Gold Rate: ಆಭರಣ ಪ್ರಿಯರಿಗೆ ಕಾಡಲಿದೆ ನಿರಾಸೆ, ನಿರಂತರ ಇಳಿಕೆಯ ಬಳಿಕ ದುಪ್ಪಟ್ಟು ಏರಿಕೆಯಾದ ಚಿನ್ನದ ದರ, ಬೆಳ್ಳಿ ದರವೂ ಹೆಚ್ಚಳ
ಕಳೆದೊಂದು ವಾರದಿಂದ ನಿರಂತರವಾಗಿ ಇಳಿಕೆ ಕಾಣುವ ಮೂಲಕ ಆಭರಣ ಪ್ರಿಯರಲ್ಲಿ ಸಂತಸ ಮೂಡಿಸಿದ್ದ ಚಿನ್ನದ ದರ ಇದೀಗ ದುಪ್ಪಟ್ಟು ಏರಿಕೆಯಾಗಿದೆ. ಕಳೆದೆರಡು ದಿನಗಳಿಂದ ಬೆಳ್ಳಿ ದರವೂ ಹೆಚ್ಚಳವಾಗುತ್ತಿದೆ. ಇಂದು (ಮಾರ್ಚ್ 2) ದೇಶದಲ್ಲಿ ಚಿನ್ನದ ದರ ಎಷ್ಟಿದೆ ಗಮನಿಸಿ.
ಬೆಂಗಳೂರು: ಚಿನ್ನದ ದರ ಯಾವಾಗ ಏರಿಕೆಯಾಗುತ್ತದೆ, ಯಾವಾಗ ಇಳಿಕೆಯಾಗುತ್ತದೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಕಳೆದ ಕೆಲವು ದಿನಗಳಿಂದ ಚಿನ್ನದ ದರ ಇಳಿಕೆಯಾಗುತ್ತಲೇ ಇತ್ತು. ಬೆಳ್ಳಿ ದರ ಸಾಮಾನ್ಯವಾಗಿ ತಟಸ್ಥವಾಗಿತ್ತು. ಆದರೆ ಇದೀಗ ಚಿನ್ನದ ದುಪ್ಪಟ್ಟು ಏರಿಕೆಯಾಗಿದೆ. ಬೆಳ್ಳಿ ದರವೂ ಹೆಚ್ಚಳವಾಗುತ್ತಿದೆ. ಮಾರ್ಚ್, ಏಪ್ರಿಲ್‌ನಂತಹ ಮದುವೆ ಸೀಸನ್‌ಗಳಲ್ಲಿ ಚಿನ್ನದ ದರ ಏರಿಕೆಯಾದರೆ ಆಭರಣ ಪ್ರಿಯರಿಗೆ ಸಹಜವಾಗಿಯೇ ಬೇಸರ ಕಾಡುತ್ತದೆ. ಅದೇನೆ ಇರಲಿ ಇಂದು ದೇಶದಲ್ಲಿ ಚಿನ್ನದ ದರ ಎಷ್ಟಿದೆ ಗಮನಿಸಿ.
22 ಕ್ಯಾರೆಟ್ ಚಿನ್ನದ ಬೆಲೆ
ಇಂದು 1 ಗ್ರಾಂ ಚಿನ್ನಕ್ಕೆ 5,790 ರೂ. ಆಗಿದೆ. ನಿನ್ನೆ 5,759 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 31 ರೂ ಏರಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 46,320 ರೂ. ನೀಡಬೇಕು. ನಿನ್ನೆ 46,072 ರೂ ಇದ್ದು, ನಿನ್ನೆ ದರಕ್ಕೆ ಹೋಲಿಸಿದರೆ ಇಂದು 248 ರೂ. ಹೆಚ್ಚಾಗಿದೆ. 10 ಗ್ರಾಂ ಚಿನ್ನಕ್ಕೆ 57,900 ರೂ ಆಗಿದೆ. ನಿನ್ನೆ 57,590 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 310 ರೂ. ಏರಿಕೆಯಾಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 5,79,000 ರೂ. ನೀಡಬೇಕು. ನಿನ್ನೆ 5,75,900 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 3,100 ರೂ. ಹೆಚ್ಚಾಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ
24 ಕ್ಯಾರೆಟ್ ಚಿನ್ನಕ್ಕೆ 1 ಗ್ರಾಂಗೆ 6,316 ರೂ. ಆಗಿದೆ. ನಿನ್ನೆ 6,283 ರೂ. ಇದು ಈ ದರಕ್ಕೆ ಹೋಲಿಸಿದರೆ 33 ರೂ ಹೆಚ್ಚಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 50,528 ರೂ. ನೀಡಬೇಕು. ನಿನ್ನೆ 50,264 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 264 ರೂ. ಕಡಿಮೆಯಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 62,160 ನೀಡಬೇಕು. ನಿನ್ನೆ 62,830 ರೂ. ಇದ್ದು, ಈ ದರಕ್ಕೆ ಹೋಲಿಸಿದರೆ 330 ರೂ ಏರಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ 6,31,600 ರೂ. ಇದೆ. ನಿನ್ನೆ 6,28,300 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 3,300 ರೂ ಕಡಿಮೆ ಆಗಿದೆ.
ಕರ್ನಾಟಕದಲ್ಲಿ ಚಿನ್ನದ ಬೆಲೆ (10 ಗ್ರಾಂ)
ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 57,900 ರೂ. ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 62,160 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.
ಹೊರ ರಾಜ್ಯಗಳಲ್ಲಿ ಚಿನ್ನದ ದರ (10 ಗ್ರಾಂ)
ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 58,400 ರೂ. 24 ಕ್ಯಾರೆಟ್‌ಗೆ 63,710 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 57,900 ರೂ. 24 ಕ್ಯಾರೆಟ್‌ಗೆ 62,160 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 58,900 ರೂ. 24 ಕ್ಯಾರೆಟ್‌ಗೆ 63,310 ರೂ. ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 57,900 ರೂ. 24 ಕ್ಯಾರೆಟ್‌ಗೆ 63,160 ರೂ. ಇದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 57,900 ರೂ. ಇದ್ದರೆ, 24 ಕ್ಯಾರೆಟ್‌ಗೆ 63,160 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 57,900 ರೂ. 24 ಕ್ಯಾರೆಟ್‌ಗೆ 63,160 ರೂ. ಆಗಿದೆ.
ಬೆಳ್ಳಿ ದರ
ಬೆಳ್ಳಿ ದರ ಇಂದು ಕೂಡ ತುಸು ಏರಿಕೆಯಾಗಿದೆ. ಒಂದು ಗ್ರಾಂ ಬೆಳ್ಳಿಗೆ 72 ರೂ. ಇದೆ. 8 ಗ್ರಾಂಗೆ 576 ರೂ ಇದ್ದರೆ, 10 ಗ್ರಾಂಗೆ 720 ರೂ. ಇದೆ. 100 ಗ್ರಾಂಗೆ 7,200 ರೂ. ಹಾಗೂ 1 ಕಿಲೋಗೆ 72,000 ರೂ. ಬೆಲೆ ನಿಗದಿ ಆಗಿದೆ.
(This copy first appeared in Hindustan Times Kannada website. To read more like this please logon to kannada.hindustantimes.com)