Gold Rate: ಭಾನುವಾರ ಏರಿಕೆಯಾಯ್ತು ಚಿನ್ನದ ದರ, ಬೆಳ್ಳಿ ತುಸು ಇಳಿಕೆ; ಕರ್ನಾಟಕದಲ್ಲಿ ಆಭರಣ ಬೆಲೆ ಎಷ್ಟಿದೆ ಗಮನಿಸಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Rate: ಭಾನುವಾರ ಏರಿಕೆಯಾಯ್ತು ಚಿನ್ನದ ದರ, ಬೆಳ್ಳಿ ತುಸು ಇಳಿಕೆ; ಕರ್ನಾಟಕದಲ್ಲಿ ಆಭರಣ ಬೆಲೆ ಎಷ್ಟಿದೆ ಗಮನಿಸಿ

Gold Rate: ಭಾನುವಾರ ಏರಿಕೆಯಾಯ್ತು ಚಿನ್ನದ ದರ, ಬೆಳ್ಳಿ ತುಸು ಇಳಿಕೆ; ಕರ್ನಾಟಕದಲ್ಲಿ ಆಭರಣ ಬೆಲೆ ಎಷ್ಟಿದೆ ಗಮನಿಸಿ

ಕರ್ನಾಟಕದಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದೆ. ಈ ವಾರ ಬಹುತೇಕ ದಿನ ಇಳಿಕೆಯಾಗಿದೆ ಆಭರಣದ ಬೆಲೆ ವಾರಾಂತ್ಯದಲ್ಲಿ ಏರಿಕೆಯಾಗಿದೆ. ಇಂದು 10 ಗ್ರಾಂ ಚಿನ್ನದ ಮೇಲೆ 200 ರೂ ಹೆಚ್ಚಾಗಿದೆ.

ಭಾನುವಾರ ಏರಿಕೆಯಾಯ್ತು ಚಿನ್ನದ ದರ, ಬೆಳ್ಳಿ ತುಸು ಇಳಿಕೆ; ಕರ್ನಾಟಕದಲ್ಲಿ ಆಭರಣ ಬೆಲೆ ಎಷ್ಟಿದೆ ಗಮನಿಸಿ
ಭಾನುವಾರ ಏರಿಕೆಯಾಯ್ತು ಚಿನ್ನದ ದರ, ಬೆಳ್ಳಿ ತುಸು ಇಳಿಕೆ; ಕರ್ನಾಟಕದಲ್ಲಿ ಆಭರಣ ಬೆಲೆ ಎಷ್ಟಿದೆ ಗಮನಿಸಿ (REUTERS)

ಬೆಂಗಳೂರು: ಭಾರತದಲ್ಲಿ ಚಿನ್ನದ ಮೇಲಿನ ಬೇಡಿಕೆಯೂ ತಗ್ಗುವುದಿಲ್ಲ, ಚಿನ್ನದ ಬೆಲೆಯೂ ತಗ್ಗುವುದಿಲ್ಲ ಅನ್ನುವ ಪರಿಸ್ಥಿತಿ ಇದೆ. ಫೆಬ್ರುವರಿ ತಿಂಗಾಳ್ಯಾಂತಕ್ಕೆ ತಲುಪಿರುವ ಈ ಹೊತ್ತಿನಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ. ಈ ತಿಂಗಳಲ್ಲಿ ಚಿನ್ನದ ಬೆಲೆಯಲ್ಲಿ ಸಾಕಷ್ಟು ಏರಿಳಿತವಿತ್ತು. ಬಹುತೇಕ ದಿನ ಇಳಿಕೆಯಾಗಿದ್ದರೂ ದುಪ್ಪಟ್ಟು ಏರಿಕೆಯ ಕಾರಣ ಚಿನ್ನದ ಬೆಲೆ ತಗ್ಗಿದೆ ಎಂದು ಅನ್ನಿಸುತ್ತಿಲ್ಲ. ಇಂದು ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬುದನ್ನು ತಿಳಿಯಲು ಮುಂದೆ ಓದಿ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

22 ಕ್ಯಾರೆಟ್‌ ಚಿನ್ನದ ಬೆಲೆ

ಇಂದು 1 ಗ್ರಾಂ ಚಿನ್ನಕ್ಕೆ 5,770 ರೂ. ಆಗಿದೆ. ನಿನ್ನೆ 5,750 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 20 ರೂ ಹೆಚ್ಚಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 46,160 ರೂ. ನೀಡಬೇಕು. ನಿನ್ನೆ 46,000 ರೂ ಇದ್ದು ಈ ದರಕ್ಕೆ ಹೋಲಿಸಿದರೆ 160 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನಕ್ಕೆ 57,700 ರೂ ಆಗಿದ್ದು, ನಿನ್ನೆ 57,500 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 200 ರೂ ಏರಿಕೆಯಾಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 5,77,000 ರೂ. ನೀಡಬೇಕು. ನಿನ್ನೆ 5,75,000 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 2,000 ಹೆಚ್ಚಾಗಿದೆ.

24 ಕ್ಯಾರೆಟ್‌ ಚಿನ್ನದ ಬೆಲೆ

24 ಕ್ಯಾರೆಟ್‌ ಚಿನ್ನಕ್ಕೆ 1 ಗ್ರಾಂಗೆ 6,295 ರೂ. ಆಗಿದೆ. ನಿನ್ನೆ 6,273 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 22 ರೂ. ಏರಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 50,360 ರೂ. ನೀಡಬೇಕು. ನಿನ್ನೆ 50,184 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 176 ರೂ ಹೆಚ್ಚಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 62,950 ನೀಡಬೇಕು. ನಿನ್ನೆ 62,730 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 220 ರೂ ಏರಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ 6,29,500 ರೂ. ಇದೆ. ನಿನ್ನೆ 6,27,300 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 2,200 ರೂ. ಹೆಚ್ಚಾಗಿದೆ.

ಕರ್ನಾಟಕದಲ್ಲಿ ಚಿನ್ನದ ಬೆಲೆ (10 ಗ್ರಾಂ)

ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 57,700 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 62,950 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.

ಹೊರ ರಾಜ್ಯಗಳಲ್ಲಿ ಚಿನ್ನದ ದರ (10 ಗ್ರಾಂ)

ಚೆನ್ನೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 58,200 ರೂ. 24 ಕ್ಯಾರೆಟ್‌ಗೆ 63,490 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 57,700 ರೂ. 24 ಕ್ಯಾರೆಟ್‌ಗೆ 62,950 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 57,850 ರೂ. 24 ಕ್ಯಾರೆಟ್‌ಗೆ 63,100 ರೂ. ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 57,700 ರೂ. 24 ಕ್ಯಾರೆಟ್‌ಗೆ 62,950 ರೂ. ಇದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 57,700 ರೂ. ಇದ್ದರೆ, 24 ಕ್ಯಾರೆಟ್‌ಗೆ 62,950 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 57,700 ರೂ. 24 ಕ್ಯಾರೆಟ್‌ಗೆ 62,950 ರೂ. ಇದೆ.

ಬೆಳ್ಳಿ ದರ

ಇಂದು ಬೆಳ್ಳಿ ಬೆಲೆ ಕಡಿಮೆಯಾಗಿದೆ. ಒಂದು ಗ್ರಾಂ ಬೆಳ್ಳಿಗೆ 71.50 ರೂ. ಇದೆ. 8 ಗ್ರಾಂಗೆ 572 ರೂ ಇದ್ದರೆ, 10 ಗ್ರಾಂಗೆ 715 ರೂ. ಇದೆ. 100 ಗ್ರಾಂಗೆ 7,150 ರೂ. ಹಾಗೂ 1 ಕಿಲೋಗೆ 71,500 ರೂ. ಬೆಲೆ ನಿಗದಿ ಆಗಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.