ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Rate Today: ಸೋಮವಾರ ಸ್ಥಿರವಾದ ಚಿನ್ನದ ದರ, ಆಭರಣ ಪ್ರಿಯರಲ್ಲಿ ಮತ್ತೆ ಮೂಡಿದ ಭರವಸೆ; ಬೆಳ್ಳಿ ತುಸು ಹೆಚ್ಚಳ

Gold Rate Today: ಸೋಮವಾರ ಸ್ಥಿರವಾದ ಚಿನ್ನದ ದರ, ಆಭರಣ ಪ್ರಿಯರಲ್ಲಿ ಮತ್ತೆ ಮೂಡಿದ ಭರವಸೆ; ಬೆಳ್ಳಿ ತುಸು ಹೆಚ್ಚಳ

ಚಿನ್ನಾಭರಣ ಪ್ರಿಯರಿಗೆ ಇಂದು ಭರವಸೆ ಮೂಡಿಸುವ ಸುದ್ದಿ ಇದೆ. ಏರಿಕೆಯಾಗುತ್ತಲೇ ಇದ್ದ ಚಿನ್ನ ನಿನ್ನೆ (ಏಪ್ರಿಲ್‌ 21) ತುಸು ಇಳಿಕೆಯಾಗಿತ್ತು. ಇಂದು (ಏಪ್ರಿಲ್‌ 22) ಚಿನ್ನದ ದರ ಸ್ಥಿರವಾಗಿದೆ. ಬೆಳ್ಳಿ ದರ ತುಸು ಏರಿಕೆಯಾಗಿದೆ. ದೇಶದಲ್ಲಿ ಇಂದು ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ ಗಮನಿಸಿ.

ಏಪ್ರಿಲ್‌ 22ರ ಚಿನ್ನ, ಬೆಳ್ಳಿ ದರ
ಏಪ್ರಿಲ್‌ 22ರ ಚಿನ್ನ, ಬೆಳ್ಳಿ ದರ

ಬೆಂಗಳೂರು: ಚಿನ್ನದ ಬೆಲೆ ಹೆಚ್ಚಳದಿಂದ ಕಂಗಾಲಾಗಿದ್ದಾರೆ ಆಭರಣ ಪ್ರಿಯರು. ದಿನೇ ದಿನೇ ಹೆಚ್ಚುತ್ತಲೇ ಇದ್ದ ಚಿನ್ನದ ದರ ಕಳೆದ ಮೂರು ದಿನಗಳಿಂದ ನೆಮ್ಮದಿ ಮೂಡಿಸುವಂತೆ ಮಾಡಿದೆ. ಶನಿವಾರ ಸ್ಥಿರವಾಗಿದ್ದ ಚಿನ್ನದ ದರ ಭಾನುವಾರ ತುಸು ಇಳಿಕೆಯಾಗಿತ್ತು. ಇದೀಗ ಸೋಮವಾರ (ಏಪ್ರಿಲ್‌ 22) ಮತ್ತೆ ಸ್ಥಿರವಾಗಿದೆ. ಆದರೆ ಬೆಳ್ಳಿ ದರ ಹೆಚ್ಚಳ ನಿಲ್ಲುತ್ತಿಲ್ಲ. ದಿನೇ ದಿನೇ ಕೊಂಚ ಕೊಂಚವಾಗಿ ಏರುತ್ತಿದೆ ಬೆಳ್ಳಿ ದರ. ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಇಂದು ಚಿನ್ನ, ಬೆಳ್ಳಿ ದರ ಎಷ್ಟಿದೆ ಗಮನಿಸಿ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಟ್ರೆಂಡಿಂಗ್​ ಸುದ್ದಿ

22 ಕ್ಯಾರೆಟ್‌ ಚಿನ್ನದ ಬೆಲೆ

ಇಂದು 1 ಗ್ರಾಂ ಚಿನ್ನಕ್ಕೆ 6,805 ರೂ. ಇದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 54,440 ರೂ. ನೀಡಬೇಕು. 10 ಗ್ರಾಂ ಚಿನ್ನಕ್ಕೆ 68,050 ರೂ ಇದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 6,80,500 ರೂ. ನೀಡಬೇಕು.

24 ಕ್ಯಾರೆಟ್‌ ಚಿನ್ನದ ಬೆಲೆ

24 ಕ್ಯಾರೆಟ್‌ ಚಿನ್ನಕ್ಕೆ 1 ಗ್ರಾಂಗೆ 7,424 ರೂ. ಇದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 59,392 ರೂ. ನೀಡಬೇಕು. ನಿನ್ನೆ 7,304 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 264 ರೂ. ಕಡಿಮೆಯಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 74,240 ನೀಡಬೇಕು. 100 ಗ್ರಾಂ ಚಿನ್ನದ ಬೆಲೆ 7,42,400 ರೂ. ಇದೆ.

ಕರ್ನಾಟಕದಲ್ಲಿ ಚಿನ್ನದ ಬೆಲೆ (10 ಗ್ರಾಂ)

ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 68,050 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 74,240 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.

ಹೊರ ರಾಜ್ಯಗಳ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ (10 ಗ್ರಾಂ)

ಚೆನ್ನೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 68,850 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 75,110 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 68,050 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 74,240 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 68,210 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 74,390 ರೂ. ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 68,050 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 74,240 ರೂ. ಇದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 68,050 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 74,240 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 68,050 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 74,240 ರೂ. ಇದೆ. ವಡೋಧರಾದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 68,110 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 74,290 ರೂ. ಇದೆ.

ಬೆಳ್ಳಿ ದರ

ಬೆಳ್ಳಿ ಬೆಲೆ ಕೊಂಚ ಏರಿಕೆಯಾಗಿದೆ. 1 ಗ್ರಾಂಗೆ 86 ರೂ. 8 ಗ್ರಾಂಗೆ 688 ರೂ. 10 ಗ್ರಾಂಗೆ 860 ರೂ. 100 ಗ್ರಾಂಗೆ 8,600 ರೂ. ಹಾಗೂ 1 ಕಿಲೋಗೆ 86,000 ರೂ. ಬೆಲೆ ನಿಗದಿ ಆಗಿದೆ.

IPL_Entry_Point