Gold Rate: ಆಭರಣ ಪ್ರಿಯರನ್ನ ಕಾಡಲಿದೆ ನಿರಾಸೆ; ಮತ್ತೆ ಏರಿಕೆಯತ್ತ ಚಿನ್ನ, ಬೆಳ್ಳಿ ದರ; ಕರ್ನಾಟಕದ ಗೋಲ್ಡ್ ರೇಟ್ ಗಮನಿಸಿ
ಕಳೆದೊಂದು ವಾರದಿಂದ ಏರುಗತಿಯತ್ತಲೇ ಸಾಗುತ್ತಿದ್ದ ಚಿನ್ನದ ದರ ಗುರುವಾರ (ಮಾರ್ಚ್ 21) ಸ್ಥಿರತೆ ಕಾಣುವ ಮೂಲಕ ಕೊಂಚ ನೆಮ್ಮದಿ ಮೂಡಿಸಿತ್ತು. ಆದರೆ ಇಂದು (ಮಾರ್ಚ್ 22) ಚಿನ್ನ ಹಾಗೂ ಬೆಳ್ಳಿ ಎರಡರ ಬೆಲೆಯಲ್ಲೂ ಏರಿಕೆಯಾಗಿದೆ. ದೇಶಾದ್ಯಂತ ಇಂದು ಚಿನ್ನದ ದರ ಎಷ್ಟಿದೆ ಗಮನಿಸಿ.
ಬೆಂಗಳೂರು: ಆಭರಣ ದರ ಕಡಿಮೆಯಾಗಬಹುದು ಎಂದು ಕಾಯುತ್ತಿರುವವರಿಗೆ ಇತ್ತೀಚಿಗೆ ನಿರಾಸೆ ಕಾಡುತ್ತಿದೆ. ದಿನೇ ದಿನೇ ಚಿನ್ನದ ದರ ಗಗನಕ್ಕೇರುತ್ತಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 60 ಸಾವಿರದ ಗಡಿ ದಾಟಿದೆ. ಮಾರ್ಚ್ ತಿಂಗಳು ಶುಭಕಾರ್ಯಗಳು ಹೆಚ್ಚು ನಡೆಯುವ ವೇಳೆ ಬೆಳ್ಳಿ ದರವೂ ಏರಿಕೆಯಾಗುತ್ತಿದೆ. ಗುರುವಾರ (ಮಾರ್ಚ್ 22) ಸ್ಥಿರವಾಗಿದ್ದ ಚಿನ್ನ ದರ ಇದೀಗ ಮತ್ತೆ ಏರಿಕೆಯಾಗಿದೆ. ಕರ್ನಾಟಕ ಸೇರಿದಂತೆ ದೇಶದಾದ್ಯಂತ ಇಂದಿನ ಚಿನ್ನ ಹಾಗೂ ಬೆಳ್ಳಿ ಬೆಲೆ ಗಮನಿಸಿ.
22 ಕ್ಯಾರೆಟ್ ಚಿನ್ನದ ಬೆಲೆ
ಇಂದು 1 ಗ್ರಾಂ ಚಿನ್ನಕ್ಕೆ 6,181 ರೂ. ಆಗಿದೆ. ನಿನ್ನೆ 6,180 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 1 ರೂ ಹೆಚ್ಚಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 49,448 ರೂ. ನೀಡಬೇಕು. ನಿನ್ನೆ 49,440 ರೂ ಇದ್ದು, ನಿನ್ನೆ ದರಕ್ಕೆ ಹೋಲಿಸಿದರೆ ಇಂದು 8 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನಕ್ಕೆ 61,810 ರೂ ಆಗಿದೆ. ನಿನ್ನೆ 61,800 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 10 ರೂ. ಹೆಚ್ಚಾಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 6,18,100 ರೂ. ನೀಡಬೇಕು. ನಿನ್ನೆ 6,18,000 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 100 ರೂ. ಕಡಿಮೆಯಾಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ
24 ಕ್ಯಾರೆಟ್ ಚಿನ್ನಕ್ಕೆ 1 ಗ್ರಾಂಗೆ 6,743 ರೂ. ಆಗಿದೆ. ನಿನ್ನೆ 6,742 ರೂ. ಇದು ಈ ದರಕ್ಕೆ ಹೋಲಿಸಿದರೆ 1 ರೂ ಹೆಚ್ಚಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 53,944 ರೂ. ನೀಡಬೇಕು. ನಿನ್ನೆ 53,936 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 8 ರೂ. ಏರಿಕೆಯಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 67,430 ನೀಡಬೇಕು. ನಿನ್ನೆ 67,420 ರೂ. ಇದ್ದು, ಈ ದರಕ್ಕೆ ಹೋಲಿಸಿದರೆ 10 ರೂ ಹೆಚ್ಚಾಗಿದೆ. 100 ಗ್ರಾಂ ಚಿನ್ನದ ಬೆಲೆ 6,74,300 ರೂ. ಇದೆ. ನಿನ್ನೆ 6,74,200 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 100 ರೂ ಏರಿಕೆಯಾಗಿದೆ.
ಕರ್ನಾಟಕದಲ್ಲಿ ಚಿನ್ನದ ಬೆಲೆ (10 ಗ್ರಾಂ)
ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 61,810 ರೂ. ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 67,430 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.
ಹೊರ ರಾಜ್ಯಗಳಲ್ಲಿ ಚಿನ್ನದ ದರ (10 ಗ್ರಾಂ)
ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 62,360 ರೂ. 24 ಕ್ಯಾರೆಟ್‌ಗೆ 68,030 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 61,810 ರೂ. 24 ಕ್ಯಾರೆಟ್‌ಗೆ 67,430 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 61,960 ರೂ. 24 ಕ್ಯಾರೆಟ್‌ಗೆ 67,580 ರೂ. ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 61,810 ರೂ. 24 ಕ್ಯಾರೆಟ್‌ಗೆ 67,430 ರೂ. ಇದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 61,810 ರೂ. ಇದ್ದರೆ, 24 ಕ್ಯಾರೆಟ್‌ಗೆ 67,430 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 61,810 ರೂ. 24 ಕ್ಯಾರೆಟ್‌ಗೆ 67,430 ರೂ. ಆಗಿದೆ.
ಬೆಳ್ಳಿ ದರ
ಇಂದು ಬೆಳ್ಳಿ ದರವೂ ಕೊಂಚ ಏರಿಕೆಯಾಗಿದೆ. ಒಂದು ಗ್ರಾಂ ಬೆಳ್ಳಿಗೆ 76.10 ರೂ. ಇದೆ. 8 ಗ್ರಾಂಗೆ 608.80 ರೂ ಇದ್ದರೆ, 10 ಗ್ರಾಂಗೆ 761 ರೂ. ಇದೆ. 100 ಗ್ರಾಂಗೆ 7,610 ರೂ. ಹಾಗೂ 1 ಕಿಲೋಗೆ 76,100 ರೂ. ಬೆಲೆ ನಿಗದಿ ಆಗಿದೆ.