ಕನ್ನಡ ಸುದ್ದಿ  /  Nation And-world  /  Business News Gold Silver Rate Today March 29th 2024 India Gold Rate Bengaluru Mangaluru Mysure Davanagere Rst

Gold Rate Today: ದುಪ್ಪಟ್ಟು ಏರಿಕೆಯಾಗಿದೆ ಚಿನ್ನದ ದರ, ಬೆಳ್ಳಿ ಬೆಲೆ ತುಸು ಇಳಿಕೆ; ಕರ್ನಾಟಕದಲ್ಲಿ ಗೋಲ್ಡ್‌ ರೇಟ್‌ ಎಷ್ಟಿದೆ ನೋಡಿ

2023-2024ನೇ ಸಾಲಿನ ಆರ್ಥಿಕ ವರ್ಷ ಕೊನೆಯಾಗಲು ಇನ್ನೆರಡೇ ದಿನ ಬಾಕಿ. ಇದೀಗ ಚಿನ್ನದ ದರದಲ್ಲಿ ಮತ್ತೆ ಏರಿಕೆಯ ಪರ್ವ ಆರಂಭವಾಗಿದೆ. ನಿನ್ನೆಗಿಂತ ಇಂದು (ಮಾರ್ಚ್‌ 29) ಹಳದಿ ಲೋಹದ ಬೆಲೆ ದುಪ್ಪಟ್ಟು ಏರಿಕೆಯಾದರೆ, ಬೆಳ್ಳಿ ದರ ಕೊಂಚ ಇಳಿಕೆಯಾಗಿದೆ.

Gold Rate Today: ಕರ್ನಾಟಕದಲ್ಲಿ ಬುಧವಾರ ಚಿನ್ನ ಬೆಳ್ಳಿ ದರ ಇಳಿಕೆ
Gold Rate Today: ಕರ್ನಾಟಕದಲ್ಲಿ ಬುಧವಾರ ಚಿನ್ನ ಬೆಳ್ಳಿ ದರ ಇಳಿಕೆ (PTI)

ಬೆಂಗಳೂರು: ಚಿನ್ನದ ದರ ಏರಿಕೆಯಾದರೆ ಆಭರಣ ಪ್ರಿಯರಿಗೆ ಭಾರಿ ನಿರಾಸೆ ಕಾಡುವುದು ಖಚಿತ. ಆದರೆ ಇದೀಗ ಚಿನ್ನದ ದರ ಮತ್ತೆ ಮತ್ತೆ ಏರಿಕೆಯಾಗುತ್ತಲೇ ಇದ್ದು, ಆಭರಣ ಪ್ರಿಯರು ಕಣ್ಣೀರು ಸುರಿಸುವಂತೆ ಮಾಡುತ್ತಿದೆ. ಮದುವೆ ಸೀಸನ್‌ನಲ್ಲಿ ಚಿನ್ನಾಭರಣಕ್ಕೆ ಬೇಡಿಕೆ ಹೆಚ್ಚಿದ್ದು, ಆಭರಣ ಬೆಲೆ ಏರಿಕೆಯಾಗುತ್ತಿರುವುದು ನುಂಗಲಾರದ ತುತ್ತಾಗಿದೆ. ಕರ್ನಾಟಕ ಸೇರಿದಂತೆ ದೇಶದಲ್ಲಿ ಇಂದು (ಮಾರ್ಚ್‌ 28) ಚಿನ್ನದ ದರ ದುಪ್ಪಟ್ಟು ಹೆಚ್ಚಾಗಿದೆ. ಬೆಳ್ಳಿ ದರ ತುಸು ಇಳಿಕೆಯಾಗಿದೆ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

22 ಕ್ಯಾರೆಟ್‌ ಚಿನ್ನದ ಬೆಲೆ

ಇಂದು 1 ಗ್ರಾಂ ಚಿನ್ನಕ್ಕೆ 6,170 ರೂ. ಆಗಿದೆ. ನಿನ್ನೆ 6,135 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 35 ರೂ ಏರಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 49,360 ರೂ. ನೀಡಬೇಕು. ನಿನ್ನೆ 49,080 ರೂ ಇದ್ದು, ನಿನ್ನೆ ದರಕ್ಕೆ ಹೋಲಿಸಿದರೆ ಇಂದು 280 ರೂ. ಹೆಚ್ಚಾಗಿದೆ. 10 ಗ್ರಾಂ ಚಿನ್ನಕ್ಕೆ 61,700 ರೂ ಆಗಿದೆ. ನಿನ್ನೆ 61,350 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 350 ರೂ. ಏರಿಕೆಯಾಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 6,17,000 ರೂ. ನೀಡಬೇಕು. ನಿನ್ನೆ 6,13,500 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 3,500 ರೂ. ಹೆಚ್ಚಾಗಿದೆ.

24 ಕ್ಯಾರೆಟ್‌ ಚಿನ್ನದ ಬೆಲೆ

24 ಕ್ಯಾರೆಟ್‌ ಚಿನ್ನಕ್ಕೆ 1 ಗ್ರಾಂಗೆ 6,731 ರೂ. ಆಗಿದೆ. ನಿನ್ನೆ 6,693 ರೂ. ಇದು ಈ ದರಕ್ಕೆ ಹೋಲಿಸಿದರೆ 38 ರೂ ಏರಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 53,848 ರೂ. ನೀಡಬೇಕು. ನಿನ್ನೆ 53,544 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 304 ರೂ. ಏರಿಕೆಯಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 67,310 ನೀಡಬೇಕು. ನಿನ್ನೆ 66,930 ರೂ. ಇದ್ದು, ಈ ದರಕ್ಕೆ ಹೋಲಿಸಿದರೆ 380 ರೂ ಹೆಚ್ಚಾಗಿದೆ. 100 ಗ್ರಾಂ ಚಿನ್ನದ ಬೆಲೆ 6,73,100 ರೂ. ಇದೆ. ನಿನ್ನೆ 6,69,300 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 3,800 ರೂ ಏರಿಕೆಯಾಗಿದೆ.

ಕರ್ನಾಟಕದಲ್ಲಿ ಚಿನ್ನದ ಬೆಲೆ (10 ಗ್ರಾಂ)

ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 61,700 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 67,310 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.

ಹೊರ ರಾಜ್ಯಗಳಲ್ಲಿ ಚಿನ್ನದ ದರ (10 ಗ್ರಾಂ)

ಚೆನ್ನೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 62,500 ರೂ. 24 ಕ್ಯಾರೆಟ್‌ಗೆ 68,180 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 61,700 ರೂ. 24 ಕ್ಯಾರೆಟ್‌ಗೆ 67,310 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 61,850 ರೂ. 24 ಕ್ಯಾರೆಟ್‌ಗೆ 67,460 ರೂ. ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 61,700 ರೂ. 24 ಕ್ಯಾರೆಟ್‌ಗೆ 67,310 ರೂ. ಇದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 61,700 ರೂ. ಇದ್ದರೆ, 24 ಕ್ಯಾರೆಟ್‌ಗೆ 66,310 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 61,700 ರೂ. 24 ಕ್ಯಾರೆಟ್‌ಗೆ 67,310 ರೂ. ಆಗಿದೆ.

ಬೆಳ್ಳಿ ದರ

ಇಂದು ಬೆಳ್ಳಿ ದರವೂ ತುಸು ಇಳಿಕೆಯಾಗಿದೆ. ಒಂದು ಗ್ರಾಂ ಬೆಳ್ಳಿಗೆ 75.90 ರೂ. ಇದೆ. 8 ಗ್ರಾಂಗೆ 607.20 ರೂ ಇದ್ದರೆ, 10 ಗ್ರಾಂಗೆ 759 ರೂ. ಇದೆ. 100 ಗ್ರಾಂಗೆ 7,590 ರೂ. ಹಾಗೂ 1 ಕಿಲೋಗೆ 75,900 ರೂ. ಬೆಲೆ ನಿಗದಿ ಆಗಿದೆ.