ಕನ್ನಡ ಸುದ್ದಿ  /  Nation And-world  /  Business News Gold Silver Rate Today Feb 21st 2024 India Gold Rate Bengaluru Mangaluru Mysure Davanagere Rst

Gold Rate: ಸತತ ಏರಿಕೆಯ ಬಳಿಕ ಇಳಿಕೆಯಾಯ್ತು ಚಿನ್ನದ ದರ, ಇಂದು ಬೆಳ್ಳಿ ದರವೂ ಕುಸಿತ

ಕಳೆದ ಮೂರ್ನಾಲ್ಕು ದಿನಗಳಿಂದ ಏರುತ್ತಲೇ ಇದ್ದ ಚಿನ್ನದ ದರ ಇಂದು (ಫೆ. 21) ಇಳಿಕೆಯಾಗಿದೆ. ಆ ಮೂಲಕ ಆಭರಣ ಪ್ರಿಯರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಇಂದು ಬೆಳ್ಳಿ ದರ ಕೂಡ ಕಡಿಮೆಯಾಗಿದೆ.

ಸತತ ಏರಿಕೆಯ ಬಳಿಕ ಇಳಿಕೆಯಾಯ್ತು ಚಿನ್ನದ ದರ, ಇಂದು ಬೆಳ್ಳಿ ದರವೂ ಕುಸಿತ
ಸತತ ಏರಿಕೆಯ ಬಳಿಕ ಇಳಿಕೆಯಾಯ್ತು ಚಿನ್ನದ ದರ, ಇಂದು ಬೆಳ್ಳಿ ದರವೂ ಕುಸಿತ (PTI)

ಬೆಂಗಳೂರು: ಚಿನ್ನದ ದರ ಯಾವಾಗ ಏರಿಕೆಯಾಗುತ್ತದೆ, ಯಾವಾಗ ಇಳಿಕೆಯಾಗುತ್ತದೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಕಳೆದ ಮೂರು ದಿನಗಳಿಂದ ಏರಿಕೆಯ ಪರ್ವದಲ್ಲಿದ್ದ ಚಿನ್ನದ ದರ ಇದೀಗ ಇಳಿಕೆಯಾಗಿದೆ. ಇಂದು ಚಿನ್ನದೊಂದಿಗೆ ಬೆಳ್ಳಿ ದರವೂ ಕೂಡ ಕೊಂಚ ಕಡಿಮೆಯಾಗಿದೆ. ನೀವು ಚಿನ್ನದ ಖರೀದಿ ಮಾಡಬೇಕು ಅಂತಿದ್ರೆ ಇಂದು ರಾಜ್ಯದಲ್ಲಿ ಚಿನ್ನದ ದರ ಎಷ್ಟಿದೆ ಗಮನಿಸಿ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

22 ಕ್ಯಾರೆಟ್‌ ಚಿನ್ನದ ಬೆಲೆ

ಇಂದು 1 ಗ್ರಾಂ ಚಿನ್ನಕ್ಕೆ 5,735 ರೂ. ಆಗಿದೆ. ನಿನ್ನೆ 5,745 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 10 ರೂ ಕಡಿಮೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 45,880 ರೂ. ನೀಡಬೇಕು. ನಿನ್ನೆ 45,960 ರೂ ಇದ್ದು ಈ ದರಕ್ಕೆ ಹೋಲಿಸಿದರೆ 80 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನಕ್ಕೆ 57,350 ರೂ ಆಗಿದೆ. ನಿನ್ನೆ 57,450 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 100 ರೂ ಕಡಿಮೆಯಾಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 5,73,500 ರೂ. ನೀಡಬೇಕು. ನಿನ್ನೆ 5,74,500 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 1,000 ಇಳಿಕೆಯಾಗಿದೆ.

24 ಕ್ಯಾರೆಟ್‌ ಚಿನ್ನದ ಬೆಲೆ

24 ಕ್ಯಾರೆಟ್‌ ಚಿನ್ನಕ್ಕೆ 1 ಗ್ರಾಂಗೆ 6,256 ರೂ. ಆಗಿದೆ. ನಿನ್ನೆ 6,267 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 11 ರೂ. ಕಡಿಮೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 50,048 ರೂ. ನೀಡಬೇಕು. ನಿನ್ನೆ 50,136 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 88 ರೂ ಇಳಿಕೆಯಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 62,560 ನೀಡಬೇಕು. ನಿನ್ನೆ 62,670 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 110 ರೂ ಕಡಿಮೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ 6,25,600 ರೂ. ಇದೆ. ನಿನ್ನೆ 6,26,700 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 1,100 ರೂ. ಇಳಿಕೆಯಾಗಿದೆ.

ಕರ್ನಾಟಕದಲ್ಲಿ ಚಿನ್ನದ ಬೆಲೆ (10 ಗ್ರಾಂ)

ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 57,350 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 62,560 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.

ಹೊರ ರಾಜ್ಯಗಳಲ್ಲಿ ಚಿನ್ನದ ದರ (10 ಗ್ರಾಂ)

ಚೆನ್ನೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 57,850 ರೂ. 24 ಕ್ಯಾರೆಟ್‌ಗೆ 63,110 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 57,350 ರೂ. 24 ಕ್ಯಾರೆಟ್‌ಗೆ 62,560 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 57,500 ರೂ. 24 ಕ್ಯಾರೆಟ್‌ಗೆ 62,710 ರೂ. ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 57,350 ರೂ. 24 ಕ್ಯಾರೆಟ್‌ಗೆ 62,560 ರೂ. ಇದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 57,350 ರೂ. ಇದ್ದರೆ, 24 ಕ್ಯಾರೆಟ್‌ಗೆ 62,560 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 57,350 ರೂ. 24 ಕ್ಯಾರೆಟ್‌ಗೆ 62,560 ರೂ. ಇದೆ.

ಬೆಳ್ಳಿ ದರ

ಇಂದು ಬೆಳ್ಳಿ ಬೆಲೆ ಕಡಿಮೆಯಾಗಿದೆ. ಒಂದು ಗ್ರಾಂ ಬೆಳ್ಳಿಗೆ 72.50 ರೂ. ಇದೆ. 8 ಗ್ರಾಂಗೆ 580 ರೂ ಇದ್ದರೆ, 10 ಗ್ರಾಂಗೆ 725 ರೂ. ಇದೆ. 100 ಗ್ರಾಂಗೆ 7,250 ರೂ. ಹಾಗೂ 1 ಕಿಲೋಗೆ 72,500 ರೂ. ಬೆಲೆ ನಿಗದಿ ಆಗಿದೆ.