Gold Rate: ಚಿನ್ನ ತಟಸ್ಥ, ಬೆಳ್ಳಿ ಮತ್ತೆ ಇಳಿಕೆ; ಬೆಂಗಳೂರು, ಇನ್ನಿತರ ಕಡೆ ಇಂದಿನ ಗೋಲ್ಡ್ ರೇಟ್ ಹೇಗಿದೆ?
Gold Rate: ಮಂಗಳವಾರ ಏರಿಕೆಯಾಗಿದ್ದ ಚಿನ್ನ ಇಂದು (ಮಾರ್ಚ್ 21) ರಂದು ಸ್ಥಿರವಾಗಿದೆೆ. ಬೆಳ್ಳಿ ಬೆಲೆ ಇಳಿಕೆ ಆಗಿದೆ. ಬೆಂಗಳೂರು, ಮಂಗಳೂರು ಸೇರಿದಂತೆ ಹೊರ ರಾಜ್ಯಗಳಲ್ಲಿ ಇಂದಿನ ಚಿನ್ನ, ಬೆಳ್ಳಿ ಬೆಲೆಯ ವಿವರ ಇಲ್ಲಿದೆ.
ಬೆಂಗಳೂರು: ಹಬ್ಬ ಹರಿದಿನ ಬರುತ್ತಿದ್ದಂತೆ ಬಂಗಾರದ ಬೆಲೆ ಕೂಡಾ ಹೆಚ್ಚುತ್ತಲೇ ಇದೆ. ಕಳೆದ 2 ತಿಂಗಳಲ್ಲಿ ಗ್ರಾಂಗೆ 5,400 ರೂ. ಇದ್ದ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಆಗಿದೆ. ಬೆಳ್ಳಿ ಬೆಲೆ ಇಂದು ಮತ್ತೆ ಇಳಿದಿದೆ. ಚಿನ್ನ ತಟಸ್ಥವಾಗಿದ್ದು ಇಂದು ಪ್ರಮುಖ ನಗರಗಳು ಹಾಗೂ ರಾಜ್ಯಗಳಲ್ಲಿ 22 ಕ್ಯಾರೆಟ್, 24 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ ನೋಡೋಣ.
22 ಕ್ಯಾರೆಟ್ ಚಿನ್ನದ ಬೆಲೆ
1 ಗ್ರಾಂಗೆ 22 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ ಇಂದು 6,080 ರೂ ಆಗಿದೆ. 8 ಗ್ರಾಂಗೆ ನಿನ್ನೆ 48,640 ಇದೆ. ಹಾಗೇ 10 ಗ್ರಾಂ ಚಿನ್ನಕ್ಕೆ ಇಂದು 60,800 ರೂ. ಹಾಗೂ 100 ಗ್ರಾಂ ಚಿನ್ನಕ್ಕೆ 6,08,000 ರೂ. ಇದೆ. ನಿನ್ನೆ ಕೂಡಾ ಇದೇ ಬೆಲೆ ಇತ್ತು.
24 ಕ್ಯಾರೆಟ್ ಚಿನ್ನದ ಬೆಲೆ
1 ಗ್ರಾಂಗೆ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 6,633 ರೂ. ಇತ್ತು. ಇಂದು ಕೂಡಾ ಅದೇ ಬೆಲೆ ಇದೆ. ಮೊನ್ನೆಗಿಂತ ಗ್ರಾಂಗೆ 46 ರೂ. ಏರಿಕೆ ಆಗಿದೆ. 8 ಗ್ರಾಂಗೆ 53,064 ಇದೆ. 10 ಗ್ರಾಂ ಚಿನ್ನಕ್ಕೆ 66,330 ರೂ. ಹಾಗೂ 100 ಗ್ರಾಂ ಚಿನ್ನಕ್ಕೆ 6,63,300 ರೂ. ಬೆಲೆ ನಿಗದಿ ಆಗಿದೆ. ಚಿನ್ನ ಇಂದು ಸ್ಥಿರವಾಗಿದ್ದು ನಿನ್ನೆ ಕೂಡಾ ಇದೇ ಬೆಲೆ ಇತ್ತು.
ಬೆಂಗಳೂರು ಹಾಗೂ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 60,800 ರೂ. ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 66,330 ರೂ. ಇದೆ. ರಾಜ್ಯದ ಇತರ ನಗರಗಳಾದ ಮಂಗಳೂರು, ಮೈಸೂರು, ಹುಬ್ಬಳ್ಳಿ, ದಾವಣಗೆರೆ, ಮಂಡ್ಯ, ಶಿವಮೊಗ್ಗ ಹಾಗೂ ಇನ್ನಿತರ ನಗರಗಳಲ್ಲಿ ಕೂಡಾ ಚಿನ್ನದ ಬೆಲೆ ಒಂದೇ ಇದೆ. ಮಜೂರಿ, ಇತರೆ ಶುಲ್ಕ, ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರುತ್ತದೆ.
ಚೆನ್ನೈ, ಹೈದರಾಬಾದ್ ಸೇರಿದಂತೆ ಹೊರ ರಾಜ್ಯಗಳಲ್ಲಿ ಚಿನ್ನದ ಬೆಲೆ
ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 61,350 ರೂ. 24 ಕ್ಯಾರೆಟ್ ಚಿನ್ನದ ಬೆಲೆ 66,930 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 60,800 ರೂ. 24 ಕ್ಯಾರೆಟ್ ಚಿನ್ನದ ಬೆಲೆ 66,330 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 60,950 ರೂ. ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 66,480 ರೂ. ಇದೆ. ಕೊಲ್ಕೊತ್ತಾದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 60,800 ರೂ. ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 66,330 ರೂ. ನಿಗದಿಯಾಗಿದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 60,800 ರೂ. ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 66,330 ರೂ. ಇದೆ. ವಡೋದರದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 60,850 ರೂ. ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 66,380 ರೂ. ಇದೆ. ಅಹಮದಾಬಾದ್‌ನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 60,850 ರೂ. ಹಾಗೂ 24 ಕ್ಯಾರೆಟ್ ಚಿನ್ನಕ್ಕೆ 66,380 ರೂ. ನಿಗದಿಯಾಗಿದೆ.
ಬೆಳ್ಳಿ ಬೆಲೆ
ಬೆಳ್ಳಿ ಇಂದು ಮತ್ತೆ ಇಳಿಕೆ ಆಗಿದೆ. ನಿನ್ನೆಗಿಂತ 40 ಪೈಸೆ ಇಳಿದಿದ್ದು ಗ್ರಾಂಗೆ 75.50 ರೂ. ಆಗಿದೆ. 8 ಗ್ರಾಂಗೆ 604 ರೂ. 10 ಗ್ರಾಂಗೆ 755 ರೂ. 100 ಗ್ರಾಂಗೆ 7,550 1 ಕಿಲೋಗೆ 75,500 ರೂ. ನೀಡಬೇಕು.