Gold Rate: ಆಭರಣ ಖರೀದಿಸುವ ಯೋಚನೆ ಇದ್ರೆ ಗಮನಿಸಿ, ಸ್ಥಿರವಾಗಿದೆ ಚಿನ್ನದ ಬೆಲೆ, ಬೆಳ್ಳಿ ತುಸು ಇಳಿಕೆ
ಕಳೆದೆರಡು ದಿನಗಳಿಂದ ಕಡಿಮೆಯಾಗಿದ್ದ ಚಿನ್ನದ ದರ ಬುಧವಾರ (ಫೆ. 28) ಬದಲಾಗಿಲ್ಲ. ನಿನ್ನೆಯ ದರವೇ ಇಂದು ಮುಂದುವರಿದಿದ್ದು, ಬೆಳ್ಳಿ ದರ ತುಸು ಇಳಿಕೆಯಾಗಿದೆ. ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ಇಂದು ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ ಗಮನಿಸಿ.
ಬೆಂಗಳೂರು: ಮಾರ್ಚ್, ಏಪ್ರಿಲ್ ಸೀಸನ್ ಎಂದರೆ ಭಾರತದಲ್ಲಿ ಮದುವೆಯ ಕಾಲ. ಈ ಸಮಯದಲ್ಲಿ ಚಿನ್ನದ ಬೇಡಿಕೆಯೂ ಹೆಚ್ಚಿರುತ್ತದೆ. ಕಳೆದೊಂದು ವಾರದಿಂದ ಚಿನ್ನ ಬೆಲೆ ಏರಿಳಿತವಾಗುತ್ತಲೇ ಇದೆ. ಒಂದೆರಡು ದಿನ ಕಡಿಮೆಯಾದರೆ, ಮತ್ತೆ ಏರಿಕೆಯಾಗುತ್ತದೆ. ಇದೀಗ ಬುಧವಾರ (ಫೆ.28) ಚಿನ್ನ ತಟಸ್ಥವಾಗಿದೆ. ಬೆಳ್ಳಿ ದರ ನಿನ್ನೆಗಿಂತ ತುಸು ಕಡಿಮೆಯಾಗಿದೆ. ಚಿನ್ನದ ಮಳಿಗೆಗೆ ಹೋಗುವ ಪ್ಲಾನ್ ಇದ್ರೆ ಇಂದಿನ ದರ ಗಮನಿಸಿ.
22 ಕ್ಯಾರೆಟ್ ಚಿನ್ನದ ಬೆಲೆ
ಇಂದು 1 ಗ್ರಾಂ ಚಿನ್ನಕ್ಕೆ 5,760 ರೂ. ಆಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 46,080 ರೂ. ನೀಡಬೇಕು. 10 ಗ್ರಾಂ ಚಿನ್ನಕ್ಕೆ 57,600 ರೂ ಆಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 5,76,000 ರೂ. ನೀಡಬೇಕು.
24 ಕ್ಯಾರೆಟ್ ಚಿನ್ನದ ಬೆಲೆ
24 ಕ್ಯಾರೆಟ್ ಚಿನ್ನಕ್ಕೆ 1 ಗ್ರಾಂಗೆ 6,284 ರೂ. ಆಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 50,272 ರೂ. ನೀಡಬೇಕು. ಇಂದು 10 ಗ್ರಾಂ ಚಿನ್ನಕ್ಕೆ 62,840 ನೀಡಬೇಕು. 100 ಗ್ರಾಂ ಚಿನ್ನದ ಬೆಲೆ 6,28,400 ರೂ. ಇದೆ.
ಕರ್ನಾಟಕದಲ್ಲಿ ಚಿನ್ನದ ಬೆಲೆ (10 ಗ್ರಾಂ)
ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್ಗೆ 57,600 ರೂ. ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 62,840 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.
ಹೊರ ರಾಜ್ಯಗಳಲ್ಲಿ ಚಿನ್ನದ ದರ (10 ಗ್ರಾಂ)
ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 58,100 ರೂ. 24 ಕ್ಯಾರೆಟ್ಗೆ 63,380 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 57,600 ರೂ. 24 ಕ್ಯಾರೆಟ್ಗೆ 62,840 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 57,750 ರೂ. 24 ಕ್ಯಾರೆಟ್ಗೆ 62,940 ರೂ. ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 57,600 ರೂ. 24 ಕ್ಯಾರೆಟ್ಗೆ 62,840 ರೂ. ಇದೆ. ಹೈದರಾಬಾದ್ನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 57,600 ರೂ. ಇದ್ದರೆ, 24 ಕ್ಯಾರೆಟ್ಗೆ 62,840 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 57,600 ರೂ. 24 ಕ್ಯಾರೆಟ್ಗೆ 62,840 ರೂ. ಇದೆ.
ಬೆಳ್ಳಿ ದರ
ಇಂದು ಬೆಳ್ಳಿ ಬೆಲೆ ತುಸು ಇಳಿಕೆಯಾಗಿದೆ. ಒಂದು ಗ್ರಾಂ ಬೆಳ್ಳಿಗೆ 71.50 ರೂ. ಇದೆ. 8 ಗ್ರಾಂಗೆ 572 ರೂ ಇದ್ದರೆ, 10 ಗ್ರಾಂಗೆ 715 ರೂ. ಇದೆ. 100 ಗ್ರಾಂಗೆ 7,150 ರೂ. ಹಾಗೂ 1 ಕಿಲೋಗೆ 71,500 ರೂ. ಬೆಲೆ ನಿಗದಿ ಆಗಿದೆ.