Gold Rate: ಕಡಿಮೆ ಆದರೂ ಆಭರಣಪ್ರಿಯರಿಗಿಲ್ಲ ಖುಷಿ; ಕರ್ನಾಟಕ, ಹೊರ ರಾಜ್ಯಗಳಲ್ಲಿ ಇಂದಿನ ಚಿನ್ನ, ಬೆಳ್ಳಿ ಬೆಲೆ ಹೀಗಿದೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Rate: ಕಡಿಮೆ ಆದರೂ ಆಭರಣಪ್ರಿಯರಿಗಿಲ್ಲ ಖುಷಿ; ಕರ್ನಾಟಕ, ಹೊರ ರಾಜ್ಯಗಳಲ್ಲಿ ಇಂದಿನ ಚಿನ್ನ, ಬೆಳ್ಳಿ ಬೆಲೆ ಹೀಗಿದೆ

Gold Rate: ಕಡಿಮೆ ಆದರೂ ಆಭರಣಪ್ರಿಯರಿಗಿಲ್ಲ ಖುಷಿ; ಕರ್ನಾಟಕ, ಹೊರ ರಾಜ್ಯಗಳಲ್ಲಿ ಇಂದಿನ ಚಿನ್ನ, ಬೆಳ್ಳಿ ಬೆಲೆ ಹೀಗಿದೆ

Gold Rate: ಚಿನ್ನ, ಬೆಳ್ಳಿ ಬೆಲೆ ದಿನೇ ದಿನೆ ಏರಿಕೆ ಆಗುತ್ತಲೇ ಇದೆ. ಕಳೆದ 4-5 ತಿಂಗಳಿಗೆ ಹೋಲಿಸಿದರೆ ಇಂದಿಗೆ ಚಿನ್ನದ ಬೆಲೆ 6,649 ರೂ. ಮುಟ್ಟಿದೆ. ನಿನ್ನೆಗಿಂತ ಚಿನ್ನ 1 ರೂ. ಇಳಿಕೆ ಆದರೂ ಆಭರಣಪ್ರಿಯರು ನಿರಾಸೆಯಾಗಿದ್ದಾರೆ. ಇಂದು ಕರ್ನಾಟಕದ ಪ್ರಮುಖ ಜಿಲ್ಲೆಗಳು ಹಾಗೂ ಹೊರ ರಾಜ್ಯಗಳಲ್ಲಿ ಚಿನ್ನ, ಬೆಳ್ಳಿ ದರ ಹೇಗಿದೆ ನೋಡೋಣ.

 ಏಪ್ರಿಲ್‌ 15ರ ಚಿನ್ನ, ಬೆಳ್ಳಿ ದರ
ಏಪ್ರಿಲ್‌ 15ರ ಚಿನ್ನ, ಬೆಳ್ಳಿ ದರ

ಬೆಂಗಳೂರು: ಕಳೆದ ಒಂದು ತಿಂಗಳಿಂದ ಚಿನ್ನದ ದರದಲ್ಲಿ ಏರಿಳಿತವಾಗುತ್ತಲೇ ಇದೆ. ನಾಲ್ಕೈದು ತಿಂಗಳ ಹಿಂದೆ 5,800ರ ಆಸು ಪಾಸಿನಲ್ಲಿದ್ದ ಚಿನ್ನದ ಬೆಲೆ ಇಂದು 6,500ಕ್ಕೂ ಹೆಚ್ಚಾಗಿದೆ. ಆಭರಣ ಮಾಡಿಸಬೇಕು ಎನ್ನುವವರಿಗೆ ಚಿನ್ನ ಗಗನ ಕುಸುಮವಾಗಿದೆ. ಚಿನ್ನದ ಬೆಲೆ ನಿನ್ನೆಗಿಂತ ಕಡಿಮೆ ಆದರೂ ಬೆಲೆಯಲ್ಲಿ ಅಷ್ಟೇನೂ ವ್ಯತ್ಯಾಸವಾಗಿಲ್ಲ. ಏಕೆಂದರೆ ಭಾನುವಾರಕ್ಕಿಂತ ಸೋಮವಾರ ಚಿನ್ನದ ಬೆಲೆ 1 ರೂಪಾಯಿ ಮಾತ್ರ ಇಳಿಕೆ ಆಗಿದೆ. ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ, ಬೆಳ್ಳಿ ಬೆಲೆ ಹೇಗಿದೆ ನೋಡೋಣ.

22 ಕ್ಯಾರೆಟ್‌ ಚಿನ್ನದ ಬೆಲೆ

22 ಕ್ಯಾರೆಟ್‌ ಚಿನ್ನಕ್ಕೆ ಒಂದು ಗ್ರಾಂಗೆ 1 ರೂಪಾಯಿ ಇಳಿಕೆ ಆಗಿದೆ. ಇದರ ಪ್ರಕಾರ 8 ಗ್ರಾಂಗೆ 53,192 ರೂ. 10 ಗ್ರಾಂಗೆ 66,490 ರೂ. 100 ಗ್ರಾಂ ಚಿನ್ನಕ್ಕೆ 6,64,900 ರೂ ಬೆಲೆ ನಿಗದಿ ಆಗಿದೆ.

24 ಕ್ಯಾರೆಟ್‌ ಚಿನ್ನದ ಬೆಲೆ

24 ಕ್ಯಾರೆಟ್‌ ಚಿನ್ನಕ್ಕೆ 1 ಗ್ರಾಂಗೆ ಇಂದು 7,254 ರೂ. 8 ಗ್ರಾಂಗೆ 58,032 ರೂ. 10 ಗ್ರಾಂಗೆ 72,540 ರೂ. 100 ಗ್ರಾಂಗೆ 7,25,400 ರೂ. ಬೆಲೆ ನಿಗದಿ ಆಗಿದೆ.

ಕರ್ನಾಟಕದಲ್ಲಿ ಚಿನ್ನದ ಬೆಲೆ ( 10 ಗ್ರಾಂ)

ಬೆಂಗಳೂರು, ಮಂಗಳೂರು, ದಾವಣಗೆರೆ, ಮಂಡ್ಯ, ಶಿವಮೊಗ್ಗ, ಮೈಸೂರು, ಬೆಳಗಾವಿ, ಹುಬ್ಬಳ್ಳಿ, ಧಾರವಾಡ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಚಿನ್ನದ ಬೆಲೆ 22 ಕ್ಯಾರೆಟ್‌ಗೆ 66,490 ರೂ. ಹಾಗೂ 24 ಕ್ಯಾರೆಟ್‌ಗೆ 72,540 ರೂ. ನಿಗದಿ ಆಗಿದೆ. ದರ ಒಂದೇ ಇದ್ದರೂ ಆದರೆ ಮಜೂರಿ, ಇತರೆ ಶುಲ್ಕಗಳಲ್ಲಿ ವ್ಯತ್ಯಾಸವಿರಬಹುದು.

ಹೊರ ರಾಜ್ಯಗಳಲ್ಲಿ ಚಿನ್ನದ ದರ (10 ಗ್ರಾಂ)

ಚೆನ್ನೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 68,560 24 ಕ್ಯಾರೆಟ್‌ಗೆ 74,790 ರೂ. , ಮುಂಬೈನಲ್ಲಿ 22 ಕ್ಯಾರೆಟ್‌ಗೆ 66,490 ರೂ. ಹಾಗೂ 24 ಕ್ಯಾರೆಟ್‌ಗೆ 72,540 ರೂ. ನವದೆಹಲಿಯಲ್ಲಿ 66,640 ರೂ. 72,690 ರೂ. ಕೊಲ್ಕತ್ತಾದಲ್ಲಿ 66,490 ರೂ. 24 ಕ್ಯಾರೆಟ್‌ಗೆ 72,540 ಮುತ್ತಿನ ನಗರಿ ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ಗೆ 66,490 ರೂ. 24 ಕ್ಯಾರೆಟ್‌ಗೆ 72,540 ರೂ. ಕೇರಳದಲ್ಲಿ 22 ಕ್ಯಾರೆಟ್‌ಗೆ 66,490 ರೂ. ಹಾಗೂ 24 ಕ್ಯಾರೆಟ್‌ಗೆ 72,540 ಪುಣೆಯಲ್ಲಿ 22 ಕ್ಯಾರೆಟ್‌ಗೆ 66,490 ರೂ. 24 ಕ್ಯಾರೆಟ್‌ಗೆ 72,540 ವಡೋಧರಾದಲ್ಲಿ 24 ಕ್ಯಾರೆಟ್‌ಗೆ 66,540 ರೂ. ಹಾಗೂ 24 ಕ್ಯಾರೆಟ್‌ಗೆ 72,590 ರೂ. ಅಹಮದಾಬಾದ್‌ನಲ್ಲಿ 22 ಕ್ಯಾರೆಟ್‌ ಚಿನ್ನಕ್ಕೆ 66,540 ರೂ. ಹಾಗೂ 24 ಕ್ಯಾರೆಟ್‌ಗೆ 72,590 ರೂ. ಬೆಲೆ ನಿಗದಿ ಆಗಿದೆ.

ಬೆಳ್ಳಿ ದರ

ಚಿನ್ನದ ದರದಲ್ಲಿ 1 ರೂಪಾಯಿ ಇಳಿಕೆ ಆಗಿದ್ದರೆ ಬೆಳ್ಳಿ ಕೂಡಾ 10 ಪೈಸೆ ಕಡಿಮೆ ಆಗಿದೆ. ಇಂದು

1 ಗಾಂ ಬೆಳ್ಳಿಗೆ 84.65 ರೂ. 8 ಗ್ರಾಂಗೆ 677.20 ರೂ. 10 ಗ್ರಾಂಗೆ 846.50 ರೂ. 100 ಗ್ರಾಂಗೆ 8,465 ರೂ. 1 ಕಿಲೋ ಬೆಳ್ಳಿಗೆ 84,650 ರೂ. ಬೆಲೆ ಫಿಕ್ಸ್‌ ಆಗಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.