ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Rate Today: ಶನಿವಾರ ಚಿನ್ನದೊಂದಿಗೆ ಬೆಳ್ಳಿ ದರವೂ ಇಳಿಕೆ; ಕರ್ನಾಟಕದಲ್ಲಿಂದು ಆಭರಣ ಬೆಲೆ ಎಷ್ಟಿದೆ ಗಮನಿಸಿ

Gold Rate Today: ಶನಿವಾರ ಚಿನ್ನದೊಂದಿಗೆ ಬೆಳ್ಳಿ ದರವೂ ಇಳಿಕೆ; ಕರ್ನಾಟಕದಲ್ಲಿಂದು ಆಭರಣ ಬೆಲೆ ಎಷ್ಟಿದೆ ಗಮನಿಸಿ

ಆಭರಣ ಪ್ರಿಯರಿಗೆ ಇಲ್ಲಿದೆ ಭರ್ಜರಿ ಸುದ್ದಿ. ಶನಿವಾರ ಚಿನ್ನ ಮಾತ್ರವಲ್ಲ ಬೆಳ್ಳಿ ದರವೂ ಕಡಿಮೆಯಾಗಿದೆ. ಚಿನ್ನ, ಬೆಳ್ಳಿ ಖರೀದಿ ಮಾಡಬೇಕು ಎಂದು ನೀವು ಕಾಯುತ್ತಿದ್ದರೆ ಇಂದು ಯಾವುದೇ ಗೊಂದಲ ಇಲ್ಲದೇ ಆಭರಣ ಮಳಿಗೆಗೆ ಭೇಟಿ ನೀಡಬಹುದು. ಕರ್ನಾಟಕ ಸೇರಿದಂತೆ ದೇಶದಲ್ಲಿ ಇಂದು (ಮೇ 25) ಚಿನ್ನದ ದರ ಎಷ್ಟಿದೆ ಗಮನಿಸಿ.

ಶನಿವಾರ ಚಿನ್ನದೊಂದಿಗೆ ಬೆಳ್ಳಿ ದರವೂ ಇಳಿಕೆ; ಕರ್ನಾಟಕದಲ್ಲಿಂದು ಆಭರಣ ಬೆಲೆ ಎಷ್ಟಿದೆ ಗಮನಿಸಿ
ಶನಿವಾರ ಚಿನ್ನದೊಂದಿಗೆ ಬೆಳ್ಳಿ ದರವೂ ಇಳಿಕೆ; ಕರ್ನಾಟಕದಲ್ಲಿಂದು ಆಭರಣ ಬೆಲೆ ಎಷ್ಟಿದೆ ಗಮನಿಸಿ

ಬೆಂಗಳೂರು: ಭಾರತದಲ್ಲಿ ಚಿನ್ನದ ದರ ಕಡಿಮೆಯಾಯ್ತ ಎಂದರೆ ಆಭರಣ ಮಳಿಗೆಗಳು ತುಂಬಿ ತುಳುಕುತ್ತವೆ. ಭಾರತೀಯರು ಅಷ್ಟೊಂದು ಆಭರಣ ಪ್ರಿಯರು. ಆದರೆ ಇತ್ತೀಚಿನ ವರ್ಷಗಳಲ್ಲಿ ಚಿನ್ನದ ದರ ಏರಿಕೆಯಾಗುತ್ತಲೇ ಇದ್ದು, ಭಾರತೀಯರಿಗೆ ಭಾರಿ ಬೇಸರ ಉಂಟು ಮಾಡಿದೆ. ಮೇ ತಿಂಗಳಲ್ಲೂ ಬಹುತೇಕ ದಿನ ಚಿನ್ನ, ಬೆಳ್ಳಿ ದರ ಏರುಮುಖವಾಗಿತ್ತು. ಆದರೆ ಕಳೆದ ಎರಡು ದಿನಗಳಿಂದ ಚಿನ್ನದ ದರ ಇಳಿಕೆಯಾಗುತ್ತಿದೆ. ನಿನ್ನೆ (ಮೇ 24) 10 ಗ್ರಾಂ ಚಿನ್ನದ ಮೇಲೆ 1000 ರೂ ಇಳಿಕೆಯಾಗಿದ್ದರೆ ಇಂದು (ಮೇ 25) 900 ರೂ ಇಳಿಕೆಯಾಗಿದೆ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಟ್ರೆಂಡಿಂಗ್​ ಸುದ್ದಿ

22 ಕ್ಯಾರೆಟ್‌ ಚಿನ್ನದ ಬೆಲೆ

ಇಂದು 1 ಗ್ರಾಂ ಚಿನ್ನಕ್ಕೆ 6,640. ಇದೆ. ನಿನ್ನೆ 6,730 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 90 ರೂ ಕಡಿಮೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 53,120. ನೀಡಬೇಕು. ನಿನ್ನೆ 53,840 ರೂ ಇದ್ದು, ನಿನ್ನೆ ದರಕ್ಕೆ ಹೋಲಿಸಿದರೆ ಇಂದು 720 ರೂ. ಕಡಿಮೆಯಾಗಿದೆ. 10 ಗ್ರಾಂ ಚಿನ್ನಕ್ಕೆ 66,400 ರೂ ಇದೆ. ನಿನ್ನೆ 67,300 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 900 ರೂ. ಕಡಿಮೆಯಾಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 6,64,000 ರೂ. ನೀಡಬೇಕು. ನಿನ್ನೆ 6,73,000 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 9,000 ರೂ. ಇಳಿಕೆಯಾಗಿದೆ.

24 ಕ್ಯಾರೆಟ್‌ ಚಿನ್ನದ ಬೆಲೆ

24 ಕ್ಯಾರೆಟ್‌ ಚಿನ್ನಕ್ಕೆ 1 ಗ್ರಾಂಗೆ 7,244 ರೂ. ಇದೆ. ನಿನ್ನೆ 7,342 ರೂ. ಇದು ಈ ದರಕ್ಕೆ ಹೋಲಿಸಿದರೆ 98 ರೂ ಕಡಿಮೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 57,952 ರೂ. ನೀಡಬೇಕು. ನಿನ್ನೆ 58,736 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 784 ರೂ. ಕಡಿಮೆಯಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 72,440 ನೀಡಬೇಕು. ನಿನ್ನೆ 73,420 ರೂ. ಇದ್ದು, ಈ ದರಕ್ಕೆ ಹೋಲಿಸಿದರೆ 980 ರೂ ಕಡಿಮೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ 7,24,400 ರೂ. ಇದೆ. ನಿನ್ನೆ 7,34,200 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 9,800 ರೂ ಕಡಿಮೆಯಾಗಿದೆ.

ಕರ್ನಾಟಕದಲ್ಲಿ ಚಿನ್ನದ ಬೆಲೆ (1 ಗ್ರಾಂ)

ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 6,640 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 7,244 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.

ಹೊರ ರಾಜ್ಯಗಳಲ್ಲಿ ಚಿನ್ನದ ದರ (1 ಗ್ರಾಂ)

ಚೆನ್ನೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 6,650 ರೂ. 24 ಕ್ಯಾರೆಟ್‌ಗೆ 7,255 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 6,640 ರೂ. 24 ಕ್ಯಾರೆಟ್‌ಗೆ 7,244 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 6,655 ರೂ. 24 ಕ್ಯಾರೆಟ್‌ಗೆ 7,259 ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 6,640 ರೂ. 24 ಕ್ಯಾರೆಟ್‌ಗೆ 7,244 ರೂ. ಇದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 6,640 ರೂ. ಇದ್ದರೆ, 24 ಕ್ಯಾರೆಟ್‌ಗೆ 7,244 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 6,640 ರೂ. 24 ಕ್ಯಾರೆಟ್‌ಗೆ 7,244 ರೂ. ಆಗಿದೆ.

ಬೆಳ್ಳಿ ದರ

ಇಂದು ಬೆಳ್ಳಿ ದರವೂ ಇಳಿಕೆಯಾಗಿದೆ. ಒಂದು ಗ್ರಾಂ ಬೆಳ್ಳಿಗೆ 92.50 ರೂ. ಇದೆ. 8 ಗ್ರಾಂಗೆ 740 ರೂ ಇದ್ದರೆ, 10 ಗ್ರಾಂಗೆ 925 ರೂ. ಇದೆ. 100 ಗ್ರಾಂಗೆ 9,250 ರೂ. ಹಾಗೂ 1 ಕಿಲೋಗೆ 92,500 ರೂ. ಬೆಲೆ ನಿಗದಿ ಆಗಿದೆ.

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024