Gold Rate Today: ಶುಕ್ರವಾರ ಆಭರಣ ಪ್ರಿಯರಿಗೆ ಶುಭಸುದ್ದಿ, ಸತತ ಏರಿಕೆಯ ಬೆನ್ನಲ್ಲೇ ಚಿನ್ನದ ದರ ಇಳಿಕೆ, ಬೆಳ್ಳಿ ತುಸು ಏರಿಕೆ
ಕಳೆದ ಎರಡು ದಿನಗಳಿಂದ ಏರಿಕೆಯಾಗಿ ಗಾಬರಿ ಹುಟ್ಟಿಸಿದ್ದ ಚಿನ್ನದ ದರ ಇಂದು (ಮೇ 31) ಇಳಿಕೆಯಾಗಿದೆ. ಆ ಮೂಲಕ ಶುಕ್ರವಾರ ಹಾಗೂ ಜೂನ್ ತಿಂಗಳಾಂತ್ಯಕ್ಕೆ ಆಭರಣ ಪ್ರಿಯರಿಗೆ ಶುಭಸುದ್ದಿ ಸಿಕ್ಕಿದೆ. ಇನ್ನು ಬೆಳ್ಳಿ ದರ ತುಸು ಕೊಂಚ ಏರಿಕೆಯಾಗಿದೆ.
ಬೆಂಗಳೂರು: ಭಾರತದಲ್ಲಿ ಯಾವಾಗ ಚಿನ್ನದ ದರ ಕಡಿಮೆಯಾಗುತ್ತದೆ, ಯಾವಾಗ ಹೆಚ್ಚುತ್ತದೆ ಎಂಬುದನ್ನು ಊಹಿಸಿಲು ಯಾರಿಂದಲೂ ಸಾಧ್ಯವಿಲ್ಲ. ಆದರೂ ಕಳೆದೊಂದು ದಶಕಕ್ಕೆ ಹೋಲಿಸಿದರೆ ಭಾರತದಲ್ಲಿ ಚಿನ್ನಾಭರಣ ದರದಲ್ಲಿ ಭಾರಿ ಏರಿಕೆಯಾಗಿದೆ. ಚಿನ್ನದ ದರ ಯಾವಾಗ ಇಳಿಕೆಯಾಗಬಹುದು ಎಂದು ನೀವು ಊಹಿಸುತ್ತಿದ್ದರೆ ನಿಮಗೆ ನಿರಾಸೆ ಕಾಡುವುದು ಖಚಿತ. ಯಾಕೆಂದರೆ ಮುಂದಿನ ದಿನಗಳಲ್ಲಿ ಹಳದಿಲೋಹದ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದು ಎಂದು ವಿಶ್ಲೇಷಕರು ಅಂದಾಜಿಸುತ್ತಿದ್ದಾರೆ. ಅದೇನೇ ಇದ್ದರೂ ಇತ್ತೀಚಿನ ದಿನಗಳಲ್ಲಿ ಚಿನ್ನ ಹಾಗೂ ಬೆಳ್ಳಿ ದರಗಳ ಏರಿಳಿತ ಸಹಜವಾಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ
ಇಂದು 1 ಗ್ರಾಂ ಚಿನ್ನಕ್ಕೆ 6,670 ರೂ ಇದೆ. ನಿನ್ನೆ 6,710 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 40 ರೂ ಇಳಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 53,360 ರೂ ನೀಡಬೇಕು. ನಿನ್ನೆ 53,680 ರೂ ಇದ್ದು, ನಿನ್ನೆ ದರಕ್ಕೆ ಹೋಲಿಸಿದರೆ ಇಂದು 320 ರೂ. ಕಡಿಮೆಯಾಗಿದೆ. 10 ಗ್ರಾಂ ಚಿನ್ನಕ್ಕೆ 66,700 ರೂ ಇದೆ. ನಿನ್ನೆ 67,100 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 400 ರೂ. ಕಡಿಮೆಯಾಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 6,67,000 ರೂ. ನೀಡಬೇಕು. ನಿನ್ನೆ 6,71,000 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 4,000 ರೂ. ಇಳಿಕೆಯಾಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ
24 ಕ್ಯಾರೆಟ್ ಚಿನ್ನಕ್ಕೆ 1 ಗ್ರಾಂಗೆ 7,276 ರೂ. ಇದೆ. ನಿನ್ನೆ 7,320 ರೂ. ಇದು ಈ ದರಕ್ಕೆ ಹೋಲಿಸಿದರೆ 44 ರೂ ಇಳಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 58,208 ರೂ. ನೀಡಬೇಕು. ನಿನ್ನೆ 58,560 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 352 ರೂ. ಕಡಿಮೆಯಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 72,760 ನೀಡಬೇಕು. ನಿನ್ನೆ 73,200 ರೂ. ಇದ್ದು, ಈ ದರಕ್ಕೆ ಹೋಲಿಸಿದರೆ 440 ರೂ ಕಡಿಮೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ 7,27,600 ರೂ. ಇದೆ. ನಿನ್ನೆ 7,32,000 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 4,400 ರೂ ಹೆಚ್ಚಾಗಿದೆ.
ಕರ್ನಾಟಕದಲ್ಲಿ ಚಿನ್ನದ ಬೆಲೆ (1 ಗ್ರಾಂ)
ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್ಗೆ 6,670 ರೂ. ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 7,276 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.
ಹೊರ ರಾಜ್ಯಗಳಲ್ಲಿ ಚಿನ್ನದ ದರ (1 ಗ್ರಾಂ)
ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 6,730 ರೂ. 24 ಕ್ಯಾರೆಟ್ಗೆ 7,342 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 6,670 ರೂ. 24 ಕ್ಯಾರೆಟ್ಗೆ 7,276 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 6,685 ರೂ. 24 ಕ್ಯಾರೆಟ್ಗೆ 7,291 ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 6,670 ರೂ. 24 ಕ್ಯಾರೆಟ್ಗೆ 7,276 ರೂ. ಇದೆ. ಹೈದರಾಬಾದ್ನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 6,670 ರೂ. ಇದ್ದರೆ, 24 ಕ್ಯಾರೆಟ್ಗೆ 7,276 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 6,670 ರೂ. 24 ಕ್ಯಾರೆಟ್ಗೆ 7,276 ರೂ. ಆಗಿದೆ.
ಬೆಳ್ಳಿ ದರ
ಇಂದು ಬೆಳ್ಳಿ ದರ ಏರಿಕೆಯಾಗಿದೆ. ಒಂದು ಗ್ರಾಂ ಬೆಳ್ಳಿಗೆ 95.50 ರೂ. ಇದೆ. 8 ಗ್ರಾಂಗೆ 764 ರೂ ಇದ್ದರೆ, 10 ಗ್ರಾಂಗೆ 955 ರೂ. ಇದೆ. 100 ಗ್ರಾಂಗೆ 9,550 ರೂ. ಹಾಗೂ 1 ಕಿಲೋಗೆ 95,500 ರೂ. ಬೆಲೆ ನಿಗದಿ ಆಗಿದೆ.