ಕನ್ನಡ ಸುದ್ದಿ  /  Nation And-world  /  Business News Gold Silver Rate Today April 2nd 2024 India Gold Rate Bengaluru Mangaluru Mysure Davanagere Rst

Gold Rate: ತುಸು ಇಳಿಕೆಯಾದ ಬೆನ್ನಲ್ಲೇ ಮತ್ತೆ ಭಾರಿ ಏರಿಕೆ ಕಂಡ ಬಂಗಾರದ ಬೆಲೆ; ಬೆಳ್ಳಿ ದರವೂ ಹೆಚ್ಚಳ

ಬಂಗಾರದ ದರದಲ್ಲಿ ಹಾವು–ಏಣಿಯಾಟ ನಡೆಯುತ್ತಿದೆ. ಒಂದು ದಿನ ಇಳಿಕೆಯಾದರೆ ಮತ್ತೊಂದು ದಿನ ದುಪ್ಪಟ್ಟು ಏರಿಕೆಯಾಗುತ್ತಿದೆ. ಮಾರ್ಚ್‌ ಅಂತ್ಯಕ್ಕೆ ಭಾರಿ ಏರಿಕೆ ಕಂಡಿದ್ದ ಬಂಗಾರದ ಬೆಲೆ ಏಪ್ರಿಲ್‌ ತಿಂಗಳ ಮೊದಲ ದಿನ ಇಳಿಕೆಯಾಗಿತ್ತು. ಇದೀಗ ಮತ್ತೆ ದುಪ್ಪಟ್ಟು ಹೆಚ್ಚಾಗಿದೆ. ಇಂದು (ಏಪ್ರಿಲ್‌ 2) ಬೆಳ್ಳಿ ಬೆಲೆಯೂ ಹೆಚ್ಚಾಗಿದೆ.

ಏಪ್ರಿಲ್‌ 2ರ ಚಿನ್‌, ಬೆಳ್ಳಿ ದರ
ಏಪ್ರಿಲ್‌ 2ರ ಚಿನ್‌, ಬೆಳ್ಳಿ ದರ (REUTERS)

ಬೆಂಗಳೂರು: ಮಾರ್ಚ್‌ ಕಥೆ ಹೇಗೋ ಮುಗಿಯಿತು, ಏಪ್ರಿಲ್‌ ತಿಂಗಳಿನಲ್ಲಾದರೂ ಚಿನ್ನದ ದರ ಕಡಿಮೆಯಾಗಬಹುದು ಎಂದು ನಿರೀಕ್ಷೆ ಇರಿಸಿಕೊಂಡವರಿಗೆ ಈ ದಿನ ನಿರಾಸೆ ಕಾಡುವುದು ಖಂಡಿತ. ಯಾಕೆಂದರೆ ತುಸು ಇಳಿಕೆ ಕಂಡು ಸಾಮಾಧಾನ ಮೂಡಿಸಿದ್ದ ಚಿನ್ನದ ದರ ಇದೀಗ ಇಂದು (ಏಪ್ರಿಲ್‌ ) ಮತ್ತೆ ಏರಿಕೆಯಾಗಿದೆ. ಮಂಗಳವಾರ ಬೆಳ್ಳಿ ದರದಲ್ಲೂ ಹೆಚ್ಚಳವಾಗಿದೆ. ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಇಂದು ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ ಗಮನಿಸಿ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

22 ಕ್ಯಾರೆಟ್‌ ಚಿನ್ನದ ಬೆಲೆ

ಇಂದು 1 ಗ್ರಾಂ ಚಿನ್ನಕ್ಕೆ 6,360 ರೂ. ಆಗಿದೆ. ನಿನ್ನೆ 6,275 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 85 ರೂ ಹೆಚ್ಚಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 50,880 ರೂ. ನೀಡಬೇಕು. ನಿನ್ನೆ 50,200 ರೂ ಇದ್ದು, ನಿನ್ನೆ ದರಕ್ಕೆ ಹೋಲಿಸಿದರೆ ಇಂದು 680 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನಕ್ಕೆ 63,600 ರೂ ಆಗಿದೆ. ನಿನ್ನೆ 62,750 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 850 ರೂ. ಹೆಚ್ಚಾಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 6,36,500 ರೂ. ನೀಡಬೇಕು. ನಿನ್ನೆ 6,27,500 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 8,500 ರೂ. ಏರಿಕೆಯಾಗಿದೆ.

24 ಕ್ಯಾರೆಟ್‌ ಚಿನ್ನದ ಬೆಲೆ

24 ಕ್ಯಾರೆಟ್‌ ಚಿನ್ನಕ್ಕೆ 1 ಗ್ರಾಂಗೆ 6,938 ರೂ. ಆಗಿದೆ. ನಿನ್ನೆ 6,845 ರೂ. ಇದು ಈ ದರಕ್ಕೆ ಹೋಲಿಸಿದರೆ 93 ರೂ ಹೆಚ್ಚಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 55,504 ರೂ. ನೀಡಬೇಕು. ನಿನ್ನೆ 54,760 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 744 ರೂ. ಏರಿಕೆಯಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 69,380 ನೀಡಬೇಕು. ನಿನ್ನೆ 68,450 ರೂ. ಇದ್ದು, ಈ ದರಕ್ಕೆ ಹೋಲಿಸಿದರೆ 930 ರೂ ಹೆಚ್ಚಾಗಿದೆ. 100 ಗ್ರಾಂ ಚಿನ್ನದ ಬೆಲೆ 6,93,800 ರೂ. ಇದೆ. ನಿನ್ನೆ 6,84,500 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 9,300 ರೂ ಕಡಿಮೆಯಾಗಿದೆ.

ಕರ್ನಾಟಕದಲ್ಲಿ ಚಿನ್ನದ ಬೆಲೆ (10 ಗ್ರಾಂ)

ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 63,600 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 69,380 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.

ಹೊರ ರಾಜ್ಯಗಳಲ್ಲಿ ಚಿನ್ನದ ದರ (10 ಗ್ರಾಂ)

ಚೆನ್ನೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 64,550 ರೂ. 24 ಕ್ಯಾರೆಟ್‌ಗೆ 70,420 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 63,600 ರೂ. 24 ಕ್ಯಾರೆಟ್‌ಗೆ 69,380 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 63,750 ರೂ. 24 ಕ್ಯಾರೆಟ್‌ಗೆ 69,530 ರೂ. ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 63,600 ರೂ. 24 ಕ್ಯಾರೆಟ್‌ಗೆ 69,380 ರೂ. ಇದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 63,600 ರೂ. ಇದ್ದರೆ, 24 ಕ್ಯಾರೆಟ್‌ಗೆ 69,380 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 63,600 ರೂ. 24 ಕ್ಯಾರೆಟ್‌ಗೆ 69,380 ರೂ. ಆಗಿದೆ.

ಬೆಳ್ಳಿ ದರ

ಇಂದು ಬೆಳ್ಳಿ ದರ ಸ್ಥಿರವಾಗಿದೆ. ಒಂದು ಗ್ರಾಂ ಬೆಳ್ಳಿಗೆ 77.50 ರೂ. ಇದೆ. 8 ಗ್ರಾಂಗೆ 620 ರೂ ಇದ್ದರೆ, 10 ಗ್ರಾಂಗೆ 775 ರೂ. ಇದೆ. 100 ಗ್ರಾಂಗೆ 7,750 ರೂ. ಹಾಗೂ 1 ಕಿಲೋಗೆ 77,500 ರೂ. ಬೆಲೆ ನಿಗದಿ ಆಗಿದೆ.

IPL_Entry_Point