ಕನ್ನಡ ಸುದ್ದಿ  /  Nation And-world  /  Business News Gold Silver Rate Today Feb 29th 2024 India Gold Rate Bengaluru Mangaluru Mysure Davanagere Rst

Gold Rate: ಫೆಬ್ರುವರಿ ತಿಂಗಳ ಕೊನೆಯ ದಿನ ಕಡಿಮೆಯಾಯ್ತು ಚಿನ್ನದ ದರ, ಬೆಳ್ಳಿ ದರವೂ ತುಸು ಇಳಿಕೆ

ಫೆಬ್ರುವರಿ ತಿಂಗಳ ಕೊನೆಯ ದಿನವಾದ ಇಂದು (ಫೆ.29) ಚಿನ್ನದ ದರ ಇಳಿಕೆಯಾಗಿದೆ. ನಿನ್ನೆ ಸ್ಥಿರವಾಗಿದ್ದ ಹಳದಿ ಲೋಹ ಇಂದು ಕೊಂಚ ಕಡಿಮೆಯಾಗಿದೆ. ಬೆಳ್ಳಿ ದರದಲ್ಲೂ ಇಳಿಕೆಯಾಗಿದ್ದು, ಮಾರ್ಚ್‌ ತಿಂಗಳಲ್ಲಿ ದರ ಹೇಗಿರಬಹುದು ಎಂದು ಗಾಹಕರು ಅಂದಾಜಿಸುತ್ತಿದ್ದಾರೆ.

ಫೆಬ್ರುವರಿ ತಿಂಗಳ ಕೊನೆಯ ದಿನ ಕಡಿಮೆಯಾಯ್ತು ಚಿನ್ನದ ದರ, ಬೆಳ್ಳಿ ದರವೂ ತುಸು ಇಳಿಕೆ
ಫೆಬ್ರುವರಿ ತಿಂಗಳ ಕೊನೆಯ ದಿನ ಕಡಿಮೆಯಾಯ್ತು ಚಿನ್ನದ ದರ, ಬೆಳ್ಳಿ ದರವೂ ತುಸು ಇಳಿಕೆ (PTI)

ಬೆಂಗಳೂರು: ಮಾರ್ಚ್‌, ಏಪ್ರಿಲ್‌ ತಿಂಗಳು ಬಂತೆಂದರೆ ಭಾರತದಲ್ಲಿ ಮದುವೆ ಸೀಸನ್‌ಗಳು ಆರಂಭವಾಗುತ್ತದೆ. ಮದುವೆ ಸೀಸನ್‌ ಎಂದರೆ ಚಿನ್ನಕ್ಕೆ ಬೇಡಿಕೆ ಹೆಚ್ಚುವುದು ಸಹಜ. ನಮ್ಮ ದೇಶದಲ್ಲಿ ಮದುವೆ ಎಂದರೆ ಚಿನ್ನದ ಇಲ್ಲದೇ ನಡೆಯಲು ಸಾಧ್ಯವಿಲ್ಲ. ನಾವೀಗ ಫೆಬ್ರುವರಿ ತಿಂಗಳ ಕೊನೆಯ ದಿನದಲ್ಲಿದ್ದು, ಇಂದು ಚಿನ್ನದ ದರ ಕಡಿಮೆಯಾಗಿದೆ. ಬೆಳ್ಳಿ ದರವೂ ತುಸು ಇಳಿಕೆಯಾಗಿದೆ. ಮಾರ್ಚ್‌ನಲ್ಲಿ ಚಿನ್ನದ ದರ ಏರಿಕೆಯಾಗಲೂಬಹುದು ಅಥವಾ ಇನ್ನಷ್ಟು ಇಳಿಕೆಯಾಗಬಹುದು. ಅದೇನೆ ಇರಲಿ ಫೆಬ್ರುವರಿ ತಿಂಗಳ ಕೊನೆಯ ದಿನ ನೀವು ಚಿನ್ನ ಖರೀದಿಸಲು ಬಯಸಿದರೆ ಇಂದು ಕರ್ನಾಟಕ ಹಾಗೂ ತಮಿಳುನಾಡು, ಕೇರಳ ರಾಜ್ಯದಲ್ಲಿ ಚಿನ್ನದ ದರ ಎಷ್ಟಿದೆ ಗಮನಿಸಿ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

22 ಕ್ಯಾರೆಟ್‌ ಚಿನ್ನದ ಬೆಲೆ

ಇಂದು 1 ಗ್ರಾಂ ಚಿನ್ನಕ್ಕೆ 5,769 ರೂ. ಆಗಿದೆ. ನಿನ್ನೆ 5,760 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 1 ರೂ ಕಡಿಮೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 46,072 ರೂ. ನೀಡಬೇಕು. ನಿನ್ನೆ 46,080 ರೂ ಇದ್ದು, ನಿನ್ನೆ ದರಕ್ಕೆ ಹೋಲಿಸಿದರೆ ಇಂದು 8 ರೂ. ಕಡಿಮೆಯಾಗಿದೆ. 10 ಗ್ರಾಂ ಚಿನ್ನಕ್ಕೆ 57,590 ರೂ ಆಗಿದೆ. ನಿನ್ನೆ 57,600 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 10 ರೂ. ಕಡಿಮೆಯಾಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 5,75,900 ರೂ. ನೀಡಬೇಕು. ನಿನ್ನೆ 5,76,000 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 100 ರೂ. ಕಡಿಮೆಯಾಗಿದೆ.

24 ಕ್ಯಾರೆಟ್‌ ಚಿನ್ನದ ಬೆಲೆ

24 ಕ್ಯಾರೆಟ್‌ ಚಿನ್ನಕ್ಕೆ 1 ಗ್ರಾಂಗೆ 6,283 ರೂ. ಆಗಿದೆ. ನಿನ್ನೆ 6,284 ರೂ. ಇದು ಈ ದರಕ್ಕೆ ಹೋಲಿಸಿದರೆ 1 ರೂ ಕಡಿಮೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 50,264 ರೂ. ನೀಡಬೇಕು. ನಿನ್ನೆ 50,272 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 8 ರೂ. ಕಡಿಮೆಯಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 62,830 ನೀಡಬೇಕು. ನಿನ್ನೆ 62,840 ರೂ. ಇದ್ದು, ಈ ದರಕ್ಕೆ ಹೋಲಿಸಿದರೆ 10 ರೂ ಕಡಿಮೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ 6,28,300 ರೂ. ಇದೆ. ನಿನ್ನೆ 6,28,400 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 100 ರೂ ಕಡಿಮೆ ಆಗಿದೆ.

ಕರ್ನಾಟಕದಲ್ಲಿ ಚಿನ್ನದ ಬೆಲೆ (10 ಗ್ರಾಂ)

ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 57,590 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 62,830 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.

ಹೊರ ರಾಜ್ಯಗಳಲ್ಲಿ ಚಿನ್ನದ ದರ (10 ಗ್ರಾಂ)

ಚೆನ್ನೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 58,100 ರೂ. 24 ಕ್ಯಾರೆಟ್‌ಗೆ 63,380 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 57,590 ರೂ. 24 ಕ್ಯಾರೆಟ್‌ಗೆ 62,830 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 57,740 ರೂ. 24 ಕ್ಯಾರೆಟ್‌ಗೆ 62,990 ರೂ. ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 57,590 ರೂ. 24 ಕ್ಯಾರೆಟ್‌ಗೆ 62,830 ರೂ. ಇದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 57,590 ರೂ. ಇದ್ದರೆ, 24 ಕ್ಯಾರೆಟ್‌ಗೆ 62,830 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 57,590 ರೂ. 24 ಕ್ಯಾರೆಟ್‌ಗೆ 62,830 ರೂ. ಇದೆ.

ಬೆಳ್ಳಿ ದರ

ಬೆಳ್ಳಿ ದರ ಇಂದು ಕೂಡ ತುಸು ಇಳಿಕೆಯಾಗಿದೆ. ಒಂದು ಗ್ರಾಂ ಬೆಳ್ಳಿಗೆ 71.40 ರೂ. ಇದೆ. 8 ಗ್ರಾಂಗೆ 571.20 ರೂ ಇದ್ದರೆ, 10 ಗ್ರಾಂಗೆ 714 ರೂ. ಇದೆ. 100 ಗ್ರಾಂಗೆ 7,140 ರೂ. ಹಾಗೂ 1 ಕಿಲೋಗೆ 71,400 ರೂ. ಬೆಲೆ ನಿಗದಿ ಆಗಿದೆ.

IPL_Entry_Point