ರಾಂಗೆ 9,100 ರೂ. ಹಾಗೂ 1 ಕಿಲೋಗೆ 91,000 ರೂ. ಬೆಲೆ ನಿಗದಿ ಆಗಿದೆ.
