ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Rate Today: ಇಳಿಕೆಯ ಬೆನ್ನಲ್ಲೇ ಮತ್ತೆ ಏರಿದ ಚಿನ್ನದ ದರ, ತುಸು ಕಡಿಮೆಯಾದ ಬೆಳ್ಳಿ; ಆಭರಣ ಪ್ರಿಯರಿಗಿಲ್ಲ ನೆಮ್ಮದಿ

Gold Rate Today: ಇಳಿಕೆಯ ಬೆನ್ನಲ್ಲೇ ಮತ್ತೆ ಏರಿದ ಚಿನ್ನದ ದರ, ತುಸು ಕಡಿಮೆಯಾದ ಬೆಳ್ಳಿ; ಆಭರಣ ಪ್ರಿಯರಿಗಿಲ್ಲ ನೆಮ್ಮದಿ

ಭಾರತದಲ್ಲಿ ಚಿನ್ನದ ದರ ಯಾವಾಗ ಏರಿಕೆಯಾಗುತ್ತದೆ, ಯಾವಾಗ ಇಳಿಯುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ನಿನ್ನೆಯಷ್ಟೇ ಕಡಿಮೆಯಾಗಿ ಖುಷಿ ನೀಡಿದ್ದ ಚಿನ್ನದ ಬೆಲೆ ಇಂದು (ಮೇ 3) ಮತ್ತೆ ಏರಿಕೆಯಾಗಿದೆ. ಬೆಳ್ಳಿ ದರ ಕೆಜಿ ಮೇಲೆ 1,150 ರೂಪಾಯಿ ಇಳಿಕೆಯಾಗಿದೆ.

ಮೇ 3 ರಂದು ಚಿನ್ನದ ದರ ಏರಿಕೆ, ಬೆಳ್ಳಿ ದರ ಇಳಿಕೆ
ಮೇ 3 ರಂದು ಚಿನ್ನದ ದರ ಏರಿಕೆ, ಬೆಳ್ಳಿ ದರ ಇಳಿಕೆ

ಬೆಂಗಳೂರು: ದೇಶದಲ್ಲಿ ಚಿನ್ನದ ಬೆಲೆಯು ತಾಪಮಾನದಂತೆ ದಿನೇ ದಿನೇ ಏರಿಕೆಯಾಗುತ್ತಲೇ ಇದೆ. ಒಂದು ದಿನ ಇಳಿಕೆಯಾಗಿ ಖುಷಿ ನೀಡುವ ಹಳದಿ ಲೋಹ ಮರುದಿನವೇ ಏರಿಕೆಯಾಗಿ ಭಾರಿ ನಿರಾಸೆ ಉಂಟಾಗುವಂತೆ ಮಾಡುತ್ತದೆ. ನಿನ್ನೆಯಷ್ಟೇ (ಮೇ 3) 10 ಗ್ರಾಂ ಚಿನ್ನಕ್ಕೆ 1000 ರೂಪಾಯಿ ಕಡಿಮೆಯಾಗಿತ್ತು. ಆದರೆ ಇಂದು 700 ರೂಪಾಯಿ ಹೆಚ್ಚಾಗಿದೆ. ಬೆಳ್ಳಿ ದರ ಇಂದು ತುಸು ಇಳಿಕೆಯಾಗಿದೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಚಿನ್ನ ಹಾಗೂ ಬೆಳ್ಳಿ ದರ ಎಷ್ಟಾಗಿದೆ ಗಮನಿಸಿ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಟ್ರೆಂಡಿಂಗ್​ ಸುದ್ದಿ

22 ಕ್ಯಾರೆಟ್‌ ಚಿನ್ನದ ಬೆಲೆ

ಇಂದು 1 ಗ್ರಾಂ ಚಿನ್ನಕ್ಕೆ 6,625 ರೂ. ಇದೆ. ನಿನ್ನೆ 6,555 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 70 ರೂ ಏರಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 53,000 ರೂ. ನೀಡಬೇಕು. ನಿನ್ನೆ 52,440 ರೂ ಇದ್ದು, ನಿನ್ನೆ ದರಕ್ಕೆ ಹೋಲಿಸಿದರೆ ಇಂದು 560 ರೂ. ಹೆಚ್ಚಾಗಿದೆ. 10 ಗ್ರಾಂ ಚಿನ್ನಕ್ಕೆ 66,250 ರೂ ಇದೆ. ನಿನ್ನೆ 66,550 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 700 ರೂ. ಏರಿಕೆಯಾಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 6,62,500 ರೂ. ನೀಡಬೇಕು. ನಿನ್ನೆ 6,55,500 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 7,000 ರೂ. ಹೆಚ್ಚಾಗಿದೆ.

24 ಕ್ಯಾರೆಟ್‌ ಚಿನ್ನದ ಬೆಲೆ

24 ಕ್ಯಾರೆಟ್‌ ಚಿನ್ನಕ್ಕೆ 1 ಗ್ರಾಂಗೆ 7,227 ರೂ. ಇದೆ. ನಿನ್ನೆ 7,151 ರೂ. ಇದು ಈ ದರಕ್ಕೆ ಹೋಲಿಸಿದರೆ 76 ರೂ ಏರಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 57,816 ರೂ. ನೀಡಬೇಕು. ನಿನ್ನೆ 57,208 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 608 ರೂ. ಹೆಚ್ಚಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 72,270 ನೀಡಬೇಕು. ನಿನ್ನೆ 71,510 ರೂ. ಇದ್ದು, ಈ ದರಕ್ಕೆ ಹೋಲಿಸಿದರೆ 760 ರೂ ಏರಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ 7,22,700 ರೂ. ಇದೆ. ನಿನ್ನೆ 7,15,100 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 7,600 ರೂ ಏರಿಕೆಯಾಗಿದೆ.

ಕರ್ನಾಟಕದಲ್ಲಿ ಚಿನ್ನದ ಬೆಲೆ (10 ಗ್ರಾಂ)

ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 66,250 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 72,270 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.

ಹೊರ ರಾಜ್ಯಗಳಲ್ಲಿ ಚಿನ್ನದ ದರ (10 ಗ್ರಾಂ)

ಚೆನ್ನೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 67,150 ರೂ. 24 ಕ್ಯಾರೆಟ್‌ಗೆ 73,250 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 65,250 ರೂ. 24 ಕ್ಯಾರೆಟ್‌ಗೆ 72,270 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 66,400 ರೂ. 24 ಕ್ಯಾರೆಟ್‌ಗೆ 72,420 ರೂ. ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 65,250 ರೂ. 24 ಕ್ಯಾರೆಟ್‌ಗೆ 72,270 ರೂ. ಇದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 65,250 ರೂ. ಇದ್ದರೆ, 24 ಕ್ಯಾರೆಟ್‌ಗೆ 72,270 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 66,250 ರೂ. 24 ಕ್ಯಾರೆಟ್‌ಗೆ 72,270 ರೂ. ಆಗಿದೆ.

ಬೆಳ್ಳಿ ದರ

ಇಂದು ಬೆಳ್ಳಿ ದರ ಕಡಿಮೆಯಾಗಿದೆ. ಒಂದು ಗ್ರಾಂ ಬೆಳ್ಳಿಗೆ 82.25 ರೂ. ಇದೆ. 8 ಗ್ರಾಂಗೆ 658 ರೂ ಇದ್ದರೆ, 10 ಗ್ರಾಂಗೆ 822.50 ರೂ. ಇದೆ. 100 ಗ್ರಾಂಗೆ 8,225 ರೂ. ಹಾಗೂ 1 ಕಿಲೋಗೆ 82,250 ರೂ. ಬೆಲೆ ನಿಗದಿ ಆಗಿದೆ.

IPL_Entry_Point