Gold Rate Today: ಚಿನ್ನಾಭರಣ ಪ್ರಿಯರಿಗೆ ಇಲ್ಲಿದೆ ಗುಡ್‌ನ್ಯೂಸ್; 10ಗ್ರಾಂ ಚಿನ್ನಕ್ಕೆ 1000 ರೂ ಇಳಿಕೆ, ಬೆಳ್ಳಿ ದರವೂ ಕುಸಿತ
ಚಿನ್ನದ ಬೆಲೆ ಇಳಿಕೆಗಾಗಿ ಕಾಯುತ್ತಿರುವ ಆಭರಣ ಪ್ರಿಯರಿಗೆ ಇಲ್ಲಿದೆ ಗುಡ್‌ನ್ಯೂಸ್. ಇಂದು (ಮೇ 2) ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಬೆಳ್ಳಿ ದರವೂ ಕಡಿಮೆಯಾಗಿದೆ. ಸತತ ಏರಿಕೆಯ ಬಳಿಕ ಇಳಿಕೆಯಾದ ಚಿನ್ನದ ದರ ಇನ್ನೂ ಇಳಿಯಬಹುದು ಎಂಬ ನಿರೀಕ್ಷೆ ಆಭರಣ ಪ್ರಿಯರಲ್ಲಿದೆ.
ಬೆಂಗಳೂರು: ಏಪ್ರಿಲ್ ತಿಂಗಳಲ್ಲಿ ಬಹುತೇಕ ದಿನ ಚಿನ್ನದ ಬೆಲೆ ಏರಿಕೆಯಾಗಿತ್ತು. ಬೆಳ್ಳಿ ದರವೂ ಹೆಚ್ಚಳವಾಗಿತ್ತು. ಜಾಗತಿಕ ವಿದ್ಯಮಾನಗಳ ಪ್ರಭಾವದಿಂದ ಚಿನಿವಾರ ಪೇಟೆಯಲ್ಲಿ ದರ ಏರಿಕೆ ಸಹಜವಾಗಿತ್ತು. ಆದರೆ ತಿಂಗಳು ಚಿನ್ನಾಭರಣ ಪ್ರಿಯರಿಗೆ ಕೊಂಚ ಭರವಸೆ ಮೂಡಿಸಿದೆ. ಆರಂಭದ ದಿನ ತಟಸ್ಥವಾಗಿದ್ದ ಚಿನ್ನ ಬೆಳ್ಳಿ ದರ 2ನೇ ದಿನ ಇಳಿಕೆಯಾಗುವ ಮೂಲಕ ಖುಷಿ ಹೆಚ್ಚಿಸಿದೆ. ಇಂದು 10 ಗ್ರಾಂ ಚಿನ್ನದ ಮೇಲೆ 1000 ರೂ ಕಡಿಮೆಯಾಗಿದೆ. ದೇಶದಲ್ಲಿಂದು ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ ಗಮನಿಸಿ.
22 ಕ್ಯಾರೆಟ್ ಚಿನ್ನದ ಬೆಲೆ
ಇಂದು 1 ಗ್ರಾಂ ಚಿನ್ನಕ್ಕೆ 6,555 ರೂ. ಇದೆ. ನಿನ್ನೆ 6,655 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 100 ರೂ ಇಳಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 52,440 ರೂ. ನೀಡಬೇಕು. ನಿನ್ನೆ 53,240 ರೂ ಇದ್ದು, ನಿನ್ನೆ ದರಕ್ಕೆ ಹೋಲಿಸಿದರೆ ಇಂದು 800 ರೂ. ಕಡಿಮೆಯಾಗಿದೆ. 10 ಗ್ರಾಂ ಚಿನ್ನಕ್ಕೆ 65,550 ರೂ ಇದೆ. ನಿನ್ನೆ 66,550 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 1000 ರೂ. ಇಳಿಕೆಯಾಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 6,55,500 ರೂ. ನೀಡಬೇಕು. ನಿನ್ನೆ 6,65,500 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 10,000 ರೂ. ಕಡಿಮೆಯಾಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ
24 ಕ್ಯಾರೆಟ್ ಚಿನ್ನಕ್ಕೆ 1 ಗ್ರಾಂಗೆ 7,151 ರೂ. ಇದೆ. ನಿನ್ನೆ 7,260 ರೂ. ಇದು ಈ ದರಕ್ಕೆ ಹೋಲಿಸಿದರೆ 109 ರೂ ಕಡಿಮೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 57,208 ರೂ. ನೀಡಬೇಕು. ನಿನ್ನೆ 58,080 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 872 ರೂ. ಕಡಿಮೆಯಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 71,510 ನೀಡಬೇಕು. ನಿನ್ನೆ 72,600 ರೂ. ಇದ್ದು, ಈ ದರಕ್ಕೆ ಹೋಲಿಸಿದರೆ 1090 ರೂ ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ 7,15,100 ರೂ. ಇದೆ. ನಿನ್ನೆ 7,26,000 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 10,900 ರೂ ಕಡಿಮೆಯಾಗಿದೆ.
ಕರ್ನಾಟಕದಲ್ಲಿ ಚಿನ್ನದ ಬೆಲೆ (10 ಗ್ರಾಂ)
ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 66,550 ರೂ. ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 71,510 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.
ಹೊರ ರಾಜ್ಯಗಳಲ್ಲಿ ಚಿನ್ನದ ದರ (10 ಗ್ರಾಂ)
ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 66,350 ರೂ. 24 ಕ್ಯಾರೆಟ್‌ಗೆ 72,380 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 65,550 ರೂ. 24 ಕ್ಯಾರೆಟ್‌ಗೆ 71,510 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 65,700 ರೂ. 24 ಕ್ಯಾರೆಟ್‌ಗೆ 71,660 ರೂ. ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 65,550 ರೂ. 24 ಕ್ಯಾರೆಟ್‌ಗೆ 71,510 ರೂ. ಇದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 65,550 ರೂ. ಇದ್ದರೆ, 24 ಕ್ಯಾರೆಟ್‌ಗೆ 71,510 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 65,550 ರೂ. 24 ಕ್ಯಾರೆಟ್‌ಗೆ 71,510 ರೂ. ಆಗಿದೆ.
ಬೆಳ್ಳಿ ದರ
ಇಂದು ಬೆಳ್ಳಿ ದರವೂ ಕಡಿಮೆಯಾಗಿದೆ. ಒಂದು ಗ್ರಾಂ ಬೆಳ್ಳಿಗೆ 83.40 ರೂ. ಇದೆ. 8 ಗ್ರಾಂಗೆ 667.20 ರೂ ಇದ್ದರೆ, 10 ಗ್ರಾಂಗೆ 834 ರೂ. ಇದೆ. 100 ಗ್ರಾಂಗೆ 8,340 ರೂ. ಹಾಗೂ 1 ಕಿಲೋಗೆ 83,400 ರೂ. ಬೆಲೆ ನಿಗದಿ ಆಗಿದೆ.