Gold Rate Today: ಏರಿಕೆಯ ಪರ್ವದ ನಡುವೆ ತುಸು ಇಳಿಕೆಯಾಗಿ ಖುಷಿ ಹೆಚ್ಚಿಸಿದ ಚಿನ್ನದ ದರ; ಇಂದು ಬೆಳ್ಳಿ ಬೆಲೆ ಸ್ಥಿರ
ಭಾರತದಲ್ಲಿ ಕಳೆದ ಕೆಲವು ದಿನಗಳಿಂದ ಚಿನ್ನದ ದರದಲ್ಲಿ ಏರಿಕೆ ಸಹಜವಾಗಿದೆ. ದಿನೇ ದಿನೇ ಹೆಚ್ಚುತ್ತಿರುವ ಚಿನ್ನ ಬೆಲೆಯು ಆಭರಣ ಪ್ರಿಯರಲ್ಲಿ ಆತಂಕ ಹುಟ್ಟುಹಾಕಿದೆ. ಈ ನಡುವೆ ಇಂದು (ಏಪ್ರಿಲ್ 30) ಚಿನ್ನದ ಬೆಲೆ ಕೊಂಚ ಇಳಿಕೆಯಾಗಿದೆ. ಬೆಳ್ಳಿ ದರ ಸ್ಥಿರವಾಗಿದೆ.

ಬೆಂಗಳೂರು: ಜಾಗತಿಕ ವಿದ್ಯಮಾನಗಳ ನಡುವೆ ಹಳದಿ ಲೋಹದ ಬೆಲೆ ದಿನೇ ದಿನೇ ಏರಿಕೆಯಾಗುತ್ತಿದೆ. ಬಂಗಾರದ ಬೆಲೆ ಏರಿಕೆಯ ಭಾರತದಂತಹ ಚಿನ್ನಾಭರಣ ಪ್ರಿಯರಲ್ಲಿ ನಿರಾಸೆ ಹುಟ್ಟು ಹಾಕಿರುವುದು ಸುಳ್ಳಲ್ಲ. ಚಿನ್ನದ ಬೆಲೆ ಇನ್ನೂ ಏರುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಡಾಲರ್ ಮೌಲ್ಯದ ಹೆಚ್ಚಳ, ಉಕ್ರೇನ್ ರಷ್ಯಾ ನಡುವೆ ಯುದ್ಧ ಹೀಗೆ ಹಲವು ಕಾರಣಗಳಿಂದ ಹಳದಿ ಲೋಹದ ಬೆಲೆ ಹೆಚ್ಚಳವಾಗಿತ್ತು. ಆದರೆ ಏಪ್ರಿಲ್ ತಿಂಗಳ ಕೊನೆಯ ದಿನವಾದ ಇಂದು ಚಿನ್ನದ ದರ ಇಳಿಕೆಯಾಗಿದೆ. ಬೆಳ್ಳಿ ದರ ಸ್ಥಿರವಾಗಿದೆ. ದೇಶದಲ್ಲಿಂದು ಚಿನ್ನದ ದರ ಎಷ್ಟಾಗಿದೆ ಗಮನಿಸಿ.
22 ಕ್ಯಾರೆಟ್ ಚಿನ್ನದ ಬೆಲೆ
ಇಂದು 1 ಗ್ರಾಂ ಚಿನ್ನಕ್ಕೆ 6,655 ರೂ. ಇದೆ. ನಿನ್ನೆ 6,685 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 30 ರೂ ಇಳಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 53,240 ರೂ. ನೀಡಬೇಕು. ನಿನ್ನೆ 53,480 ರೂ ಇದ್ದು, ನಿನ್ನೆ ದರಕ್ಕೆ ಹೋಲಿಸಿದರೆ ಇಂದು 240 ರೂ. ಕಡಿಮೆಯಾಗಿದೆ. 10 ಗ್ರಾಂ ಚಿನ್ನಕ್ಕೆ 66,550 ರೂ ಇದೆ. ನಿನ್ನೆ 66,850 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 300 ರೂ. ಇಳಿಕೆಯಾಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 6,65,500 ರೂ. ನೀಡಬೇಕು. ನಿನ್ನೆ 6,68,500 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 3,000 ರೂ. ಕಡಿಮೆಯಾಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ
24 ಕ್ಯಾರೆಟ್ ಚಿನ್ನಕ್ಕೆ 1 ಗ್ರಾಂಗೆ 7,260 ರೂ. ಇದೆ. ನಿನ್ನೆ 7,293 ರೂ. ಇದು ಈ ದರಕ್ಕೆ ಹೋಲಿಸಿದರೆ 33 ರೂ ಕಡಿಮೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 58,080 ರೂ. ನೀಡಬೇಕು. ನಿನ್ನೆ 58,344 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 264 ರೂ. ಕಡಿಮೆಯಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 72,600 ನೀಡಬೇಕು. ನಿನ್ನೆ 72,930 ರೂ. ಇದ್ದು, ಈ ದರಕ್ಕೆ ಹೋಲಿಸಿದರೆ 330 ರೂ ಇಳಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ 7,26,000 ರೂ. ಇದೆ. ನಿನ್ನೆ 7,29,300 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 3,300 ರೂ ಕಡಿಮೆಯಾಗಿದೆ.
ಕರ್ನಾಟಕದಲ್ಲಿ ಚಿನ್ನದ ಬೆಲೆ (10 ಗ್ರಾಂ)
ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 66,550 ರೂ. ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 72,600 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.
ಹೊರ ರಾಜ್ಯಗಳಲ್ಲಿ ಚಿನ್ನದ ದರ (10 ಗ್ರಾಂ)
ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 67,400 ರೂ. 24 ಕ್ಯಾರೆಟ್‌ಗೆ 73,530 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 66,550 ರೂ. 24 ಕ್ಯಾರೆಟ್‌ಗೆ 72,600 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 66,700 ರೂ. 24 ಕ್ಯಾರೆಟ್‌ಗೆ 72,750 ರೂ. ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 66,550 ರೂ. 24 ಕ್ಯಾರೆಟ್‌ಗೆ 72,600 ರೂ. ಇದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 66,550 ರೂ. ಇದ್ದರೆ, 24 ಕ್ಯಾರೆಟ್‌ಗೆ 72,600 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 66,550 ರೂ. 24 ಕ್ಯಾರೆಟ್‌ಗೆ 72,600 ರೂ. ಆಗಿದೆ.
ಬೆಳ್ಳಿ ದರ
ಇಂದು ಬೆಳ್ಳಿ ದರವೂ ಸ್ಥಿರವಾಗಿದೆ. ಒಂದು ಗ್ರಾಂ ಬೆಳ್ಳಿಗೆ 83.50 ರೂ. ಇದೆ. 8 ಗ್ರಾಂಗೆ 668 ರೂ ಇದ್ದರೆ, 10 ಗ್ರಾಂಗೆ 835 ರೂ. ಇದೆ. 100 ಗ್ರಾಂಗೆ 8,350 ರೂ. ಹಾಗೂ 1 ಕಿಲೋಗೆ 83,500 ರೂ. ಬೆಲೆ ನಿಗದಿ ಆಗಿದೆ.
