Gold Rate Today: ಶುಕ್ರವಾರ ಕಡಿಮೆಯಾಯ್ತು ಚಿನ್ನದ ದರ, 10 ಗ್ರಾಂ ಚಿನ್ನಕ್ಕೆ 1000 ರೂ ಇಳಿಕೆ, ಬೆಳ್ಳಿ ತುಸು ಏರಿಕೆ-business news gold silver rate for 24th may 2024 in bengaluru mangaluru mysuru other states rst ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Rate Today: ಶುಕ್ರವಾರ ಕಡಿಮೆಯಾಯ್ತು ಚಿನ್ನದ ದರ, 10 ಗ್ರಾಂ ಚಿನ್ನಕ್ಕೆ 1000 ರೂ ಇಳಿಕೆ, ಬೆಳ್ಳಿ ತುಸು ಏರಿಕೆ

Gold Rate Today: ಶುಕ್ರವಾರ ಕಡಿಮೆಯಾಯ್ತು ಚಿನ್ನದ ದರ, 10 ಗ್ರಾಂ ಚಿನ್ನಕ್ಕೆ 1000 ರೂ ಇಳಿಕೆ, ಬೆಳ್ಳಿ ತುಸು ಏರಿಕೆ

ಚಿನ್ನದ ದರ ಕಡಿಮೆ ಆಗುವುದೇ ಇಲ್ವಾ ಎಂದು ನಿಮ್ಮಲ್ಲೇ ನೀವು ಪ್ರಶ್ನೆ ಮಾಡಿಕೊಂಡಿದ್ದರೆ ಇಂದು (ಮೇ 24) ಆಗುತ್ತೆ ಎಂಬ ಉತ್ತರ ನಿಮಗೆ ದಕ್ಕಬಹುದು. ಅದಕ್ಕೆ ಕಾರಣ ಶುಕ್ರವಾರ ಚಿನ್ನದ ದರ ಭಾರಿ ಕಡಿಮೆಯಾಗಿದೆ. ಅಪರೂಪಕ್ಕೆ 10 ಗ್ರಾಂ ಚಿನ್ನದ ಮೇಲೆ 1000 ರೂ ಕಡಿಮೆಯಾಗಿದೆ. ಬೆಳ್ಳಿ ದರ ತುಸು ಇಳಿಕೆಯಾಗಿದೆ.

ಶುಕ್ರವಾರ ಕಡಿಮೆಯಾಯ್ತು ಚಿನ್ನದ ದರ, 10 ಗ್ರಾಂ ಚಿನ್ನಕ್ಕೆ 1000 ರೂ ಇಳಿಕೆ, ಬೆಳ್ಳಿ ತುಸು ಏರಿಕೆ
ಶುಕ್ರವಾರ ಕಡಿಮೆಯಾಯ್ತು ಚಿನ್ನದ ದರ, 10 ಗ್ರಾಂ ಚಿನ್ನಕ್ಕೆ 1000 ರೂ ಇಳಿಕೆ, ಬೆಳ್ಳಿ ತುಸು ಏರಿಕೆ

ಬೆಂಗಳೂರು: ಚಿನ್ನದ ದರ ಯಾವಾಗ ಕಡಿಮೆಯಾಗಬಹುದು ಎಂಬ ನಿರೀಕ್ಷೆಯಲ್ಲೇ ನೀವಿದ್ದರೆ ಇಂದು ನಿಮಗೆ ಶುಭ ಸಮಾಚಾರ ಸಿಗಬಹುದು. ಯಾಕೆಂದರೆ ಕಳೆದ ಒಂದಿಷ್ಟು ದಿನಗಳಿಗೆ ಹೋಲಿಸಿದರೆ ಇಂದು ಚಿನ್ನದ ದರ ತುಸು ಹೆಚ್ಚೇ ಕಡಿಮೆಯಾಗಿದೆ. ಚಿನ್ನ ಖರೀದಿಸುವ ಯೋಚನೆ ನಿಮಗಿದ್ದರೆ ಇಂದು ನೀವು ಆಭರಣ ಮಳಿಗೆಗೆ ಭೇಟಿ ನೀಡಬಹುದು. ಭಾರತದ ಷೇರುಪೇಟೆ ಸಾರ್ವಕಾಲಿಕ ಎತ್ತರಕ್ಕೆ ತಲುಪಿದ ಹಿನ್ನೆಲೆ ಚಿನ್ನದ ದರ ಇಳಿಕೆಯಾಗಿರಬಹುದು. ಕಾರಣ ಏನೇ ಇರಲಿ, ಚಿನ್ನದ ದರ ಕಡಿಮೆಯಾಯ್ತು ಎಂದರೆ ಭಾರತೀಯರಿಗೆ ಎಲ್ಲಿಲ್ಲದ ಉತ್ಸಾಹ ಮೂಡುವುದು ಖಂಡಿತ. ಇದರೊಂದಿಗೆ ಇಂದು ಬೆಳ್ಳಿ ದರ ತುಸು ಹೆಚ್ಚಾಗಿದೆ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

22 ಕ್ಯಾರೆಟ್‌ ಚಿನ್ನದ ಬೆಲೆ

ಇಂದು 1 ಗ್ರಾಂ ಚಿನ್ನಕ್ಕೆ 6,730 ರೂ. ಇದೆ. ನಿನ್ನೆ 6,830 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 100 ರೂ ಕಡಿಮೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 53,840 ರೂ. ನೀಡಬೇಕು. ನಿನ್ನೆ 54,640 ರೂ ಇದ್ದು, ನಿನ್ನೆ ದರಕ್ಕೆ ಹೋಲಿಸಿದರೆ ಇಂದು 800 ರೂ. ಕಡಿಮೆಯಾಗಿದೆ. 10 ಗ್ರಾಂ ಚಿನ್ನಕ್ಕೆ 67,300 ರೂ ಇದೆ. ನಿನ್ನೆ 68,300 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 1000 ರೂ. ಕಡಿಮೆಯಾಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 6,73,000 ರೂ. ನೀಡಬೇಕು. ನಿನ್ನೆ 6,83,000 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 10,000 ರೂ. ಇಳಿಕೆಯಾಗಿದೆ.

24 ಕ್ಯಾರೆಟ್‌ ಚಿನ್ನದ ಬೆಲೆ

24 ಕ್ಯಾರೆಟ್‌ ಚಿನ್ನಕ್ಕೆ 1 ಗ್ರಾಂಗೆ 7,342 ರೂ. ಇದೆ. ನಿನ್ನೆ 7,415 ರೂ. ಇದು ಈ ದರಕ್ಕೆ ಹೋಲಿಸಿದರೆ 109 ರೂ ಕಡಿಮೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 58,736 ರೂ. ನೀಡಬೇಕು. ನಿನ್ನೆ 59,608 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 872 ರೂ. ಕಡಿಮೆಯಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 73,420 ನೀಡಬೇಕು. ನಿನ್ನೆ 74,510 ರೂ. ಇದ್ದು, ಈ ದರಕ್ಕೆ ಹೋಲಿಸಿದರೆ 1,090 ರೂ ಕಡಿಮೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ 7,34,200 ರೂ. ಇದೆ. ನಿನ್ನೆ 7,45,100 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 10,900 ರೂ ಕಡಿಮೆಯಾಗಿದೆ.

ಕರ್ನಾಟಕದಲ್ಲಿ ಚಿನ್ನದ ಬೆಲೆ (1 ಗ್ರಾಂ)

ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 6,730 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 7,342 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.

ಹೊರ ರಾಜ್ಯಗಳಲ್ಲಿ ಚಿನ್ನದ ದರ (1 ಗ್ರಾಂ)

ಚೆನ್ನೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 6,750 ರೂ. 24 ಕ್ಯಾರೆಟ್‌ಗೆ 7,364 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 6,730 ರೂ. 24 ಕ್ಯಾರೆಟ್‌ಗೆ 7,342 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 6,745 ರೂ. 24 ಕ್ಯಾರೆಟ್‌ಗೆ 7,357 ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 6,730 ರೂ. 24 ಕ್ಯಾರೆಟ್‌ಗೆ 7,342 ರೂ. ಇದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 6,730 ರೂ. ಇದ್ದರೆ, 24 ಕ್ಯಾರೆಟ್‌ಗೆ 7,342 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 6,730 ರೂ. 24 ಕ್ಯಾರೆಟ್‌ಗೆ 7,342 ರೂ. ಆಗಿದೆ.

ಬೆಳ್ಳಿ ದರ

ಇಂದು ಬೆಳ್ಳಿ ದರವೂ ಏರಿಕೆಯಾಗಿದೆ. ಒಂದು ಗ್ರಾಂ ಬೆಳ್ಳಿಗೆ 95.60 ರೂ. ಇದೆ. 8 ಗ್ರಾಂಗೆ 764.80 ರೂ ಇದ್ದರೆ, 10 ಗ್ರಾಂಗೆ 956 ರೂ. ಇದೆ. 100 ಗ್ರಾಂಗೆ 9,560 ರೂ. ಹಾಗೂ 1 ಕಿಲೋಗೆ 95,600 ರೂ. ಬೆಲೆ ನಿಗದಿ ಆಗಿದೆ.

mysore-dasara_Entry_Point
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.