Gold Rate: ಆಭರಣ ಪ್ರಿಯರೇ ಗಮನಿಸಿ, ಸತತ ಮೂರು ದಿನಗಳಿಂದ ಇಳಿಕೆಯಾಗುತ್ತಿದೆ ಚಿನ್ನದ ದರ, ಇಂದು ಬೆಳ್ಳಿ ಬೆಲೆ ತಟಸ್ಥ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Rate: ಆಭರಣ ಪ್ರಿಯರೇ ಗಮನಿಸಿ, ಸತತ ಮೂರು ದಿನಗಳಿಂದ ಇಳಿಕೆಯಾಗುತ್ತಿದೆ ಚಿನ್ನದ ದರ, ಇಂದು ಬೆಳ್ಳಿ ಬೆಲೆ ತಟಸ್ಥ

Gold Rate: ಆಭರಣ ಪ್ರಿಯರೇ ಗಮನಿಸಿ, ಸತತ ಮೂರು ದಿನಗಳಿಂದ ಇಳಿಕೆಯಾಗುತ್ತಿದೆ ಚಿನ್ನದ ದರ, ಇಂದು ಬೆಳ್ಳಿ ಬೆಲೆ ತಟಸ್ಥ

ಆಭರಣ ಖರೀದಿಸುವ ಯೋಚನೆ ಇದ್ದರೆ, ಈಗ ನೀವು ಆಭರಣ ಮಳಿಗೆಗೆ ಭೇಟಿ ನೀಡಬಹುದು. ಸತತ ಮೂರು ದಿನಗಳಿಂದ ಚಿನ್ನದ ಬೆಲೆ ಇಳಿಕೆಯಾಗುತ್ತಲೇ ಇದೆ. ಬೆಳ್ಳಿ ದರ ಸಾಮಾನ್ಯವಾಗಿ ಸ್ಥಿರವಾಗಿಯೇ ಇದ್ದು, ಇಂದು ಕೂಡ ತಟಸ್ಥವಾಗಿದೆ. ಆಭರಣ ಖರೀದಿಸುವ ಯೋಚನೆ ಇದ್ದರೆ ಇಂದಿನ ದರ ಗಮನಿಸಿ.

Gold Silver Price Today: ಚಿನ್ನ-ಬೆಳ್ಳಿ ದರ  ಕೊಂಚ ಇಳಿಕೆ, ಕರ್ನಾಟಕದಲ್ಲಿ ಇಂದು ಹತ್ತು ಅಪರಂಜಿ ಚಿನ್ನಕ್ಕೆ  60680 ರೂಪಾಯಿ (File Photo: Mint)
Gold Silver Price Today: ಚಿನ್ನ-ಬೆಳ್ಳಿ ದರ ಕೊಂಚ ಇಳಿಕೆ, ಕರ್ನಾಟಕದಲ್ಲಿ ಇಂದು ಹತ್ತು ಅಪರಂಜಿ ಚಿನ್ನಕ್ಕೆ 60680 ರೂಪಾಯಿ (File Photo: Mint) (MINT_PRINT)

ಬೆಂಗಳೂರು: ಚಿನ್ನ ಹಾಗೂ ಬೆಳ್ಳಿ ಬೆಲೆ ಆಗಾಗ ಕಡಿಮೆಯಾಗುವುದು ಮತ್ತೆ ಏರಿಕೆಯಾಗುವುದು ಸಹಜ. ಆದರೆ ಕಳೆದ ಮೂರು ದಿನಗಳಿಂದ ಸತತವಾಗಿ ಚಿನ್ನದ ಬೆಲೆ ಕಡಿಮೆಯಾಗುತ್ತಿದೆ. ಪ್ರೇಮಿಗಳ ದಿನ ಸಮೀಪದಲ್ಲೇ ಇದ್ದು, ನೀವು ಆಭರಣ ಖರೀದಿಸಬೇಕು ಎಂದು ಯೋಚಿಸುತ್ತಿದ್ದರೆ ಇದು ಸಕಾಲ. ಅಂದ ಹಾಗೆ ಇಂದು ಬೆಳ್ಳಿ ದರವೂ ಸ್ಥಿರವಾಗಿದೆ. ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಇಂದು ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ ಗಮನಿಸಿ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

22 ಕ್ಯಾರೆಟ್‌ ಚಿನ್ನದ ಬೆಲೆ

ಇಂದು 1 ಗ್ರಾಂ ಚಿನ್ನಕ್ಕೆ 5,775 ರೂ. ಬೆಲೆ ಆಗಿದೆ. ನಿನ್ನೆ 5,795 ರೂ. ಇದ್ದು, ಈ ದರಕ್ಕೆ ಹೋಲಿಸಿದರೆ ಇಂದು 20 ರೂ. ಕಡಿಮೆಯಾಗಿದೆ. ಹಾಗೆಯೇ 8 ಗ್ರಾಂ ಚಿನ್ನಕ್ಕೆ 46,200 ರೂ. ನೀಡಬೇಕು. ನಿನ್ನೆ 46,360 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 160 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನಕ್ಕೆ 57,750 ರೂ ಆಗಿದೆ. ನಿನ್ನೆ 58,950 ರೂ. ಇದ್ದು, ಈ ದರಕ್ಕೆ ಹೋಲಿಸಿದರೆ 200 ರೂ. ಕಡಿಮೆಯಾಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 5,77,500 ರೂ. ನೀಡಬೇಕು. ನಿನ್ನೆ 5,79,500 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 2,000 ರೂ. ಕಡಿಮೆಯಾಗಿದೆ.

24 ಕ್ಯಾರೆಟ್‌ ಚಿನ್ನದ ಬೆಲೆ

24 ಕ್ಯಾರೆಟ್‌ ಚಿನ್ನಕ್ಕೆ 1 ಗ್ರಾಂಗೆ 6,300 ರೂ. ಆಗಿದೆ. ನಿನ್ನೆ 6,322 ರೂ. ಇದ್ದು, ಈ ದರಕ್ಕೆ ಹೋಲಿಸಿದರೆ 22 ರೂ. ಕಡಿಮೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 50,400 ರೂ. ನೀಡಬೇಕು. ನಿನ್ನೆ 50,576 ರೂ. ಇದ್ದು, ಈ ದರಕ್ಕೆ ಹೋಲಿಸಿದರೆ 176 ರೂ ಇಳಿಕೆಯಾಗಿದೆ. 10 ಗ್ರಾಂ ಚಿನ್ನಕ್ಕೆ 63,000 ಕೊಡಬೇಕು. ನಿನ್ನೆ 63,220 ರೂ. ಇದ್ದು ಈ ದರಕ್ಕೆ ಹೋಲಿಸಿದರೆ, 220 ರೂ. ಕಡಿಮೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ 6,30,000 ರೂ. ಇದೆ. ನಿನ್ನೆ 6,32,200 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 2,200 ರೂ ಕಡಿಮೆಯಾಗಿದೆ.

ಕರ್ನಾಟಕದಲ್ಲಿ ಚಿನ್ನದ ಬೆಲೆ (10 ಗ್ರಾಂ)

ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 57,750 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 63,000 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.

ಹೊರ ರಾಜ್ಯಗಳಲ್ಲಿ ಚಿನ್ನದ ದರ (10 ಗ್ರಾಂ)

ಚೆನ್ನೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 58,300 ರೂ. 24 ಕ್ಯಾರೆಟ್‌ಗೆ 63,600 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 57,750 ರೂ. 24 ಕ್ಯಾರೆಟ್‌ಗೆ 63,000 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 57,900 ರೂ. 24 ಕ್ಯಾರೆಟ್‌ಗೆ 63,150 ರೂ. ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 57,750 ರೂ. 24 ಕ್ಯಾರೆಟ್‌ಗೆ 63,000 ರೂ. ಇದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 57,750 ರೂ. ಇದ್ದರೆ, 24 ಕ್ಯಾರೆಟ್‌ಗೆ 63,000 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 57,750 ರೂ. 24 ಕ್ಯಾರೆಟ್‌ಗೆ 63,000 ರೂ. ಇದೆ.

ಬೆಳ್ಳಿ ದರ

ಇಂದು ಬೆಳ್ಳಿ ಬೆಲೆ ಸ್ಥಿರವಾಗಿದೆ. ಒಂದು ಗ್ರಾಂ ಬೆಳ್ಳಿಗೆ 72.50 ರೂ. ಇದೆ. 8 ಗ್ರಾಂಗೆ 580 ರೂ ಇದ್ದರೆ, 10 ಗ್ರಾಂಗೆ 725 ರೂ. ಇದೆ. 100 ಗ್ರಾಂಗೆ 7,250 ರೂ. ಹಾಗೂ 1 ಕಿಲೋಗೆ 72,500 ರೂ. ಬೆಲೆ ನಿಗದಿ ಆಗಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.