Gold Rate Today: ಆಭರಣ ಪ್ರಿಯರಿಗೆ ಸಂತಸದ ಸುದ್ದಿ, ಬಜೆಟ್‌ ಬೆನ್ನಲ್ಲೇ ಭಾರಿ ಇಳಿಕೆ ಕಂಡ ಬಂಗಾರದ ದರ; ಬೆಳ್ಳಿ ಬೆಲೆಯೂ ಕುಸಿತ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Rate Today: ಆಭರಣ ಪ್ರಿಯರಿಗೆ ಸಂತಸದ ಸುದ್ದಿ, ಬಜೆಟ್‌ ಬೆನ್ನಲ್ಲೇ ಭಾರಿ ಇಳಿಕೆ ಕಂಡ ಬಂಗಾರದ ದರ; ಬೆಳ್ಳಿ ಬೆಲೆಯೂ ಕುಸಿತ

Gold Rate Today: ಆಭರಣ ಪ್ರಿಯರಿಗೆ ಸಂತಸದ ಸುದ್ದಿ, ಬಜೆಟ್‌ ಬೆನ್ನಲ್ಲೇ ಭಾರಿ ಇಳಿಕೆ ಕಂಡ ಬಂಗಾರದ ದರ; ಬೆಳ್ಳಿ ಬೆಲೆಯೂ ಕುಸಿತ

2024–25ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಚಿನ್ನ–ಬೆಳ್ಳಿ ಮೇಲಿನ ಆಮದು ಸುಂಕ ವಿನಾಯ್ತಿ ಘೋಷಣೆ ಬೆನ್ನಲ್ಲೇ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಭಾರಿ ಇಳಿಕೆಯಾಗಿದೆ. ಒಂದು 10 ಗ್ರಾಂ ಚಿನ್ನದ ಮೇಲೆ 2750 ರೂ ಇಳಿಕೆಯಾದ್ರೆ, ಬೆಳ್ಳಿ ಕೆಜಿ ಮೇಲೆ 3550 ರೂ ಕಡಿಮೆಯಾಗಿದೆ. ದೇಶದಾದ್ಯಂತ ಇಂದು ಚಿನ್ನ, ಬೆಳಿ ದರ ಎಷ್ಟಾಗಿದೆ ಗಮನಿಸಿ.

ಆಭರಣ ಪ್ರಿಯರಿಗೆ ಸಂತಸದ ಸುದ್ದಿ, ಬಜೆಟ್‌ ಬೆನ್ನಲ್ಲೇ ಭಾರಿ ಇಳಿಕೆ ಕಂಡ ಬಂಗಾರದ ದರ; ಬೆಳ್ಳಿ ಬೆಲೆಯೂ ಕುಸಿತ
ಆಭರಣ ಪ್ರಿಯರಿಗೆ ಸಂತಸದ ಸುದ್ದಿ, ಬಜೆಟ್‌ ಬೆನ್ನಲ್ಲೇ ಭಾರಿ ಇಳಿಕೆ ಕಂಡ ಬಂಗಾರದ ದರ; ಬೆಳ್ಳಿ ಬೆಲೆಯೂ ಕುಸಿತ (PTI)

ಬೆಂಗಳೂರು: ಆಭರಣ ಪ್ರಿಯರಿಗೆ ಇಲ್ಲಿದೆ ಗುಡ್‌ನ್ಯೂಸ್‌. ಕೇಂದ್ರ ಬಜೆಟ್‌ ಫೋಷಣೆಯಾದ ಬೆನ್ನಲ್ಲೇ ಆಭರಣ ದರ ಕುಸಿದಿದೆ. ಈ ಬಾರಿಯ ಬಜೆಟ್‌ನಲ್ಲಿ ಚಿನ್ನ ಹಾಗೂ ಬೆಳ್ಳಿ ಮೇಲಿನ ಆಮದು ಸುಂಕದ ಮೇಲೆ ವಿನಾಯ್ತಿ ಘೋಷಿಸಲಾಗಿದೆ. ಈ ಕಾರಣದಿಂದ ಒಮ್ಮಿಂದೊಮ್ಮೆಗೆ ಆಭರಣ ಬೆಲೆ ಕುಸಿತ ಕಂಡಿದೆ. ಚಿನ್ನದೊಂದಿಗೆ ಒಂದು ಬೆಳ್ಳಿ ದರವೂ ಇಳಿಕೆಯಾಗಿದ್ದು ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ ಗಮನಿಸಿ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

22 ಕ್ಯಾರೆಟ್‌ ಚಿನ್ನದ ಬೆಲೆ

ಇಂದು 1 ಗ್ರಾಂ ಚಿನ್ನಕ್ಕೆ 6,495 ರೂ ಇದೆ. ನಿನ್ನೆ 6,770 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 275 ರೂ ಇಳಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 51,960 ರೂ ನೀಡಬೇಕು. ನಿನ್ನೆ 54,160 ರೂ ಇದ್ದು, ನಿನ್ನೆ ದರಕ್ಕೆ ಹೋಲಿಸಿದರೆ ಇಂದು 2,200 ರೂ. ಕಡಿಮೆಯಾಗಿದೆ. 10 ಗ್ರಾಂ ಚಿನ್ನಕ್ಕೆ 64,950 ರೂ ಇದೆ. ನಿನ್ನೆ 67,700 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 2,750 ರೂ. ಕಡಿಮೆಯಾಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 6,49,500 ರೂ. ನೀಡಬೇಕು. ನಿನ್ನೆ 6,77,000 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 27,500 ರೂ. ಇಳಿಕೆಯಾಗಿದೆ.

24 ಕ್ಯಾರೆಟ್‌ ಚಿನ್ನದ ಬೆಲೆ

24 ಕ್ಯಾರೆಟ್‌ ಚಿನ್ನಕ್ಕೆ 1 ಗ್ರಾಂಗೆ 7,086 ರೂ. ಇದೆ. ನಿನ್ನೆ 7,385 ರೂ. ಇದು ಈ ದರಕ್ಕೆ ಹೋಲಿಸಿದರೆ 299 ರೂ ಇಳಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 56,688 ರೂ. ನೀಡಬೇಕು. ನಿನ್ನೆ 59,080 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 2392 ರೂ. ಕಡಿಮೆಯಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 70,860 ನೀಡಬೇಕು. ನಿನ್ನೆ 73,850 ರೂ. ಇದ್ದು, ಈ ದರಕ್ಕೆ ಹೋಲಿಸಿದರೆ 2990 ರೂ ಕಡಿಮೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ 7,08,600 ರೂ. ಇದೆ. ನಿನ್ನೆ 7,38,500 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 29,900 ರೂ ಕಡಿಮೆಯಾಗಿದೆ.

ಕರ್ನಾಟಕದಲ್ಲಿ ಚಿನ್ನದ ಬೆಲೆ (1 ಗ್ರಾಂ)

ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 6,495 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 7,086 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.

ಹೊರ ರಾಜ್ಯಗಳಲ್ಲಿ ಚಿನ್ನದ ದರ (1 ಗ್ರಾಂ)

ಚೆನ್ನೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 6,550 ರೂ. 24 ಕ್ಯಾರೆಟ್‌ಗೆ 7,146 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 6,495 ರೂ. 24 ಕ್ಯಾರೆಟ್‌ಗೆ 7,086 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 6,510 ರೂ. 24 ಕ್ಯಾರೆಟ್‌ಗೆ 7,101 ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 6,495 ರೂ. 24 ಕ್ಯಾರೆಟ್‌ಗೆ 7,086 ರೂ. ಇದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 6,495 ರೂ. ಇದ್ದರೆ, 24 ಕ್ಯಾರೆಟ್‌ಗೆ 7,086 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 6,495 ರೂ. 24 ಕ್ಯಾರೆಟ್‌ಗೆ 7,086 ರೂ. ಆಗಿದೆ.

ಬೆಳ್ಳಿ ದರ

ಇಂದು ಬೆಳ್ಳಿ ದರವೂ ಕಡಿಮೆಯಾಗಿದೆ. ಒಂದು ಗ್ರಾಂ ಬೆಳ್ಳಿಗೆ 88 ರೂ. ಇದೆ. 8 ಗ್ರಾಂಗೆ 704 ರೂ ಇದ್ದರೆ, 10 ಗ್ರಾಂಗೆ 880 ರೂ. ಇದೆ. 100 ಗ್ರಾಂಗೆ 8,800 ರೂ. ಹಾಗೂ 1 ಕಿಲೋಗೆ 88,000 ರೂ. ಬೆಲೆ ನಿಗದಿ ಆಗಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.