ಕನ್ನಡ ಸುದ್ದಿ  /  Nation And-world  /  Business News Gold Silver Rate For 23rd March 2024 In Bengaluru Mangaluru Mysuru Other States Rsm

Gold Rate: ಚಿನ್ನದ ದರ ಇಳಿಕೆ, ಆದರೂ ನಿರಾಸೆ; ಮಾರ್ಚ್‌ 23ರ ಬೆಳ್ಳಿ, ಬಂಗಾರದ ಬೆಲೆ ಎಷ್ಟಿದೆ ನೋಡಿ

Gold Rate: ಮಾರ್ಚ್‌ 22 ರಂದು ಏರಿಕೆ ಕಂಡಿದ್ದ ಚಿನ್ನ ಇಂದು (ಮಾರ್ಚ್‌ 23) ಇಳಿಕೆ ಕಂಡಿದೆ. ಆದರೆ ಗ್ರಾಂಗೆ 1 ರೂ. ಮಾತ್ರ ಇಳಿದಿದ್ದು ಆಭರಣ ಮಾಡಿಸಬೇಕು, ಚಿನ್ನ ಖರೀದಿಸಬೇಕು ಎಂದುಕೊಂಡವರಿಗೆ ಮತ್ತೆ ನಿರಾಸೆ ಉಂಟಾಗಿದೆ. ಇಂದು ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರ ರಾಜ್ಯಗಳಲ್ಲಿ ಚಿನ್ನದ ಬೆಲೆ ಹೇಗಿದೆ ನೋಡೋಣ.

ಮಾರ್ಚ್‌ 23ರ ಚಿನ್ನ, ಬೆಳ್ಳಿ ಬೆಲೆ
ಮಾರ್ಚ್‌ 23ರ ಚಿನ್ನ, ಬೆಳ್ಳಿ ಬೆಲೆ

ಬೆಂಗಳೂರು: ಶುಭಕಾರ್ಯ, ಕಷ್ಟದ ಸಮಯದಲ್ಲಿ ಅಡವಿಟ್ಟು ಸಾಲ ಪಡೆಯಲು ಚಿನ್ನ ಬಹಳ ಅವಶ್ಯಕ. ಆದರೆ ಚಿನ್ನದ ಬೆಲೆ ಈಗ ಬಡವರಿಗೆ ನಿಲುಕದ ನಕ್ಷತ್ರವಾಗಿದೆ. ಗ್ರಾಂಗೆ 6 ಸಾವಿರಕ್ಕೂ ಹೆಚ್ಚು ಬೆಲೆ ಆಗಿದೆ. ಮಾರ್ಚ್‌ 20 ರಂದು ಏರಿಕೆ ಆಗಿದ್ದ ಚಿನ್ನ, ಮಾರ್ಚ್‌ 21ರಂದು ಸ್ಥಿರತೆ ಕಾಯ್ದುಕೊಂಡಿತ್ತು. ಆದರೆ ಮಾರ್ಚ್‌ 22 ರಂದು ಮತ್ತೆ ಏರಿಕೆ ಆಗಿತ್ತು. ಇಂದು ಚಿನ್ನದ ಬೆಳೆ ಇಳಿದಿದ್ದರೂ ಆಭರಣಪ್ರಿಯರಿಗೆ ಭಾರೀ ನಿರಾಸೆಯುಂಟು ಮಾಡಿದೆ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

22 ಕ್ಯಾರೆಟ್‌ ಚಿನ್ನದ ಬೆಲೆ

ಚಿನ್ನದ ಬೆಲೆ ನಿನ್ನೆಗಿಂತ ಇಂದು 1 ರೂ. ಮಾತ್ರ ಇಳಿದಿದೆ. ಅದರ ಪ್ರಕಾರ ಇಂದು 1 ಗ್ರಾಂ ಚಿನ್ನದ ಬೆಲೆ 6,134 ರೂ ಆಗಿದೆ. ನಿನ್ನೆ ಇದರ ಬೆಲೆ 6,135 ರೂ ಇತ್ತು. 8 ಗ್ರಾಮ ಚಿನ್ನಕ್ಕೆ ಇಂದು 49,072 ರೂ. 10 ಗ್ರಾಂ ಚಿನ್ನಕ್ಕೆ 61,340 ರೂ. 100 ಗ್ರಾಂ ಚಿನ್ನಕ್ಕೆ 6,13,400 ರೂ ಬೆಲೆ ಇದೆ.

24 ಕ್ಯಾರೆಟ್‌ ಚಿನ್ನದ ಬೆಲೆ

24 ಕ್ಯಾರೆಟ್‌ ಚಿನ್ನದ ಬೆಲೆ 1 ಗ್ರಾಂಗೆ 6,692 ರೂ. 8 ಗ್ರಾಂಗೆ 53,536 ರೂ. 10 ಗ್ರಾಂಗೆ 66,920 ರೂ. 100 ಗ್ರಾಂಗೆ 6,69,200 ರೂ. ನಿಗದಿ ಆಗಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಇಂದು, ಗ್ರಾಂಗೆ 61,340 ರೂ ಬೆಲೆ ನಿಗದಿ ಆಗಿದೆ. ನಿನ್ನೆ ಚಿನ್ನದ ಬೆಲೆ 66,920 ರೂ. ಇತ್ತು. ಬೆಂಗಳೂರು ಸೇರಿದಂತೆ ಮೈಸೂರು, ಮಂಗಳೂರು, ಹುಬ್ಬಳ್ಳಿ, ಶಿವಮೊಗ್ಗ, ದಾವಣಗೆರೆ ಹಾಗೂ ಇನ್ನಿತರ ನಗರಗಳಲ್ಲಿ ಚಿನ್ನದ ಬೆಲೆ ಒಂದೇ ಇದ್ದರೂ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.

ಹೊರ ರಾಜ್ಯಗಳಲ್ಲಿ ಚಿನ್ನದ ದರ

ಚೆನ್ನೈನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 22 ಕ್ಯಾರೆಟ್‌ಗೆ 61,990 ರೂ. ಹಾಗೂ 24 ಕ್ಯಾರೆಟ್‌ಗೆ 67,630 ಮುಂಬೈನಲ್ಲಿ 22 ಕ್ಯಾರೆಟ್‌ಗೆ 61,340 ರೂ 24 ಕ್ಯಾರೆಟ್‌ಗೆ 66,920 ರೂ. ದೆಹಲಿಯಲ್ಲಿ 22 ಕ್ಯಾರೆಟ್‌ಗೆ 61,490 ರೂ. 24 ಕ್ಯಾರೆಟ್‌ಗೆ 67,070 ರೂ. ನಿಗದಿ ಆಗಿದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್‌ಗೆ 61,340 24 ಕ್ಯಾರೆಟ್‌ಗೆ 66,920 ರೂ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ಗೆ 61,340 ರೂ. ಹಾಗೂ 24 ಕ್ಯಾರೆಟ್‌ಗೆ 66,920 ರೂ. ಕೇರಳದಲ್ಲಿ 22 ಕ್ಯಾರೆಟ್‌ಗೆ 61,340 ರೂ. 24 ಕ್ಯಾರೆಟ್‌ಗೆ 66,920 ರೂ. ಹಾಗೂ ಪುಣೆಯಲ್ಲಿ 22 ಕ್ಯಾರೆಟ್‌ಗೆ 61,340 ರೂ. ಹಾಗೂ 24 ಕ್ಯಾರೆಟ್‌ಗೆ 66,920 ರೂ. ನಿಗದಿ ಆಗಿದೆ.

ಇಂದಿನ ಬೆಳ್ಳಿ ದರ

ಬೆಳ್ಳಿ ನಿನ್ನೆ ( ಮಾ 22) ಕೂಡಾ ಏರಿಕೆ ಆಗಿತ್ತು. ಇಂದು ಗ್ರಾಂಗೆ 10 ಪೈಸೆ ಏರಿಕೆ ಆಗಿದೆ. ಅದರ ಪ್ರಕಾರ ಇಂದು ಗ್ರಾಂಗೆ 76.20 ರೂ. 8 ಗ್ರಾಂಗೆ 609.60 ರೂ. 10 ಗ್ರಾಂಗೆ 762 ರೂ. 100 ಗ್ರಾಂಗೆ 7,620 ರೂ. 1 ಕಿಲೋಗೆ 76,200 ರೂ. ಬೆಲೆ ನಿಗದಿ ಆಗಿದೆ.

IPL_Entry_Point