Gold Rate Today: ಸೋಮವಾರ ತಟಸ್ಥವಾಗುವ ಮೂಲಕ ಕೊಂಚ ನೆಮ್ಮದಿ ಮೂಡಿಸಿದ ಹಳದಿ ಲೋಹ, ಇಂದು ಬೆಳ್ಳಿ ದರವೂ ಇಳಿಕೆ
ಕಳೆದೊಂದು ವಾರದಿಂದ ಚಿನ್ನ ದರ ಏರಿಳಿತ ಸಹಜವಾಗಿದೆ. ಈ ನಡುವೆ ಇಂದು (ಏಪ್ರಿಲ್ 29) ಚಿನ್ನದ ದರ ಸ್ಥಿರವಾಗುವ ಮೂಲಕ ಆಭರಣ ಪ್ರಿಯರು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಇನ್ನು ಬೆಳ್ಳಿ ದರವೂ ಇಳಿಕೆಯಾಗಿದ್ದು, ಖುಷಿ ಮೂಡಿಸಿದೆ.
ಬೆಂಗಳೂರು: ದೇಶದಲ್ಲಿಂದು ಚಿನ್ನದ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಬಹುತೇಕ ನಿನ್ನೆಯ ದರವೇ ಇಂದೂ ಮುಂದುವರಿದಿದೆ. ಒಂದಿಷ್ಟು ದಿನಗಳಿಂದ ಹೆಚ್ಚುತ್ತಿದೆ ಬೆಳ್ಳಿ ದರ ಇಂದು ಇಳಿಕೆಯಾಗಿದೆ. ಆ ಮೂಲಕ ಆಭರಣ ಪ್ರಿಯರಲ್ಲಿ ಖುಷಿ ಹೆಚ್ಚುವಂತೆ ಮಾಡಿದೆ. ಆದರೆ ಆಭರಣ ಬೆಲೆಯ ಮೇಲೆ ನಿರೀಕ್ಷೆ ಇರಿಸಿಕೊಂಡರೆ ಹುಸಿಯಾಗುವ ಅನುಭವವೇ ಹೆಚ್ಚು. ದೇಶದಲ್ಲಿ ಇಂದು ಚಿನ್ನ ಹಾಗೂ ಬೆಳ್ಳಿ ದರ ಎಷ್ಟಾಗಿದೆ ಗಮನಿಸಿ.
22 ಕ್ಯಾರೆಟ್ ಚಿನ್ನದ ಬೆಲೆ
ಇಂದು ಒಂದು ಗ್ರಾಂ ಚಿನ್ನಕ್ಕೆ 6,685 ರೂ. ಇದೆ. 8 ಗ್ರಾಂ ಚಿನ್ನದ ಬೆಲೆ 53,480 ರೂ. ಆಗಿದೆ. 10 ಗ್ರಾಂ ಚಿನ್ನದ ಬೆಲೆ 66,850 ರೂ. ಹಾಗೂ 100 ಗ್ರಾಂ ಚಿನ್ನದ ಬೆಲೆ 6,68,500 ರೂ. ನಿಗದಿ ಆಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ
24 ಕ್ಯಾರೆಟ್ ಚಿನ್ನದ ಬೆಲೆ ಒಂದು ಗ್ರಾಂ 7,293 ರೂ. 8 ಗ್ರಾಂಗೆ 58,344 ರೂ. 10 ಗ್ರಾಂ 72,930 ರೂ. 100 ಗ್ರಾಂ ಚಿನ್ನದ ಬೆಲೆ 7,29,300 ರೂ ಆಗಿದೆ.
ಕರ್ನಾಟಕದಲ್ಲಿ ಚಿನ್ನದ ದರ (10 ಗ್ರಾಂ)
ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 66,850 ರೂ. ಹಾಗೂ 24 ಕ್ಯಾರೆಟ್ ಚಿನ್ನಕ್ಕೆ 72,930 ರೂ. ದರ ಏರಿಕೆ ಆಗಿದೆ. ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ, ಮಂಡ್ಯ, ಶಿವಮೊಗ್ಗ, ಹಾವೇರಿ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಅದೇ ಬೆಲೆ ಇರಲಿದೆ. ಒಂದೊಂದು ಅಂಗಡಿಗಳಲ್ಲಿ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿದೆ.
ಹೊರ ರಾಜ್ಯಗಳಲ್ಲಿ ಚಿನ್ನದ ದರ (10 ಗ್ರಾಂ)
ಇಂದು ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 67,700 ರೂ. 24 ಕ್ಯಾರೆಟ್ ಚಿನ್ನದ ಬೆಲೆ 72,760 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 66,850 ರೂ. 24 ಕ್ಯಾರೆಟ್ ಚಿನ್ನದ ಬೆಲೆ 72,930 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 67,000 ರೂ. 24 ಕ್ಯಾರೆಟ್ ಚಿನ್ನದ ಬೆಲೆ 73,080 ರೂ. ಇದೆ. ಇಂದು ಕೊಲ್ಕತ್ತಾದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 66,850 ರೂ. 24 ಕ್ಯಾರೆಟ್ ಚಿನ್ನದ ಬೆಲೆ 72,930 ರೂ. ಇದೆ. ಮುತ್ತಿನ ನಗರಿ ಹೈದರಾಬಾದ್‌ನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 66,850 ರೂ. ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 72,930 ರೂ. ಇದೆ.
ಇಂದಿನ ಬೆಳ್ಳಿಯ ದರ
ಇಂದು ಬೆಳ್ಳಿ ದರ ಇಳಿಕೆಯಾಗಿದೆ. ಬೆಳ್ಳಿ ಇಂದು ಗ್ರಾಂಗೆ 83.50 ರೂ. ಆಗಿದೆ. 8 ಗ್ರಾಂಗೆ 668 ರೂ. 10 ಗ್ರಾಂಗೆ 835 ರೂ, 100 ಗ್ರಾಂಗೆ 8,350 ರೂ. ಹಾಗೂ 1 ಕಿಲೋಗೆ 83,500 ಬೆಲೆ ಹೆಚ್ಚಾಗಿದೆ.