Gold Rate: ಆಭರಣ ಪ್ರಿಯರಿಗೆ ಬೇಸರದ ಸುದ್ದಿ, ಮತ್ತೆ ದುಪ್ಪಟ್ಟು ಏರಿಕೆ ಕಂಡ ಚಿನ್ನ, ತಟಸ್ಥವಾಗಿದೆ ಬೆಳ್ಳಿ ದರ
ಕಳೆದ ಮೂರ್ನಾಲ್ಕು ದಿನಗಳಿಂದ ಏರಿಕೆಯಾಗುತ್ತಿದ್ದ ಚಿನ್ನ ದರ ನಿನ್ನೆ (ಫೆ. 21) ಇಳಿಕೆಯಾಗುವ ಮೂಲಕ ಆಭರಣ ಪ್ರಿಯರು ಸಂತಸಗೊಂಡಿದ್ದರು. ಆದರೆ ಇಂದು (ಫೆ.22) ಅವರಿಗೆ ಮತ್ತೆ ನಿರಾಸೆ ಕಾಡಲಿದೆ. ಸ್ವಲ್ಪ ಇಳಿಮುಖವಾಗಿದ್ದ ಹಳದಿ ಲೋಹ ಮತ್ತೆ ದುಪ್ಪಟ್ಟು ಏರಿಕೆಯಾಗಿದೆ.
ಬೆಂಗಳೂರು: ಚಿನ್ನದ ಬೆಲೆ ಇಂದು ನಿನ್ನೆಗಿಂತ ಕಡಿಮೆಯಾಗಬಹುದು ಎಂದು ನಿರೀಕ್ಷೆ ಇರಿಸಿಕೊಂಡವರಿಗೆ ಇಂದು ಭಾರಿ ನಿರಾಸೆ ಕಾಡುವುದು ಖಂಡಿತ. ಕಾರಣ, ನಿನ್ನೆಗಿಂತ ಇಂದು ಹಳದಿ ಲೋಹದ ಬೆಲೆ ದುಪ್ಪಟ್ಟು ಏರಿಕೆಯಾಗಿದೆ. ನಿನ್ನೆ ಕಡಿಮೆಯಾಗಿದ್ದ ಬೆಳ್ಳಿ ದರ ಇಂದು ಸ್ಥಿರವಾಗಿದೆ. ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಇಂದು ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ ಎಂಬುದನ್ನು ತಿಳಿಯಲು ಮುಂದೆ ಓದಿ.
22 ಕ್ಯಾರೆಟ್ ಚಿನ್ನದ ಬೆಲೆ
ಇಂದು 1 ಗ್ರಾಂ ಚಿನ್ನಕ್ಕೆ 5,760 ರೂ. ಆಗಿದೆ. ನಿನ್ನೆ 5,735 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 25 ರೂ ಹೆಚ್ಚಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 46,080 ರೂ. ನೀಡಬೇಕು. ನಿನ್ನೆ 45,880 ರೂ ಇದ್ದು ಈ ದರಕ್ಕೆ ಹೋಲಿಸಿದರೆ 200 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನಕ್ಕೆ 57,600 ರೂ ಆಗಿದ್ದು, ನಿನ್ನೆ 57,350 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 250 ರೂ ಏರಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 5,76,000 ರೂ. ನೀಡಬೇಕು. ನಿನ್ನೆ 5,73,500 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 2,500 ಹೆಚ್ಚಾಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ
24 ಕ್ಯಾರೆಟ್ ಚಿನ್ನಕ್ಕೆ 1 ಗ್ರಾಂಗೆ 6,274 ರೂ. ಆಗಿದೆ. ನಿನ್ನೆ 6,256 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 18 ರೂ. ಹೆಚ್ಚಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 50,192 ರೂ. ನೀಡಬೇಕು. ನಿನ್ನೆ 50,048 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 144 ರೂ ಏರಿಕೆಯಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 62,740 ನೀಡಬೇಕು. ನಿನ್ನೆ 62,560 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 180 ರೂ ಹೆಚ್ಚಾಗಿದೆ. 100 ಗ್ರಾಂ ಚಿನ್ನದ ಬೆಲೆ 6,27,400 ರೂ. ಇದೆ. ನಿನ್ನೆ 6,25,600 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 1,800 ರೂ. ಏರಿಕೆಯಾಗಿದೆ.
ಕರ್ನಾಟಕದಲ್ಲಿ ಚಿನ್ನದ ಬೆಲೆ (10 ಗ್ರಾಂ)
ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 57,600 ರೂ. ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 62,740 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.
ಹೊರ ರಾಜ್ಯಗಳಲ್ಲಿ ಚಿನ್ನದ ದರ (10 ಗ್ರಾಂ)
ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 58,100 ರೂ. 24 ಕ್ಯಾರೆಟ್‌ಗೆ 63,380 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 57,600 ರೂ. 24 ಕ್ಯಾರೆಟ್‌ಗೆ 62,740 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 57,750 ರೂ. 24 ಕ್ಯಾರೆಟ್‌ಗೆ 62,890 ರೂ. ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 57,600 ರೂ. 24 ಕ್ಯಾರೆಟ್‌ಗೆ 62,740 ರೂ. ಇದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 57,600 ರೂ. ಇದ್ದರೆ, 24 ಕ್ಯಾರೆಟ್‌ಗೆ 62,740 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 57,600 ರೂ. 24 ಕ್ಯಾರೆಟ್‌ಗೆ 62,740 ರೂ. ಇದೆ.
ಬೆಳ್ಳಿ ದರ
ಇಂದು ಬೆಳ್ಳಿ ಬೆಲೆ ಕಡಿಮೆಯಾಗಿದೆ. ಒಂದು ಗ್ರಾಂ ಬೆಳ್ಳಿಗೆ 72.50 ರೂ. ಇದೆ. 8 ಗ್ರಾಂಗೆ 580 ರೂ ಇದ್ದರೆ, 10 ಗ್ರಾಂಗೆ 725 ರೂ. ಇದೆ. 100 ಗ್ರಾಂಗೆ 7,250 ರೂ. ಹಾಗೂ 1 ಕಿಲೋಗೆ 72,500 ರೂ. ಬೆಲೆ ನಿಗದಿ ಆಗಿದೆ.