Gold Rate Today: ಮತ್ತೆ ಏರಿಕೆಯತ್ತ ಹಳದಿ ಲೋಹದ ಬೆಲೆ, ಇಂದು ಬೆಳ್ಳಿ ದರ ಸ್ಥಿರ; ದೇಶದಲ್ಲಿಂದು ಚಿನ್ನದ ಬೆಲೆ ಎಷ್ಟಿದೆ ಗಮನಿಸಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Rate Today: ಮತ್ತೆ ಏರಿಕೆಯತ್ತ ಹಳದಿ ಲೋಹದ ಬೆಲೆ, ಇಂದು ಬೆಳ್ಳಿ ದರ ಸ್ಥಿರ; ದೇಶದಲ್ಲಿಂದು ಚಿನ್ನದ ಬೆಲೆ ಎಷ್ಟಿದೆ ಗಮನಿಸಿ

Gold Rate Today: ಮತ್ತೆ ಏರಿಕೆಯತ್ತ ಹಳದಿ ಲೋಹದ ಬೆಲೆ, ಇಂದು ಬೆಳ್ಳಿ ದರ ಸ್ಥಿರ; ದೇಶದಲ್ಲಿಂದು ಚಿನ್ನದ ಬೆಲೆ ಎಷ್ಟಿದೆ ಗಮನಿಸಿ

ಮೇ ತಿಂಗಳ ಅಂತ್ಯದಲ್ಲಿ ನಾವಿದ್ದೇವೆ. ಕಳೆದ ಒಂದಿಷ್ಟು ದಿನಗಳು ಕಡಿಮೆಯಾಗಿದ್ದ ಹಳದಿ ಲೋಹದ ಬೆಲೆ ಈಗ ಮತ್ತೆ ಏರಿಕೆಯಾಗುತ್ತಿದೆ. ಚಿನ್ನದ ದರವನ್ನು ನೀವು ಊಹಿಸಲೂ ಸಾಧ್ಯವಿಲ್ಲದ ಕಾರಣ ನೀವು ಹಣ ಕೂಡಿಟ್ಟು ಚಿನ್ನದ ಬೆಲೆ ಕಡಿಮೆಯಾದಾಗ ಖರೀದಿ ಮಾಡುವುದು ಉತ್ತಮ. ಇಂದು ದೇಶದಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ ಗಮನಿಸಿ.

ಮತ್ತೆ ಏರಿಕೆಯತ್ತ ಹಳದಿ ಲೋಹದ ಬೆಲೆ, ಇಂದು ಬೆಳ್ಳಿ ದರ ಸ್ಥಿರ; ದೇಶದಲ್ಲಿಂದು ಚಿನ್ನದ ದರ ಎಷ್ಟಿದೆ ಗಮನಿಸಿ
ಮತ್ತೆ ಏರಿಕೆಯತ್ತ ಹಳದಿ ಲೋಹದ ಬೆಲೆ, ಇಂದು ಬೆಳ್ಳಿ ದರ ಸ್ಥಿರ; ದೇಶದಲ್ಲಿಂದು ಚಿನ್ನದ ದರ ಎಷ್ಟಿದೆ ಗಮನಿಸಿ

ಬೆಂಗಳೂರು: ಭಾರತದಲ್ಲಿ ಚಿನ್ನದ ದರ ಯಾವಾಗ ಕಡಿಮೆ ಆಗುತ್ತದೆ, ಯಾವಾಗ ಹೆಚ್ಚಾಗುತ್ತದೆ ಎಂಬುದನ್ನು ಊಹಿಸಲು ಆಗುವುದಿಲ್ಲ. ಕಳೆದ ವಾರ ನಿರಂತರ ಇಳಿಕೆ ಕಂಡಿದ್ದ ಹಳದಿ ಲೋಹ ಬೆಲೆ ಈ ವಾರ ಏರಿಕೆ ಕಾಣುತ್ತಿದೆ. ಬೆಳ್ಳಿ ದರ ಸತತ ಏರಿಕೆಯ ಬಳಿಕ ಈ ಸ್ಥಿರವಾಗಿದೆ. ನೀವು ಚಿನ್ನ ಖರೀದಿ ಮಾಡಬೇಕು ಅಂತಿದ್ದರೆ ಜೂನ್‌ ತಿಂಗಳವರೆಗೆ ಕಾಯುವುದು ಉತ್ತಮ. ಕರ್ನಾಟಕ, ತಮಿಳುನಾಡು, ಹೈದ್ರಬಾದ್‌ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಇಂದು ಚಿನ್ನದ ದರ ಎಷ್ಟಿದೆ ಗಮನಿಸಿ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

22 ಕ್ಯಾರೆಟ್‌ ಚಿನ್ನದ ಬೆಲೆ

ಇಂದು 1 ಗ್ರಾಂ ಚಿನ್ನಕ್ಕೆ 6,685 ರೂ ಇದೆ. ನಿನ್ನೆ 6,665 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 20 ರೂ ಏರಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 53,480 ರೂ ನೀಡಬೇಕು. ನಿನ್ನೆ 53,320 ರೂ ಇದ್ದು, ನಿನ್ನೆ ದರಕ್ಕೆ ಹೋಲಿಸಿದರೆ ಇಂದು 160 ರೂ. ಹೆಚ್ಚಾಗಿದೆ. 10 ಗ್ರಾಂ ಚಿನ್ನಕ್ಕೆ 66,850 ರೂ ಇದೆ. ನಿನ್ನೆ 66,650 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 200 ರೂ. ಏರಿಕೆಯಾಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 6,68,500 ರೂ. ನೀಡಬೇಕು. ನಿನ್ನೆ 6,66,500 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 2,000 ರೂ. ಏರಿಕೆಯಾಗಿದೆ.

24 ಕ್ಯಾರೆಟ್‌ ಚಿನ್ನದ ಬೆಲೆ

24 ಕ್ಯಾರೆಟ್‌ ಚಿನ್ನಕ್ಕೆ 1 ಗ್ರಾಂಗೆ 7,293 ರೂ. ಇದೆ. ನಿನ್ನೆ 7,271 ರೂ. ಇದು ಈ ದರಕ್ಕೆ ಹೋಲಿಸಿದರೆ 22 ರೂ ಏರಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 58,344 ರೂ. ನೀಡಬೇಕು. ನಿನ್ನೆ 58,168 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 176 ರೂ. ಹೆಚ್ಚಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 72,930 ನೀಡಬೇಕು. ನಿನ್ನೆ 72,710 ರೂ. ಇದ್ದು, ಈ ದರಕ್ಕೆ ಹೋಲಿಸಿದರೆ 220 ರೂ ಏರಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ 7,29,300 ರೂ. ಇದೆ. ನಿನ್ನೆ 7,27,100 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 2,200 ರೂ ಹೆಚ್ಚಾಗಿದೆ.

ಕರ್ನಾಟಕದಲ್ಲಿ ಚಿನ್ನದ ಬೆಲೆ (1 ಗ್ರಾಂ)

ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 6,685 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 7,293 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.

ಹೊರ ರಾಜ್ಯಗಳಲ್ಲಿ ಚಿನ್ನದ ದರ (1 ಗ್ರಾಂ)

ಚೆನ್ನೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 6,740 ರೂ. 24 ಕ್ಯಾರೆಟ್‌ಗೆ 7,353 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 6,685 ರೂ. 24 ಕ್ಯಾರೆಟ್‌ಗೆ 7,293 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 6,700 ರೂ. 24 ಕ್ಯಾರೆಟ್‌ಗೆ 7,308 ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 6,685 ರೂ. 24 ಕ್ಯಾರೆಟ್‌ಗೆ 7,293 ರೂ. ಇದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 6,685 ರೂ. ಇದ್ದರೆ, 24 ಕ್ಯಾರೆಟ್‌ಗೆ 7,293 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 6,685 ರೂ. 24 ಕ್ಯಾರೆಟ್‌ಗೆ 7,293 ರೂ. ಆಗಿದೆ.

ಬೆಳ್ಳಿ ದರ

ಇಂದು ಬೆಳ್ಳಿ ದರ ಸ್ಥಿರವಾಗಿದೆ. ಒಂದು ಗ್ರಾಂ ಬೆಳ್ಳಿಗೆ 93.25 ರೂ. ಇದೆ. 8 ಗ್ರಾಂಗೆ 746 ರೂ ಇದ್ದರೆ, 10 ಗ್ರಾಂಗೆ 932.50 ರೂ. ಇದೆ. 100 ಗ್ರಾಂಗೆ 9,325 ರೂ. ಹಾಗೂ 1 ಕಿಲೋಗೆ 93,250 ರೂ. ಬೆಲೆ ನಿಗದಿ ಆಗಿದೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.