Gold Rate: ಚಿನ್ನದ ಬೆಲೆ ತುಸು ಇಳಿಕೆ, ಏರಿಕೆ ಆಯ್ತು ಬೆಳ್ಳಿ; ವಿವಿಧ ಕಡೆಗಳಲ್ಲಿ ಬಂಗಾರದ ಬೆಲೆ ಹೀಗಿದೆ ನೋಡಿ
Business News: ಸೋಮವಾರ ಸ್ಥಿರವಾಗಿದ್ದ ಚಿನ್ನದ ಬೆಲೆ ಮಂಗಳವಾರ ಸ್ವಲ್ಪ ಕಡಿಮೆ ಆಗಿದೆ. ಇಳಿದಿರುವುದು 1 ರೂ ಕಡಿಮೆ ಆದರೂ. ಹೆಚ್ಚಿನ ಮೌಲ್ಯದ ಚಿನ್ನ ಕೊಂಡುಕೊಳ್ಳುವವರಿಗೆ ಸ್ವಲ್ಪ ಮಟ್ಟಿಗೆ ಸಮಾಧಾನ ಎನಿಸಿದೆ. ಇಂದು ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧ ನಗರಗಳು ಹಾಗೂ ಹೊರ ರಾಜ್ಯಗಳಲ್ಲಿ ಚಿನ್ನ, ಬೆಳ್ಳಿಯ ಬೆಲೆ ಹೇಗಿದೆ ನೋಡೋಣ.
ಬೆಂಗಳೂರು: ಚಿನ್ನ ಕೊಂಡುಕೊಳ್ಳಬೇಕು, ಆಭರಣ ಮಾಡಿಸಬೇಕು ಎಂದುಕೊಂಡವರಿಗೆ ಚಿನ್ನದ ಬೆಲೆ ಏರಿಕೆ ಶಾಕ್ ನೀಡಿದೆ. ಕೆಲವು ದಿನಗಳ ಹಿಂದಷ್ಟೇ 5,700 ರೂ ಇದ್ದ ಚಿನ್ನದ ಬೆಲೆ ಈಗ ಏಕಾಏಕಿ ಏರಿಕೆ ಆಗಿದೆ. ಚಿನ್ನದ ದರ ಕಡಿಮೆ ಆದರೂ 5 ಅಥವಾ 10 ರೂಪಾಯಿ ಅಷ್ಟೇ. ಜೊತೆಗೆ ಬೆಳ್ಳಿ ದರದಲ್ಲೂ ವ್ಯತ್ಯಾಸವಾಗುತ್ತಿದೆ. ಮದುವೆ ಮಾಡುವವರು ಚಿನ್ನದ ಬೆಲೆ ಏರಿಕೆಯಲ್ಲೂ ವಿಧಿ ಇಲ್ಲದೆ ಆಭರಣಗಳನ್ನು ಕೊಂಡುಕೊಳ್ಳುತ್ತಿದ್ದಾರೆ.
ನಿನ್ನೆಗಿಂತ ಇಂದು ಚಿನ್ನದ ಬೆಲೆ ಗ್ರಾಂಗೆ 1 ರೂ ಇಳಿಕೆ ಆಗಿದೆ ಅಷ್ಟೇ. ಆದರೆ ಬೆಳ್ಳಿ ಗ್ರಾಂಗೆ 10 ಪೈಸೆ ಏರಿಕೆ ಕಂಡಿದೆ. ಇಂದು ( ಮಾರ್ಚ್ 26) ರಾಜ್ಯ, ಹೊರ ರಾಜ್ಯಗಳಲ್ಲಿ ಚಿನ್ನದ ಬೆಲೆ ಹೇಗಿದೆ ನೋಡೋಣ.
22 ಕ್ಯಾರೆಟ್ ಚಿನ್ನದ ಬೆಲೆ
ಚಿನ್ನದ ಬೆಲೆ ನಿನ್ನಿಗಿಂತ ಗ್ರಾಂಗೆ 1 ರೂ ಇಳಿಕೆ ಆಗಿದೆ. ಅದರಂತೆ ಗ್ರಾಂಗೆ ಇಂದು 6,124 ರೂ ಇದೆ. ನಿನ್ನೆ ಇದರ ಬೆಲೆ 6,125 ರೂ. ಇತ್ತು. 8 ಗ್ರಾಂಗೆ 48,992 ರೂ. 10 ಗ್ರಾಂಗೆ 61,240 ರೂ. 100 ಗ್ರಾಂಗೆ 6,12,400 ರೂ. ಬೆಲೆ ನಿಗದಿ ಆಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ
24 ಕ್ಯಾರೆಟ್ ಚಿನ್ನದ ಬೆಲೆ ಇಂದು 1 ಗ್ರಾಂಗೆ 6,681 ರೂ. 8 ಗ್ರಾಂಗೆ 53,448 ರೂ. 10 ಗ್ರಾಂಗೆ 66,810 ರೂ. 100 ಗ್ರಾಂಗೆ 6,68,100 ರೂ. ಫಿಕ್ಸ್ ಆಗಿದೆ.
ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ (10 ಗ್ರಾಂ)
ರಾಜ್ಯ ರಾಜಧಾನಿ ಇಂದು 22 ಕ್ಯಾರೆಟ್ ಚಿನ್ನಕ್ಕೆ 10 ಗ್ರಾಂಗೆ 61,240 ರೂ. ಹಾಗೂ 24 ಕ್ಯಾರೆಟ್ ಚಿನ್ನಕ್ಕೆ 66,810 ರೂ. ನಿಗದಿ ಆಗಿದೆ. ಮಂಗಳೂರು, ಮೈಸೂರು, ದಾವಣಗೆರೆ, ಮಂಡ್ಯ, ಹುಬ್ಬಳ್ಳಿ, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಲಿದೆ.
ಹೊರ ರಾಜ್ಯಗಳಲ್ಲಿ ಚಿನ್ನದ ಬೆಲೆ (10 ಗ್ರಾಂ)
ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 62,060 24 ಕ್ಯಾರೆಟ್‌ಗೆ 67,700 ರೂ. ಮುಂಬೈನಲ್ಲಿ 22 ಕ್ಯಾರೆಟ್‌ಗೆ 61,240 ರೂ. 24 ಕ್ಯಾರೆಟ್‌ಗೆ 66,810 ರೂ ದೆಹಲಿಯಲ್ಲಿ 22 ಕ್ಯಾರೆಟ್‌ಗೆ 61,390 ರೂ. 24 ಕ್ಯಾರೆಟ್‌ಗೆ 66,960 ರೂ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್‌ಗೆ 61,240 ರೂ ಹಾಗೂ 24 ಕ್ಯಾರೆಟ್‌ಗೆ 66,810 ರೂ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ಗೆ 61,240 ರೂ ಹಾಗೂ 24 ಕ್ಯಾರೆಟ್‌ಗೆ 66,810ರೂ ಕೇರಳದಲ್ಲಿ 22 ಕ್ಯಾರೆಟ್‌ಗೆ 61,240 ಹಾಗೂ 24 ಕ್ಯಾರೆಟ್ ಚಿನ್ನಕ್ಕೆ 66,810 ರೂ. ಪುಣೆಯಲ್ಲಿ 22 ಕ್ಯಾರೆಟ್‌ಗೆ 61,240 ರೂ.24 ಕ್ಯಾರೆಟ್‌ಗೆ 66,810 ರೂ. ವಡೋಧರದಲ್ಲಿ 22 ಕ್ಯಾರೆಟ್‌ಗೆ 61,290 ರೂ. 24 ಕ್ಯಾರೆಟ್‌ಗೆ 66,860 ರೂ. ಹಾಗೂ ಅಹಮದಾಬಾದ್‌ನಲ್ಲಿ 22 ಕ್ಯಾರೆಟ್‌ಗೆ 61,290 ರೂ. ಹಾಗೂ 24 ಕ್ಯಾರೆಟ್ ಚಿನ್ನಕ್ಕೆ 66,860ರೂ. ಬೆಲೆ ಫಿಕ್ಸ್ ಆಗಿದೆ.
ಬೆಳ್ಳಿ ದರ
ಬೆಳ್ಳಿ ಬೆಲೆ ಗ್ರಾಂಗೆ 10 ರೂ. ಏರಿಕೆಯಾಗಿದೆ. ಅದರಂತೆ ಗ್ರಾಂ ಚಿನ್ನಕ್ಕೆ 76.35 ರೂ. 8 ಗ್ರಾಂ ಚಿನ್ನಕ್ಕೆ 610.80 ರೂ. 10 ಗ್ರಾಂಗೆ 763.50 ರೂ. 100 ಗ್ರಾಂಗೆ 7,635 ರೂ. 1 ಕಿಲೋಗೆ 76,350 ರೂ. ನಿಗದಿ ಆಗಿದೆ.