Gold Rate Today: ಮಂಗಳವಾರ ಚಿನ್ನದೊಂದಿಗೆ ಬೆಳ್ಳಿ ದರವೂ ಇಳಿಕೆ; ಜುಲೈ 23ರಂದು ದೇಶದಾದ್ಯಂತ ಆಭರಣ ದರ ಹೇಗಿದೆ ಗಮನಿಸಿ
ಆಷಾಢ ಮಾಸ ಆರಂಭವಾಗಿ ಒಂದಿಷ್ಟು ದಿನಗಳು ಕಳೆದಿವೆ. ಈ ಸಮಯದಲ್ಲಿ ಯಾವುದೇ ವಿಶೇಷ ಕಾರ್ಯಕ್ರಮಗಳು ನಡೆಯುವುದಿಲ್ಲ. ಆದರೂ ಚಿನ್ನಾಭರಣ ಖರೀದಿಗೆ ಭರವಿಲ್ಲ. ಕಳೆದ ಕೆಲವು ದಿನಗಳಿಂದ ಏರಿಳಿತ ಕಾಣುತ್ತಿದ್ದ ಚಿನ್ನ, ಬೆಳ್ಳಿ ದರ ಇಂದು (ಜುಲೈ 23) ಇಳಿಕೆಯಾಗಿದೆ. ದೇಶದಾದ್ಯಂತ ಮಂಗಳವಾರ ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ ಗಮನಿಸಿ.

ಬೆಂಗಳೂರು: ಭಾರತದಲ್ಲಿ ಚಿನ್ನಾಭರಣ ಪ್ರಿಯರಿಗೆ ಕೊರತೆ ಇಲ್ಲ. ವಿಶೇಷ ಸಂದರ್ಭ ಇರಲಿ ಇಲ್ಲದಿರಲಿ ಚಿನ್ನ ಖರೀದಿಸುವವರ ಸಂಖ್ಯೆ ಕಡಿಮೆಯಾಗುವುದಿಲ್ಲ. ಆಷಾಢವಾಗಲಿ, ಶ್ರಾವಣವಾಗಲಿ ಆಭರಣ ದರ ಕಡಿಮೆಯಾಯ್ತು ಎಂದು ತಿಳಿದರೆ ಚಿನ್ನದ ಅಂಗಡಿಗೆ ನುಗ್ಗುತ್ತಾರೆ. ಕಳೆದ ಕೆಲವು ದಿನಗಳಿಂದು ಏರುಗತಿಯುಲ್ಲಿ ಸಾಗುತ್ತಿದ್ದ ಆಭರಣ ದರ ಇದೀಗ ಇಳಿಕೆ ಕಾಣುತ್ತಿದೆ. ಜುಲೈ 23 ರಂದು ಚಿನ್ನದೊಂದಿಗೆ ಬೆಳ್ಳಿ ದರವೂ ಇಳಿಕೆಯಾಗಿದ್ದು ದೇಶದಾದ್ಯಂತ ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ ಗಮನಿಸಿ.
22 ಕ್ಯಾರೆಟ್ ಚಿನ್ನದ ಬೆಲೆ
ಇಂದು 1 ಗ್ರಾಂ ಚಿನ್ನಕ್ಕೆ 6,770 ರೂ ಇದೆ. ನಿನ್ನೆ 6,780 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 10 ರೂ ಇಳಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 54,160 ರೂ ನೀಡಬೇಕು. ನಿನ್ನೆ 54,240 ರೂ ಇದ್ದು, ನಿನ್ನೆ ದರಕ್ಕೆ ಹೋಲಿಸಿದರೆ ಇಂದು 80 ರೂ. ಕಡಿಮೆಯಾಗಿದೆ. 10 ಗ್ರಾಂ ಚಿನ್ನಕ್ಕೆ 67,700 ರೂ ಇದೆ. ನಿನ್ನೆ 67,800 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 100 ರೂ. ಕಡಿಮೆಯಾಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 6,77,000 ರೂ. ನೀಡಬೇಕು. ನಿನ್ನೆ 6,78,000 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 1,000 ರೂ. ಇಳಿಕೆಯಾಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ
24 ಕ್ಯಾರೆಟ್ ಚಿನ್ನಕ್ಕೆ 1 ಗ್ರಾಂಗೆ 7,385 ರೂ. ಇದೆ. ನಿನ್ನೆ 7,397 ರೂ. ಇದು ಈ ದರಕ್ಕೆ ಹೋಲಿಸಿದರೆ 12 ರೂ ಇಳಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 59,080 ರೂ. ನೀಡಬೇಕು. ನಿನ್ನೆ 59,176 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 96 ರೂ. ಕಡಿಮೆಯಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 73,850 ನೀಡಬೇಕು. ನಿನ್ನೆ 73,970 ರೂ. ಇದ್ದು, ಈ ದರಕ್ಕೆ ಹೋಲಿಸಿದರೆ 120 ರೂ ಕಡಿಮೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ 7,38,500 ರೂ. ಇದೆ. ನಿನ್ನೆ 7,39,700 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 1,200 ರೂ ಕಡಿಮೆಯಾಗಿದೆ.
ಕರ್ನಾಟಕದಲ್ಲಿ ಚಿನ್ನದ ಬೆಲೆ (1 ಗ್ರಾಂ)
ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 6,770 ರೂ. ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 7,385 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.
ಹೊರ ರಾಜ್ಯಗಳಲ್ಲಿ ಚಿನ್ನದ ದರ (1 ಗ್ರಾಂ)
ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 6,825 ರೂ. 24 ಕ್ಯಾರೆಟ್‌ಗೆ 7,445 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 6,770 ರೂ. 24 ಕ್ಯಾರೆಟ್‌ಗೆ 7,385 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 6,785 ರೂ. 24 ಕ್ಯಾರೆಟ್‌ಗೆ 7,385 ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 6,770 ರೂ. 24 ಕ್ಯಾರೆಟ್‌ಗೆ 7,400 ರೂ. ಇದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 6,770 ರೂ. ಇದ್ದರೆ, 24 ಕ್ಯಾರೆಟ್‌ಗೆ 7,385 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 6,770 ರೂ. 24 ಕ್ಯಾರೆಟ್‌ಗೆ 7,385 ರೂ. ಆಗಿದೆ.
ಬೆಳ್ಳಿ ದರ
ಇಂದು ಬೆಳ್ಳಿ ದರ ತುಸು ಕಡಿಮೆಯಾಗಿದೆ. ಒಂದು ಗ್ರಾಂ ಬೆಳ್ಳಿಗೆ 91.55 ರೂ. ಇದೆ. 8 ಗ್ರಾಂಗೆ 732.40 ರೂ ಇದ್ದರೆ, 10 ಗ್ರಾಂಗೆ 915.50 ರೂ. ಇದೆ. 100 ಗ್ರಾಂಗೆ 9,155 ರೂ. ಹಾಗೂ 1 ಕಿಲೋಗೆ 91,550 ರೂ. ಬೆಲೆ ನಿಗದಿ ಆಗಿದೆ.
