ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Rate Today: ವಾರದ ಬಳಿಕ ಇಳಿಕೆಯಾದ ಬಂಗಾರದ ಬೆಲೆ, ಬೆಳ್ಳಿ ಏರಿಕೆ; ಕರ್ನಾಟಕದ ಚಿನ್ನದ ದರ ಗಮನಿಸಿ

Gold Rate Today: ವಾರದ ಬಳಿಕ ಇಳಿಕೆಯಾದ ಬಂಗಾರದ ಬೆಲೆ, ಬೆಳ್ಳಿ ಏರಿಕೆ; ಕರ್ನಾಟಕದ ಚಿನ್ನದ ದರ ಗಮನಿಸಿ

ಚಿನ್ನದ ಬೆಲೆ ಏರಿಕೆಯ ಭಯದಲ್ಲಿದ್ದ ಬಂಗಾರ ಪ್ರಿಯರಿಗೆ ಇಂದು (ಏಪ್ರಿಲ್‌ 14) ತುಸು ನೆಮ್ಮದಿ ಅನ್ನಿಸಬಹುದು. ವಾರಗಳಿಂದ ಏರುತ್ತಲೇ ಇದ್ದ ಚಿನ್ನ ದರ ಕೊಂಚ ಕಡಿಮೆಯಾಗಿದೆ. 10 ಗ್ರಾಂ ಚಿನ್ನದ ಮೇಲೆ 700 ರೂ ಕಡಿಮೆಯಾಗಿದ್ದರೆ, 10 ಗ್ರಾಂ ಬೆಳ್ಳಿ ಮೇಲೆ 200 ರೂ ಹೆಚ್ಚಾಗಿದೆ.

ಏಪ್ರಿಲ್‌ 14ರ ಚಿನ್ನ, ಬೆಳ್ಳಿ ದರ
ಏಪ್ರಿಲ್‌ 14ರ ಚಿನ್ನ, ಬೆಳ್ಳಿ ದರ

ಬೆಂಗಳೂರು: ಭಾರತದಲ್ಲಿ ಚಿನ್ನದ ದರ ಏರಿಳಿತ ಸಾಮಾನ್ಯ. ಆದರೆ ಕಳೆದೊಂದು ವಾರದಿಂದ ಭಾರಿ ಏರಿಕೆ ಕಂಡಿತ್ತು ಹಳದಿ ಲೋಹ. ಮದುವೆ ಕಾರ್ಯಕ್ರಮಗಳು ಹೆಚ್ಚು ನಡೆಯುವ ಏಪ್ರಿಲ್‌ ತಿಂಗಳಲ್ಲಿ ಈ ಪಾಠಿ ಚಿನ್ನದ ದರ ಹೆಚ್ಚುತ್ತಿರುವುದು ಗ್ರಾಹಕರಿಗೆ ನುಂಗಲಾರದ ತುತ್ತಾಗಿತ್ತು. ಆದರೆ ಇದೀಗ ಚಿನ್ನದ ದರದಲ್ಲಿ ಕೊಂಚ ಇಳಿಕೆಯಾಗಿದೆ. ಭಾನುವಾರ ಚಿನ್ನ ಖರೀದಿ ಮಾಡೋಣ ಎಂದುಕೊಂಡವರಿಗೆ ಇದು ಗುಡ್‌ನ್ಯೂಸ್‌ ಆಗುವುದರಲ್ಲಿ ಅನುಮಾನವಿಲ್ಲ. ಇನ್ನು ಬೆಳ್ಳಿ ದರ ಮತ್ತೆ ಏರಿಕೆಯಾಗಿದೆ. ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಸೇರಿದಂತೆ ಉತ್ತರದ ರಾಜ್ಯಗಳಲ್ಲಿ ಚಿನ್ನದ ದರ ಎಷ್ಟಿದೆ ಗಮನಿಸಿ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಟ್ರೆಂಡಿಂಗ್​ ಸುದ್ದಿ

22 ಕ್ಯಾರೆಟ್‌ ಚಿನ್ನದ ಬೆಲೆ

ಇಂದು 1 ಗ್ರಾಂ ಚಿನ್ನಕ್ಕೆ 6,650 ರೂ. ಇದೆ. ನಿನ್ನೆ 6,720 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 70 ರೂ ಇಳಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 53,200 ರೂ. ನೀಡಬೇಕು. ನಿನ್ನೆ 53,760 ರೂ ಇದ್ದು, ನಿನ್ನೆ ದರಕ್ಕೆ ಹೋಲಿಸಿದರೆ ಇಂದು 560 ರೂ. ಕಡಿಮೆಯಾಗಿದೆ. 10 ಗ್ರಾಂ ಚಿನ್ನಕ್ಕೆ 66,500 ರೂ ಇದೆ. ನಿನ್ನೆ 67,200 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 700 ರೂ. ಇಳಿಕೆಯಾಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 6,65,000 ರೂ. ನೀಡಬೇಕು. ನಿನ್ನೆ 6,72,000 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 7,000 ರೂ. ಕಡಿಮೆಯಾಗಿದೆ.

24 ಕ್ಯಾರೆಟ್‌ ಚಿನ್ನದ ಬೆಲೆ

24 ಕ್ಯಾರೆಟ್‌ ಚಿನ್ನಕ್ಕೆ 1 ಗ್ರಾಂಗೆ 7,255 ರೂ. ಇದೆ. ನಿನ್ನೆ 7,331 ರೂ. ಇದು ಈ ದರಕ್ಕೆ ಹೋಲಿಸಿದರೆ 76 ರೂ ಇಳಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 58,040 ರೂ. ನೀಡಬೇಕು. ನಿನ್ನೆ 58,648 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 608 ರೂ. ಕಡಿಮೆಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 72,550 ನೀಡಬೇಕು. ನಿನ್ನೆ 73,310 ರೂ. ಇದ್ದು, ಈ ದರಕ್ಕೆ ಹೋಲಿಸಿದರೆ 760 ರೂ ಕಡಿಮೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ 7,25,500 ರೂ. ಇದೆ. ನಿನ್ನೆ 7,33,100 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 7,600 ರೂ ಕಡಿಮೆಯಾಗಿದೆ.

ಕರ್ನಾಟಕದಲ್ಲಿ ಚಿನ್ನದ ಬೆಲೆ (10 ಗ್ರಾಂ)

ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 66,500 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 72,550 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.

ಹೊರ ರಾಜ್ಯಗಳಲ್ಲಿ ಚಿನ್ನದ ದರ (10 ಗ್ರಾಂ)

ಚೆನ್ನೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 67,800 ರೂ. 24 ಕ್ಯಾರೆಟ್‌ಗೆ 73,960 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 66,500 ರೂ. 24 ಕ್ಯಾರೆಟ್‌ಗೆ 72,550 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 66,650 ರೂ. 24 ಕ್ಯಾರೆಟ್‌ಗೆ 72,700 ರೂ. ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 66,500 ರೂ. 24 ಕ್ಯಾರೆಟ್‌ಗೆ 72,550 ರೂ. ಇದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 66,500 ರೂ. ಇದ್ದರೆ, 24 ಕ್ಯಾರೆಟ್‌ಗೆ 72,550 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 66,500 ರೂ. 24 ಕ್ಯಾರೆಟ್‌ಗೆ 72,550 ರೂ. ಆಗಿದೆ.

ಬೆಳ್ಳಿ ದರ

ಇಂದು ಬೆಳ್ಳಿ ಹೆಚ್ಚಾಗಿದೆ. ಒಂದು ಗ್ರಾಂ ಬೆಳ್ಳಿಗೆ 86.25 ರೂ. ಇದೆ. 8 ಗ್ರಾಂಗೆ 690 ರೂ ಇದ್ದರೆ, 10 ಗ್ರಾಂಗೆ 862.50 ರೂ. ಇದೆ. 100 ಗ್ರಾಂಗೆ 8,625 ರೂ. ಹಾಗೂ 1 ಕಿಲೋಗೆ 86,250 ರೂ. ಬೆಲೆ ನಿಗದಿ ಆಗಿದೆ.

IPL_Entry_Point