Gold Rate Today: ಕೊಂಚ ಇಳಿಕೆಯಾಗಿ ಖುಷಿ ಮೂಡಿಸಿದ್ದ ಚಿನ್ನದ ಬೆಲೆ ಮತ್ತೆ ಏರಿಕೆ; ಶುಕ್ರವಾರ ಬೆಳ್ಳಿ ದರ ತಟಸ್ಥ
ಬಹಳ ದಿನಗಳಿಂದ ಏರುತ್ತಲೇ ಇದ್ದ ಚಿನ್ನದ ದರ ಕೊಂಚ ಇಳಿಕೆಯಾಗುವ ಮೂಲಕ ಆಭರಣ ಪ್ರಿಯರು ನೆಮ್ಮದಿಯ ಸಿಟ್ಟುಸಿರು ಬಿಡುವಂತೆ ಮಾಡಿತ್ತು, ಆದರೆ ಇದೀಗ ಮತ್ತೆ ಏರಿಕೆ ಕಾಣುತ್ತಿದೆ ಹಳದಿ ಲೋಹದ ಬೆಲೆ. ದೇಶದಲ್ಲಿಂದು (ಮಾರ್ಚ್ 15) ಬೆಳ್ಳಿ ಬೆಲೆ ತಟಸ್ಥವಾಗಿದೆ.

ಬೆಂಗಳೂರು: ಭಾರತದಲ್ಲಿ ಚಿನ್ನದ ದರ ಏರಿಕೆಯಾದರೆ ಆಭರಣ ಪ್ರಿಯರು ಕಣ್ಣೀರು ಹಾಕುವುದು ಸಹಜ, ಅದರಲ್ಲೂ ಮಾರ್ಚ್, ಏಪ್ರಿಲ್ ತಿಂಗಳು ಮದುವೆಯಂತಹ ಶುಭಕಾರ್ಯಗಳು ನಡೆಯುವ ಸಮಯ, ಈ ಸಂದರ್ಭ ಚಿನ್ನದ ದರ ಏರಿಕೆಯಾದರೆ ಯಾರಿಗೆ ತಾನೆ ಬೇಸರವಾಗುವುದಿಲ್ಲ ಹೇಳಿ. ಮಾರ್ಚ್ ತಿಂಗಳು ಹಳದಿ ಲೋಹ ಪ್ರಿಯರಿಗೆ ನಿಜಕ್ಕೂ ಉತ್ತಮವಾಗಿಲ್ಲ. ತಿಂಗಳಾರಂಭದಿಂದಲೂ ಏರಿಕೆ ಕಾಣುತ್ತಲೇ ಇದ್ದ ಚಿನ್ನ, ಒಂದೆರಡು ದಿನ ಇಳಿಕೆಯಾಗಿತ್ತು. ಈಗ ಮತ್ತೆ ಬಂಗಾರದ ಮೇಲೆ ಏರಿಕೆಯಾಗುತ್ತಿದೆ.
22 ಕ್ಯಾರೆಟ್ ಚಿನ್ನದ ಬೆಲೆ
ಇಂದು 1 ಗ್ರಾಂ ಚಿನ್ನಕ್ಕೆ 6,060 ರೂ. ಆಗಿದೆ. ನಿನ್ನೆ 6,035 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 25 ರೂ ಹೆಚ್ಚಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 48,480 ರೂ. ನೀಡಬೇಕು. ನಿನ್ನೆ 48,280 ರೂ ಇದ್ದು, ನಿನ್ನೆ ದರಕ್ಕೆ ಹೋಲಿಸಿದರೆ ಇಂದು 200 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನಕ್ಕೆ 60,600 ರೂ ಆಗಿದೆ. ನಿನ್ನೆ 60,350 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 250 ರೂ. ಹೆಚ್ಚಾಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 6,06,000 ರೂ. ನೀಡಬೇಕು. ನಿನ್ನೆ 6,03,500 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 2,500 ರೂ. ಕಡಿಮೆಯಾಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ
24 ಕ್ಯಾರೆಟ್ ಚಿನ್ನಕ್ಕೆ 1 ಗ್ರಾಂಗೆ 6,611 ರೂ. ಆಗಿದೆ. ನಿನ್ನೆ 6,584 ರೂ. ಇದು ಈ ದರಕ್ಕೆ ಹೋಲಿಸಿದರೆ 27 ರೂ ಹೆಚ್ಚಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 52,888 ರೂ. ನೀಡಬೇಕು. ನಿನ್ನೆ 52,672 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 216 ರೂ. ಏರಿಕೆಯಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 66,110 ನೀಡಬೇಕು. ನಿನ್ನೆ 65,840 ರೂ. ಇದ್ದು, ಈ ದರಕ್ಕೆ ಹೋಲಿಸಿದರೆ 270 ರೂ ಹೆಚ್ಚಾಗಿದೆ. 100 ಗ್ರಾಂ ಚಿನ್ನದ ಬೆಲೆ 6,61,100 ರೂ. ಇದೆ. ನಿನ್ನೆ 6,58,400 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 2,700 ರೂ ಏರಿಕೆಯಾಗಿದೆ.
ಕರ್ನಾಟಕದಲ್ಲಿ ಚಿನ್ನದ ಬೆಲೆ (10 ಗ್ರಾಂ)
ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 60,600 ರೂ. ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 66,110 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.
ಹೊರ ರಾಜ್ಯಗಳಲ್ಲಿ ಚಿನ್ನದ ದರ (10 ಗ್ರಾಂ)
ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 61,350 ರೂ. 24 ಕ್ಯಾರೆಟ್‌ಗೆ 67,930 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 60,600 ರೂ. 24 ಕ್ಯಾರೆಟ್‌ಗೆ 66,110 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 60,750 ರೂ. 24 ಕ್ಯಾರೆಟ್‌ಗೆ 66,260 ರೂ. ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 60,600 ರೂ. 24 ಕ್ಯಾರೆಟ್‌ಗೆ 66,110 ರೂ. ಇದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 60,600 ರೂ. ಇದ್ದರೆ, 24 ಕ್ಯಾರೆಟ್‌ಗೆ 66,110 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 60,600 ರೂ. 24 ಕ್ಯಾರೆಟ್‌ಗೆ 66,110 ರೂ. ಆಗಿದೆ.
ಬೆಳ್ಳಿ ದರ
ಬೆಳ್ಳಿ ದರ ಕೊಂಚ ಏರಿಕೆಯಾಗಿದೆ. ಒಂದು ಗ್ರಾಂ ಬೆಳ್ಳಿಗೆ 74.50 ರೂ. ಇದೆ. 8 ಗ್ರಾಂಗೆ 596 ರೂ ಇದ್ದರೆ, 10 ಗ್ರಾಂಗೆ 745 ರೂ. ಇದೆ. 100 ಗ್ರಾಂಗೆ 7,450 ರೂ. ಹಾಗೂ 1 ಕಿಲೋಗೆ 74,500 ರೂ. ಬೆಲೆ ನಿಗದಿ ಆಗಿದೆ.
