Gold Rate Today: ಗುರುವಾರವೂ ತುಸು ಇಳಿಕೆಯಾಯ್ತು ಚಿನ್ನದ ದರ; ಬೆಳ್ಳಿ ಕೊಂಚ ಏರಿಕೆ; ಜುಲೈ 25ರ ಆಭರಣ ಬೆಲೆ ಗಮನಿಸಿ
2024ರ ಕೇಂದ್ರ ಬಜೆಟ್ನಲ್ಲಿ ಆಭರಣಗಳ ಮೇಲಿನ ಆಮದು ಸುಂಕ ತೆರಿಗೆ ವಿನಾಯ್ತಿ ಘೋಷಿಸಿದ ಬೆನ್ನಲ್ಲೆ ಚಿನ್ನದ ದರದಲ್ಲಿ ಭಾರಿ ಇಳಿಕೆಯಾಗಬಹುದು ಎಂದು ಜನ ನಿರೀಕ್ಷೆ ಮಾಡಿದ್ದರು. ಅವರ ನಿರೀಕ್ಷೆಯಂತೆ ನಿನ್ನೆ ಭಾರಿ ಇಳಿಕೆ ಕಂಡಿದ್ದ ಚಿನ್ನದ ದರ ಇಂದು ತುಸು ಕಡಿಮೆಯಾಗಿದೆ. ಆದರೆ ಬೆಳ್ಳಿ ದರ ಏರಿಕೆಯಾಗಿದೆ. ದೇಶದಾದ್ಯಂತ ಜುಲೈ 25 ರಂದು ಆಭರಣ ಬೆಲೆ ಎಷ್ಟಾಗಿದೆ ಗಮನಿಸಿ.
ಬೆಂಗಳೂರು: 3ನೇ ಬಾರಿಗೆ ದೇಶದ ಅಧಿಕಾರ ವಹಿಸಿಕೊಂಡ ಪ್ರಧಾನಿ ಮೋದಿ ಸರ್ಕಾರ ಮೊದಲ ಬಜೆಟ್ ಮೊನ್ನೆಯಷ್ಟೇ ಮಂಡನೆಯಾಗಿತ್ತು. ಇದರಲ್ಲಿ ಆಭರಣಗಳ ಮೇಲಿನ ಆಮದು ಸುಂಕ ತೆರಿಗೆಯ ಮೇಲೆ ವಿನಾಯ್ತಿ ಘೋಷಿಸಲಾಗಿತ್ತು. ಇದರಿಂದ ಆಭರಣ ಪ್ರಿಯರು ಸಂತಸ ಪಟ್ಟಿದ್ದರು. ತೆರಿಗೆ ವಿನಾಯ್ತಿ ಬೆನ್ನಲ್ಲೇ ನಿನ್ನೆ (ಜುಲೈ 24) ಚಿನ್ನ ಹಾಗೂ ಬೆಳ್ಳಿ ದರ ಕಡಿಮೆಯಾಗಿತ್ತು. ಆದರೆ ಇಂದು 1ಗ್ರಾಂ ಚಿನ್ನದ ಮೇಲೆ ಕೇವಲ 1 ರೂ ಕಡಿಮೆಯಾಗಿದೆ. ಬೆಳ್ಳಿ ದರ ಏರಿಕೆಯಾಗಿದೆ. ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಒಂದು ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ ಗಮನಿಸಿ.
22 ಕ್ಯಾರೆಟ್ ಚಿನ್ನದ ಬೆಲೆ
ಇಂದು 1 ಗ್ರಾಂ ಚಿನ್ನಕ್ಕೆ 6,494 ರೂ ಇದೆ. ನಿನ್ನೆ 6,495 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 1 ರೂ ಇಳಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 51,952 ರೂ ನೀಡಬೇಕು. ನಿನ್ನೆ 51,960 ರೂ ಇದ್ದು, ನಿನ್ನೆ ದರಕ್ಕೆ ಹೋಲಿಸಿದರೆ ಇಂದು 8 ರೂ. ಕಡಿಮೆಯಾಗಿದೆ. 10 ಗ್ರಾಂ ಚಿನ್ನಕ್ಕೆ 64,940 ರೂ ಇದೆ. ನಿನ್ನೆ 64,950 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 10 ರೂ. ಕಡಿಮೆಯಾಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 6,49,400 ರೂ. ನೀಡಬೇಕು. ನಿನ್ನೆ 6,49,500 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 100 ರೂ. ಇಳಿಕೆಯಾಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ
24 ಕ್ಯಾರೆಟ್ ಚಿನ್ನಕ್ಕೆ 1 ಗ್ರಾಂಗೆ 7,085 ರೂ. ಇದೆ. ನಿನ್ನೆ 7,086 ರೂ. ಇದು ಈ ದರಕ್ಕೆ ಹೋಲಿಸಿದರೆ 1 ರೂ ಇಳಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 56,680 ರೂ. ನೀಡಬೇಕು. ನಿನ್ನೆ 56,688 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 8 ರೂ. ಕಡಿಮೆಯಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 70,850 ನೀಡಬೇಕು. ನಿನ್ನೆ 70,860 ರೂ. ಇದ್ದು, ಈ ದರಕ್ಕೆ ಹೋಲಿಸಿದರೆ 10 ರೂ ಕಡಿಮೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ 7,08,500 ರೂ. ಇದೆ. ನಿನ್ನೆ 7,08,600 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 100 ರೂ ಕಡಿಮೆಯಾಗಿದೆ.
ಕರ್ನಾಟಕದಲ್ಲಿ ಚಿನ್ನದ ಬೆಲೆ (1 ಗ್ರಾಂ)
ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್ಗೆ 6,494 ರೂ. ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 7,085 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.
ಹೊರ ರಾಜ್ಯಗಳಲ್ಲಿ ಚಿನ್ನದ ದರ (1 ಗ್ರಾಂ)
ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 6,489 ರೂ. 24 ಕ್ಯಾರೆಟ್ಗೆ 7,079 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 6,494 ರೂ. 24 ಕ್ಯಾರೆಟ್ಗೆ 7,085 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 6,509 ರೂ. 24 ಕ್ಯಾರೆಟ್ಗೆ 7,100 ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 6,494 ರೂ. 24 ಕ್ಯಾರೆಟ್ಗೆ 7,085 ರೂ. ಇದೆ. ಹೈದರಾಬಾದ್ನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 6,494 ರೂ. ಇದ್ದರೆ, 24 ಕ್ಯಾರೆಟ್ಗೆ 7,085 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 6,494 ರೂ. 24 ಕ್ಯಾರೆಟ್ಗೆ 7,085 ರೂ. ಆಗಿದೆ.
ಬೆಳ್ಳಿ ದರ
ಇಂದು ಬೆಳ್ಳಿ ದರ ತುಸು ಏರಿಕೆಯಾಗಿದೆ. ಒಂದು ಗ್ರಾಂ ಬೆಳ್ಳಿಗೆ 88.85 ರೂ. ಇದೆ. 8 ಗ್ರಾಂಗೆ 710.80 ರೂ ಇದ್ದರೆ, 10 ಗ್ರಾಂಗೆ 888.50 ರೂ. ಇದೆ. 100 ಗ್ರಾಂಗೆ 8,885 ರೂ. ಹಾಗೂ 1 ಕಿಲೋಗೆ 88,850 ರೂ. ಬೆಲೆ ನಿಗದಿ ಆಗಿದೆ.