ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Rate Today: ವಾರಾಂತ್ಯದಲ್ಲಿ ಚಿನ್ನದ ದರ ಏರಿಕೆಗೆ ಬ್ರೇಕ್‌, ತುಸು ಕಡಿಮೆಯಾಯ್ತು ಬಂಗಾರದ ಬೆಲೆ; ಬೆಳ್ಳಿ ದರ ಇಂದೂ ಹೆಚ್ಚಳ

Gold Rate Today: ವಾರಾಂತ್ಯದಲ್ಲಿ ಚಿನ್ನದ ದರ ಏರಿಕೆಗೆ ಬ್ರೇಕ್‌, ತುಸು ಕಡಿಮೆಯಾಯ್ತು ಬಂಗಾರದ ಬೆಲೆ; ಬೆಳ್ಳಿ ದರ ಇಂದೂ ಹೆಚ್ಚಳ

ಚಿನ್ನದ ದರ ಏರಿಕೆಯಾಗುತ್ತಿದೆ ಎಂದು ನಿರಾಸೆಯಲ್ಲಿರುವ ಆಭರಣ ಪ್ರಿಯರಿಗೆ ಇಲ್ಲಿದೆ ಖುಷಿ ಸುದ್ದಿ. ಇಂದು (ಏಪ್ರಿಲ್‌ 6) ಚಿನ್ನದ ದರ ತುಸು ಇಳಿಕೆಯಾಗಿದೆ. ಆದರೆ ಬೆಳ್ಳಿ ದರ ಏರುತ್ತಲೇ ಇದೆ. ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಇಂದು ಚಿನ್ನದ ದರ ಎಷ್ಟಿದೆ ಗಮನಿಸಿ.

ಏಪ್ರಿಲ್‌ 6ರ ಚಿನ್ನ-ಬೆಳ್ಳಿ ದರ
ಏಪ್ರಿಲ್‌ 6ರ ಚಿನ್ನ-ಬೆಳ್ಳಿ ದರ

ಬೆಂಗಳೂರು: ಆಭರಣದ ದರದಲ್ಲಿ ಮತ್ತೆ ಹಾವು ಏಣಿಯಾಟ ಶುರುವಾಗಿದೆ. ಕಳೆದೆರಡು ದಿನಗಳಿಂದ ನಿರಂತರ ಏರಿಕೆ ಕಂಡಿದ್ದ ಬಂಗಾರದ ಬೆಲೆ ಇದೀಗ ಇಳಿಕೆಯಾಗಿದೆ. ನಿನ್ನೆಯ ದರಕ್ಕೆ ಹೋಲಿಸಿದರೆ 10ಗ್ರಾಂ ಚಿನ್ನದ ಮೇಲೆ 450 ರೂ ಇಳಿಕೆಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿದಿನ ಚಿನ್ನದ ದರ ಹೆಚ್ಚುತ್ತಲೇ ಇರುವ ಕಾರಣ ನಾಳೆ ಏನಾಗಬಹುದು ಎಂಬುದನ್ನು ಊಹಿಸುವುದು ಕಷ್ಟವಾಗಿದೆ. ಆದರೆ ಬೆಳ್ಳಿ ದರ ಹೆಚ್ಚುತ್ತಿದೆ. ಯುಗಾದಿ ಹಬ್ಬದ ಸಂದರ್ಭ ಬೆಳ್ಳಿ ಖರೀದಿ ಮಾಡುವವರ ಸಂಖ್ಯೆ ಹೆಚ್ಚಿದ್ದು, ಬೆಳ್ಳಿ ದರ ಏರಿಕೆಯು ಬೇಸರ ಮೂಡಿಸಿದೆ. ಇಂದು ದೇಶಗಳಲ್ಲಿ 22 ಕ್ಯಾರೆಟ್‌ ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ ಎಷ್ಟಿದೆ ಗಮನಿಸಿ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಟ್ರೆಂಡಿಂಗ್​ ಸುದ್ದಿ

22 ಕ್ಯಾರೆಟ್‌ ಚಿನ್ನದ ಬೆಲೆ

ಇಂದು 1 ಗ್ರಾಂ ಚಿನ್ನಕ್ಕೆ 6,415 ರೂ. ಇದೆ. ನಿನ್ನೆ 6,460 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 45 ರೂ ಇಳಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 51,320 ರೂ. ನೀಡಬೇಕು. ನಿನ್ನೆ 51,680 ರೂ ಇದ್ದು, ನಿನ್ನೆ ದರಕ್ಕೆ ಹೋಲಿಸಿದರೆ ಇಂದು 360 ರೂ. ಕಡಿಮೆಯಾಗಿದೆ. 10 ಗ್ರಾಂ ಚಿನ್ನಕ್ಕೆ 64,150 ರೂ ಇದೆ. ನಿನ್ನೆ 64,600 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 450 ರೂ. ಕಡಿಮೆಯಾಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 6,41,500 ರೂ. ನೀಡಬೇಕು. ನಿನ್ನೆ 6,46,000 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 4,500 ರೂ. ಇಳಕೆಯಾಗಿದೆ.

24 ಕ್ಯಾರೆಟ್‌ ಚಿನ್ನದ ಬೆಲೆ

24 ಕ್ಯಾರೆಟ್‌ ಚಿನ್ನಕ್ಕೆ 1 ಗ್ರಾಂಗೆ 6,998 ರೂ. ಇದೆ. ನಿನ್ನೆ 7,047 ರೂ. ಇದು ಈ ದರಕ್ಕೆ ಹೋಲಿಸಿದರೆ 49 ರೂ ಕಡಿಮೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 55,984 ರೂ. ನೀಡಬೇಕು. ನಿನ್ನೆ 56,376 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 392 ರೂ. ಕಡಿಮೆಯಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 69,980 ನೀಡಬೇಕು. ನಿನ್ನೆ 70,470 ರೂ. ಇದ್ದು, ಈ ದರಕ್ಕೆ ಹೋಲಿಸಿದರೆ 490 ರೂ ಕಡಿಮೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ 6,99,800 ರೂ. ಇದೆ. ನಿನ್ನೆ 7,04,700 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 4,900 ರೂ ಇಳಕೆಯಾಗಿದೆ.

ಕರ್ನಾಟಕದಲ್ಲಿ ಚಿನ್ನದ ಬೆಲೆ (10 ಗ್ರಾಂ)

ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 64,150 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 69,980 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.

ಹೊರ ರಾಜ್ಯಗಳಲ್ಲಿ ಚಿನ್ನದ ದರ (10 ಗ್ರಾಂ)

ಚೆನ್ನೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 65,100 ರೂ. 24 ಕ್ಯಾರೆಟ್‌ಗೆ 71,020 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 64,150 ರೂ. 24 ಕ್ಯಾರೆಟ್‌ಗೆ 69,980 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 64,300 ರೂ. 24 ಕ್ಯಾರೆಟ್‌ಗೆ 70,130 ರೂ. ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 64,150 ರೂ. 24 ಕ್ಯಾರೆಟ್‌ಗೆ 69,980 ರೂ. ಇದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 64,150 ರೂ. ಇದ್ದರೆ, 24 ಕ್ಯಾರೆಟ್‌ಗೆ 69,980 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 64,150 ರೂ. 24 ಕ್ಯಾರೆಟ್‌ಗೆ 69,980 ರೂ. ಆಗಿದೆ.

ಬೆಳ್ಳಿ ದರ

ಇಂದು ಬೆಳ್ಳಿ ದರ ಕೂಡ ಹೆಚ್ಚಾಗಿದೆ. ಒಂದು ಗ್ರಾಂ ಬೆಳ್ಳಿಗೆ 81.50 ರೂ. ಇದೆ. 8 ಗ್ರಾಂಗೆ 652 ರೂ ಇದ್ದರೆ, 10 ಗ್ರಾಂಗೆ 815 ರೂ. ಇದೆ. 100 ಗ್ರಾಂಗೆ 8,150 ರೂ. ಹಾಗೂ 1 ಕಿಲೋಗೆ 81,500 ರೂ. ಬೆಲೆ ನಿಗದಿ ಆಗಿದೆ.

IPL_Entry_Point