Gold Rate: ಮಾರ್ಚ್‌ ತಿಂಗಳ ಮೊದಲ ದಿನ ಚಿನ್ನದ ದರ ತಟಸ್ಥ, ಬೆಳ್ಳಿ ಬೆಲೆ ತುಸು ಏರಿಕೆ; ದೇಶದ ವಿವಿಧೆಡೆಯ ಆಭರಣ ಬೆಲೆ ಗಮನಿಸಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Rate: ಮಾರ್ಚ್‌ ತಿಂಗಳ ಮೊದಲ ದಿನ ಚಿನ್ನದ ದರ ತಟಸ್ಥ, ಬೆಳ್ಳಿ ಬೆಲೆ ತುಸು ಏರಿಕೆ; ದೇಶದ ವಿವಿಧೆಡೆಯ ಆಭರಣ ಬೆಲೆ ಗಮನಿಸಿ

Gold Rate: ಮಾರ್ಚ್‌ ತಿಂಗಳ ಮೊದಲ ದಿನ ಚಿನ್ನದ ದರ ತಟಸ್ಥ, ಬೆಳ್ಳಿ ಬೆಲೆ ತುಸು ಏರಿಕೆ; ದೇಶದ ವಿವಿಧೆಡೆಯ ಆಭರಣ ಬೆಲೆ ಗಮನಿಸಿ

ಮಾರ್ಚ್‌ ತಿಂಗಳ ಮೊದಲ ದಿನವಾದ ಇಂದು (ಮಾ. 1) ಚಿನ್ನದ ದರ ತಟಸ್ಥವಾಗಿದೆ. ಬೆಳ್ಳಿ ದರದಲ್ಲಿ ತುಸು ಏರಿಕೆಯಾಗಿದೆ. ಆಭರಣ ಖರೀದಿಸುವ ಯೋಚನೆ ನಿಮಗಿದ್ದರೆ ಇಂದಿನ ಬೆಲೆ ಗಮನಿಸಿ.

ಮಾರ್ಚ್‌ ತಿಂಗಳ ಮೊದಲ ದಿನ ಚಿನ್ನದ ದರ ತಟಸ್ಥ, ಬೆಳ್ಳಿ ಬೆಲೆ ತುಸು ಏರಿಕೆ
ಮಾರ್ಚ್‌ ತಿಂಗಳ ಮೊದಲ ದಿನ ಚಿನ್ನದ ದರ ತಟಸ್ಥ, ಬೆಳ್ಳಿ ಬೆಲೆ ತುಸು ಏರಿಕೆ (REUTERS)

ಬೆಂಗಳೂರು: 2024ರ ಮಾರ್ಚ್‌ ತಿಂಗಳು ಆರಂಭವಾಗಿದೆ. ತಿಂಗಳ ಮೊದಲ ದಿನ ಚಿನ್ನದ ದರ ತಟಸ್ಥವಾಗಿದ್ದು, ಆಭರಣ ಪ್ರಿಯರಲ್ಲಿ ಹೊಸ ಭರವಸೆ ಮೂಡಿಸಿದೆ. ಇನ್ನೇನು ಶುಭ ಸಮಾರಂಭಗಳು ಆರಂಭವಾಗುವ ಸಮಯ ಇದಾಗಿದ್ದು, ಜನರು ಸಾಮಾನ್ಯವಾಗಿ ಚಿನ್ನದ ದರ ಇಳಿಕೆಯಾಗುವುದನ್ನೇ ನಿರೀಕ್ಷಿಸುತ್ತಿರುತ್ತಾರೆ. ಅದು ಅಲ್ಲದೇ ಆರ್ಥಿಕ ವರ್ಷ ಅಂತ್ಯವಾಗುವುದು ಮಾರ್ಚ್‌ ತಿಂಗಳಿನಲ್ಲೇ. ಈ ಎಲ್ಲದರ ನಡುವೆ ಬೆಳ್ಳಿ ದರ ತುಸು ಏರಿಕೆಯಾಗಿದೆ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

22 ಕ್ಯಾರೆಟ್‌ ಚಿನ್ನದ ಬೆಲೆ

ಇಂದು 1 ಗ್ರಾಂ ಚಿನ್ನಕ್ಕೆ 5,769 ರೂ. ಇದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 46,072 ರೂ. ನೀಡಬೇಕು. 10 ಗ್ರಾಂ ಚಿನ್ನಕ್ಕೆ 57,590 ರೂ ಇದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 5,75,900 ರೂ. ನೀಡಬೇಕು.

24 ಕ್ಯಾರೆಟ್‌ ಚಿನ್ನದ ಬೆಲೆ

24 ಕ್ಯಾರೆಟ್‌ ಚಿನ್ನಕ್ಕೆ 1 ಗ್ರಾಂಗೆ 6,283 ರೂ. ಆಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 50,264 ರೂ. ನೀಡಬೇಕು. ಇಂದು 10 ಗ್ರಾಂ ಚಿನ್ನಕ್ಕೆ 62,830 ನೀಡಬೇಕು. 100 ಗ್ರಾಂ ಚಿನ್ನದ ಬೆಲೆ 6,28,300 ರೂ. ಇದೆ.

ಕರ್ನಾಟಕದಲ್ಲಿ ಚಿನ್ನದ ಬೆಲೆ (10 ಗ್ರಾಂ)

ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 57,590 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 62,830 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.

ಹೊರ ರಾಜ್ಯಗಳಲ್ಲಿ ಚಿನ್ನದ ದರ (10 ಗ್ರಾಂ)

ಚೆನ್ನೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 58,100 ರೂ. 24 ಕ್ಯಾರೆಟ್‌ಗೆ 63,380 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 57,590 ರೂ. 24 ಕ್ಯಾರೆಟ್‌ಗೆ 62,830 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 57,740 ರೂ. 24 ಕ್ಯಾರೆಟ್‌ಗೆ 62,990 ರೂ. ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 57,590 ರೂ. 24 ಕ್ಯಾರೆಟ್‌ಗೆ 62,830 ರೂ. ಇದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 57,590 ರೂ. ಇದ್ದರೆ, 24 ಕ್ಯಾರೆಟ್‌ಗೆ 62,830 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 57,590 ರೂ. 24 ಕ್ಯಾರೆಟ್‌ಗೆ 62,830 ರೂ. ಇದೆ.

ಬೆಳ್ಳಿ ದರ

ಬೆಳ್ಳಿ ದರ ಇಂದು ತುಸು ಏರಿಕೆಯಾಗಿದೆ. ಒಂದು ಗ್ರಾಂ ಬೆಳ್ಳಿಗೆ 71.75 ರೂ. ಇದೆ. 8 ಗ್ರಾಂಗೆ 574 ರೂ ಇದ್ದರೆ, 10 ಗ್ರಾಂಗೆ 717.50 ರೂ. ಇದೆ. 100 ಗ್ರಾಂಗೆ 7,175 ರೂ. ಹಾಗೂ 1 ಕಿಲೋಗೆ 71,750 ರೂ. ಬೆಲೆ ನಿಗದಿ ಆಗಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.