ಕನ್ನಡ ಸುದ್ದಿ  /  Nation And-world  /  Business News Gold Silver Rate Today March 23rd 2024 India Gold Rate Bengaluru Mangaluru Mysure Davanagere Rst

Gold Rate: ಆಭರಣ ಖರೀದಿಸುವ ಪ್ಲಾನ್‌ ಇದ್ರೆ ಗಮನಿಸಿ, ಕೆಲ ದಿನಗಳ ಬಳಿಕ ಕಡಿಮೆಯಾಗಿದೆ ಚಿನ್ನ, ಬೆಳ್ಳಿ ದರವೂ ಇಳಿಕೆ

ಚಿನ್ನ ಖರೀದಿಸಬೇಕು ಎಂದು ಹಣ ಕೂಡಿಟ್ಟುಕೊಂಡು ಕಾಯುತ್ತಿರುವವರು ಇಂದು ಆಭರಣ ಮಳಿಗೆ ಕಡೆ ಹೋಗಬಹುದು. ಹಲವು ದಿನಗಳ ಬಳಿಕ ಭಾನುವಾರ (ಮಾರ್ಚ್‌ 24) ಚಿನ್ನದ ದರದಲ್ಲಿ ಇಳಿಕೆಯಾಗಿದೆ. ಇಂದು ಬೆಳ್ಳಿ ದರವೂ ಕಡಿಮೆಯಾಗಿದೆ. ಚಿನ್ನದಂಗಡಿಗೆ ಹೋಗುವ ಪ್ಲಾನ್‌ ಇದ್ರೆ ಇಂದಿನ ದರ ಗಮನಿಸಿ.

ಮಾರ್ಚ್‌ 24ರ ಚಿನ್ನ, ಬೆಳ್ಳಿ ದರ
ಮಾರ್ಚ್‌ 24ರ ಚಿನ್ನ, ಬೆಳ್ಳಿ ದರ

ಬೆಂಗಳೂರು: ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಚಿನ್ನದ ದರ ಏರಿಕೆಯಾಗುತ್ತಲೇ ಇದ್ದು ಆಭರಣ ಪ್ರಿಯರು ಭಾರಿ ನಿರಾಸೆ ಅನುಭವಿಸಿದ್ದರು. ಇದೀಗ ಹಲವು ದಿನಗಳ ನಂತರ ಚಿನ್ನ ದರ ಕೊಂಚ ಇಳಿಕೆಯಾಗಿದೆ. ಜೊತೆಗೆ ಬೆಳ್ಳಿ ದರವೂ ಕಡಿಮೆಯಾಗಿದೆ. ಭಾನುವಾರವಾದ ಕಾರಣ ನೀವು ಇಂದು ಚಿನ್ನ ಖರೀದಿ ಹೋಗುವ ಮನಸ್ಸು ಮಾಡಿದರೆ, ಅದಕ್ಕೂ ಮುನ್ನ ಇಂದು ಕರ್ನಾಟಕ ಸೇರಿದಂತೆ ವಿವಿಧೆಡೆ ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ ಗಮನಿಸಿ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

22 ಕ್ಯಾರೆಟ್‌ ಚಿನ್ನದ ಬೆಲೆ

ಇಂದು 1 ಗ್ರಾಂ ಚಿನ್ನಕ್ಕೆ 6,125 ರೂ. ಆಗಿದೆ. ನಿನ್ನೆ 6,135 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 10 ರೂ ಇಳಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 49,000 ರೂ. ನೀಡಬೇಕು. ನಿನ್ನೆ 49,080 ರೂ ಇದ್ದು, ನಿನ್ನೆ ದರಕ್ಕೆ ಹೋಲಿಸಿದರೆ ಇಂದು 80 ರೂ. ಕಡಿಮೆಯಾಗಿದೆ. 10 ಗ್ರಾಂ ಚಿನ್ನಕ್ಕೆ 61,250 ರೂ ಆಗಿದೆ. ನಿನ್ನೆ 61,350 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 100 ರೂ. ಕಡಿಮೆಯಾಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 6,12,500 ರೂ. ನೀಡಬೇಕು. ನಿನ್ನೆ 6,13,500 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 1,100 ರೂ. ಕಡಿಮೆಯಾಗಿದೆ.

24 ಕ್ಯಾರೆಟ್‌ ಚಿನ್ನದ ಬೆಲೆ

24 ಕ್ಯಾರೆಟ್‌ ಚಿನ್ನಕ್ಕೆ 1 ಗ್ರಾಂಗೆ 6,682 ರೂ. ಆಗಿದೆ. ನಿನ್ನೆ 6,693 ರೂ. ಇದು ಈ ದರಕ್ಕೆ ಹೋಲಿಸಿದರೆ 11 ರೂ ಕಡಿಮೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 53,456 ರೂ. ನೀಡಬೇಕು. ನಿನ್ನೆ 53,544 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 88 ರೂ. ಕಡಿಮೆಯಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 66,820 ನೀಡಬೇಕು. ನಿನ್ನೆ 66,930 ರೂ. ಇದ್ದು, ಈ ದರಕ್ಕೆ ಹೋಲಿಸಿದರೆ 110 ರೂ ಕಡಿಮೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ 6,68,200 ರೂ. ಇದೆ. ನಿನ್ನೆ 6,69,300 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 1,100 ರೂ ಕಡಿಮೆಯಾಗಿದೆ.

ಕರ್ನಾಟಕದಲ್ಲಿ ಚಿನ್ನದ ಬೆಲೆ (10 ಗ್ರಾಂ)

ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 61,250 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 66,820 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.

ಹೊರ ರಾಜ್ಯಗಳಲ್ಲಿ ಚಿನ್ನದ ದರ (10 ಗ್ರಾಂ)

ಚೆನ್ನೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 61,850 ರೂ. 24 ಕ್ಯಾರೆಟ್‌ಗೆ 67,470 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 61,250 ರೂ. 24 ಕ್ಯಾರೆಟ್‌ಗೆ 66,820 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 61,400 ರೂ. 24 ಕ್ಯಾರೆಟ್‌ಗೆ 66,970 ರೂ. ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 61,250 ರೂ. 24 ಕ್ಯಾರೆಟ್‌ಗೆ 66,820 ರೂ. ಇದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 61,250 ರೂ. ಇದ್ದರೆ, 24 ಕ್ಯಾರೆಟ್‌ಗೆ 66,820 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 61,250 ರೂ. 24 ಕ್ಯಾರೆಟ್‌ಗೆ 66,820 ರೂ. ಆಗಿದೆ.

ಬೆಳ್ಳಿ ದರ

ಇಂದು ಬೆಳ್ಳಿ ದರವೂ ಕೊಂಚ ಇಳಿಕೆಯಾಗಿದೆ. ಒಂದು ಗ್ರಾಂ ಬೆಳ್ಳಿಗೆ 76 ರೂ. ಇದೆ. 8 ಗ್ರಾಂಗೆ 608 ರೂ ಇದ್ದರೆ, 10 ಗ್ರಾಂಗೆ 760 ರೂ. ಇದೆ. 100 ಗ್ರಾಂಗೆ 7,600 ರೂ. ಹಾಗೂ 1 ಕಿಲೋಗೆ 76,000 ರೂ. ಬೆಲೆ ನಿಗದಿ ಆಗಿದೆ.

IPL_Entry_Point