ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Rate: ಚಿನ್ನದ ಬೆಲೆ ಸ್ವಲ್ಪ ಇಳಿಕೆ; ಪ್ರಮುಖ ನಗರಗಳು, ಹೊರ ರಾಜ್ಯಗಳಲ್ಲಿ ಇಂದಿನ ಚಿನ್ನ, ಬೆಳ್ಳಿ ಬೆಲೆ ಹೀಗಿದೆ

Gold Rate: ಚಿನ್ನದ ಬೆಲೆ ಸ್ವಲ್ಪ ಇಳಿಕೆ; ಪ್ರಮುಖ ನಗರಗಳು, ಹೊರ ರಾಜ್ಯಗಳಲ್ಲಿ ಇಂದಿನ ಚಿನ್ನ, ಬೆಳ್ಳಿ ಬೆಲೆ ಹೀಗಿದೆ

Gold Rate: ಕಳೆದ ಒಂದು ತಿಂಗಳಿಂದ ಚಿನ್ನದ ಬೆಲೆ ಏರುತ್ತಲೇ ಇದೆ. ಆಗ್ಗಾಗ್ಗೆ ಕಡಿಮೆ ಆದರೂ ಅದಕ್ಕೆ ಎರಡರಷ್ಟು ಬೆಲೆ ಹೆಚ್ಚಾಗುತ್ತಲೇ ಇದೆ. ಶನಿವಾರ ಚಿನ್ನದ ಬೆಲೆ 50 ರೂ. ಹೆಚ್ಚಾಗಿತ್ತು. ಆದರೆ ಭಾನುವಾರ 10 ರೂ ಇಳಿದಿದೆ. ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳು, ಹೊರ ರಾಜ್ಯಗಳಲ್ಲಿ ಇಂದಿನ ಚಿನ್ನದ ಬೆಲೆ ಹೀಗಿದೆ.

ಏಪ್ರಿಲ್‌ 21ರ ಚಿನ್ನದ ಬೆಲೆ
ಏಪ್ರಿಲ್‌ 21ರ ಚಿನ್ನದ ಬೆಲೆ

ಬೆಂಗಳೂರು: ಚಿನ್ನದ ಬೆಲೆ ದಿನೇ ದಿನ ಏರುತ್ತಿರುವುದು ಆಭರಣಪ್ರಿಯರಿಗೆ ನಿರಾಸೆ ಮೂಡಿಸುತ್ತದೆ. ಕೆಲವೇ ದಿನಗಳ ಹಿಂದೆ ಗ್ರಾಂಗೆ 5,600 ಇದ್ದ ಚಿನ್ನ ಇಂದು 6,800 ದಾಟಿದೆ. ಕೆಲವೇ ದಿನಗಳಲ್ಲಿ 7,000 ಮುಟ್ಟಬಹುದಾ ಎಂಬ ಭೀತಿ ಕಾಡುತ್ತಿದೆ. ಇದೇ ರೀತಿ ಮುಂದುವರೆದರೆ ಬಡವರಿಗೆ ಚಿನ್ನ ಗಗನ ಕುಸುಮವಾಗುತ್ತದೆ. ಮದುವೆ ಹಾಗೂ ಇನ್ನಿತರ ಸಮಾರಂಭಗಳಲ್ಲಿ ಚಿನ್ನಕ್ಕೆ ಬಹಳ ಪ್ರಾಮುಖ್ಯತೆ ಇರುವುದರಿಂದ ಆಭರಣಪ್ರಿಯರು, ಮದುವೆ ಮಾಡುವವರು ಚಿನ್ನ ಯಾವಾಗ ಕಡಿಮೆ ಆಗುವುದೋ ಎಂದು ಕಾಯುತ್ತಾ ಕುಳಿತಿದ್ದಾರೆ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಟ್ರೆಂಡಿಂಗ್​ ಸುದ್ದಿ

22 ಕ್ಯಾರೆಟ್‌ ಚಿನ್ನದ ಬೆಲೆ

ಶನಿವಾರ 50 ರೂ. ಏರಿಕೆ ಆಗಿದ್ದ ಚಿನ್ನದ ಬೆಲೆ ಇಂದು (ಭಾನುವಾರ) 10 ರೂ. ಕಡಿಮೆ ಆಗಿದೆ. ಚಿನ್ನದ ದರ ಇಳಿದಿದ್ದರೂ ಅಷ್ಟೇನೂ ವ್ಯತ್ಯಾಸ ಎನಿಸಿಲ್ಲ. 1 ಗ್ರಾಂ ಚಿನ್ನದ ಬೆಲೆ ಇಂದು 6,805ರೂ ಇದೆ. ನಿನ್ನೆ ಇದರ ಬೆಲೆ 6,815 ರೂ. ಇತ್ತು. 8 ಗ್ರಾಂ ಚಿನ್ನದ ಬೆಲೆ 54,440 ರೂ. 10 ಗ್ರಾಂ ಚಿನ್ನದ ಬೆಲೆ 68,050 ರೂ ಹಾಗೂ 100 ಗ್ರಾಂ ಚಿನ್ನದ ಬೆಲೆ 6,80,500 ರೂ. ಇದೆ.

24 ಕ್ಯಾರೆಟ್‌ ಚಿನ್ನದ ಬೆಲೆ

24 ಕ್ಯಾರೆಟ್‌ ಚಿನ್ನ, 1 ಗ್ರಾಂಗೆ ಇಂದು 7,424 ರೂ. ಇದೆ. ಹಾಗೇ 8 ಗ್ರಾಂಗೆ 59,392 ರೂ. 10 ಗ್ರಾಂಗೆ 74,240 ರೂ. 100 ಗ್ರಾಂಗೆ 7,42,400 ರೂ. ಬೆಲೆ ನಿಗದಿ ಆಗಿದೆ.

ಕರ್ನಾಟಕದಲ್ಲಿ ಇಂದಿನ ಚಿನ್ನದ ದರ (10 ಗ್ರಾಂ)

ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 68,050 ರೂ. ಹಾಗೂ 24 ಕ್ಯಾರೆಟ್‌ಗೆ 74,240 ರೂ. ಇದೆ. ಮಂಗಳೂರು, ಮೈಸೂರು, ದಾವಣಗೆರೆ ಬಳ್ಳಾರಿ, ಮಂಡ್ಯ, ಶಿವಮೊಗ್ಗ, ಹಾವೇರಿ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ಒಂದೊಂದು ನಗರಗಳಲ್ಲಿ ವ್ಯತ್ಯಾಸವಿರಬಹುದು.

ಹೊರ ರಾಜ್ಯಗಳ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ (10 ಗ್ರಾಂ)

ಚೆನ್ನೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 68,850 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 75,110 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 68,050 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 74,240 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 68,210 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 74,390 ರೂ. ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 68,050 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 74,240 ರೂ. ಇದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 68,050 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 74,240 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 68,050 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 74,240 ರೂ. ಇದೆ. ವಡೋಧರಾದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 68,110 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 74,290 ರೂ. ಇದೆ.

ಬೆಳ್ಳಿ ದರ

ಚಿನ್ನದ ಜೊತೆಗೆ ಇಂದು ಬೆಳ್ಳಿ ಬೆಲೆ ಕೂಡಾ ಕೊಂಚ ಕಡಿಮೆ ಆಗಿದೆ. 1 ಗ್ರಾಂಗೆ 85.75 ರೂ. 8 ಗ್ರಾಂಗೆ 686 ರೂ. 10 ಗ್ರಾಂಗೆ 857.50 ರೂ. 100 ಗ್ರಾಮಗೆ 8,575 ರೂ. ಹಾಗೂ 1 ಕಿಲೋಗೆ 85,750 ರೂ. ಬೆಲೆ ನಿಗದಿ ಆಗಿದೆ.

IPL_Entry_Point