Gold Rate Today: ಒಂದೇ ದಿನದಲ್ಲಿ ಭಾರಿ ಏರಿಕೆ ಕಂಡ ಆಭರಣ ದರ, 60 ಸಾವಿರದ ಗಡಿ ದಾಟಿತು 10 ಗ್ರಾಂ ಚಿನ್ನ; ಬೆಳ್ಳಿ ದರವೂ ಹೆಚ್ಚಳ
ಮಾರ್ಚ್ ತಿಂಗಳ ಅಂತ್ಯದಲ್ಲಿ ಚಿನ್ನದ ದರದ ಏರಿಕೆ ನಾಗಾಲೋಟದಲ್ಲಿ ಸಾಗುತ್ತಿದೆ. ನಿನ್ನೆ (ಮಾರ್ಚ್ 29) ಕೂಡ ಚಿನ್ನದ ದರ ಹೆಚ್ಚಾಗಿತ್ತು. ಇಂದು ಒಂದೇ ಬಾರಿಗೆ 8 ಹಾಗೂ 10 ಗ್ರಾಂ ಚಿನ್ನ 1000 ರೂಪಾಯಿಯಷ್ಟು ಹೆಚ್ಚಾಗಿದೆ. ಬೆಳ್ಳಿ ದರದಲ್ಲೂ ಏರಿಕೆಯಾಗಿದ್ದನ್ನು ಕಾಣಬಹುದಾಗಿದೆ.
ಬೆಂಗಳೂರು: ಚಿನ್ನದ ಖರೀದಿ ಮಾಡಬೇಕೆಂದು ಹಣ ಕೂಡಿಸಿ ಇಟ್ಟಿದ್ದರೆ, ನಿಮಗೆ ಭಾರಿ ನಿರಾಸೆ ಖಚಿತ. ಒಂದೇ ದಿನದಲ್ಲಿ 1000 ರೂಪಾಯಿಗೂ ಅಧಿಕವಾಗಿದೆ ಆಭರಣ ಬೆಲೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 60 ಸಾವಿರದ ಗಡಿ ದಾಟಿದ್ದರೆ, 8 ಗ್ರಾಂ ಚಿನ್ನದ 50 ಸಾವಿರದ ಆಸುಪಾಸು ತಲುಪಿದೆ. 2024ರಲ್ಲಿ ಚಿನ್ನದ ದರ 70 ಸಾವಿರಕ್ಕೆ ತಲುಪುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬಂದಿದ್ದು, ಇದೀಗ ಈ ಮಾತು ಸತ್ಯವಾಗುವ ಎಲ್ಲಾ ಅಂಶಗಳು ಕಾಣಿಸುತ್ತಿವೆ. ಇದರೊಂದಿಗೆ ಇಂದು (ಮಾರ್ಚ್ 30) ಬೆಳ್ಳಿ ದರದಲ್ಲೂ ಹೆಚ್ಚಳವಾಗಿದೆ. ದೇಶದ ವಿವಿಧೆಡೆ ಇಂದು ಚಿನ್ನದ ದರ ಎಷ್ಟಿದೆ ಗಮನಿಸಿ.
22 ಕ್ಯಾರೆಟ್ ಚಿನ್ನದ ಬೆಲೆ
ಇಂದು 1 ಗ್ರಾಂ ಚಿನ್ನಕ್ಕೆ 6,300 ರೂ. ಆಗಿದೆ. ನಿನ್ನೆ 6,170 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 130 ರೂ ಏರಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 50,400 ರೂ. ನೀಡಬೇಕು. ನಿನ್ನೆ 49,360 ರೂ ಇದ್ದು, ನಿನ್ನೆ ದರಕ್ಕೆ ಹೋಲಿಸಿದರೆ ಇಂದು 1,040 ರೂ. ಹೆಚ್ಚಾಗಿದೆ. 10 ಗ್ರಾಂ ಚಿನ್ನಕ್ಕೆ 63,000 ರೂ ಆಗಿದೆ. ನಿನ್ನೆ 61,700 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 1,300 ರೂ. ಏರಿಕೆಯಾಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 6,30,000 ರೂ. ನೀಡಬೇಕು. ನಿನ್ನೆ 6,17,000 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 13,000 ರೂ. ಹೆಚ್ಚಾಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ
24 ಕ್ಯಾರೆಟ್ ಚಿನ್ನಕ್ಕೆ 1 ಗ್ರಾಂಗೆ 6,873 ರೂ. ಆಗಿದೆ. ನಿನ್ನೆ 6,731 ರೂ. ಇದು ಈ ದರಕ್ಕೆ ಹೋಲಿಸಿದರೆ 142 ರೂ ಏರಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 54,984 ರೂ. ನೀಡಬೇಕು. ನಿನ್ನೆ 53,848 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 1,136 ರೂ. ಏರಿಕೆಯಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 68,730 ನೀಡಬೇಕು. ನಿನ್ನೆ 67,310 ರೂ. ಇದ್ದು, ಈ ದರಕ್ಕೆ ಹೋಲಿಸಿದರೆ 1,420 ರೂ ಹೆಚ್ಚಾಗಿದೆ. 100 ಗ್ರಾಂ ಚಿನ್ನದ ಬೆಲೆ 6,87,300 ರೂ. ಇದೆ. ನಿನ್ನೆ 6,73,100 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 14,200 ರೂ ಏರಿಕೆಯಾಗಿದೆ.
ಕರ್ನಾಟಕದಲ್ಲಿ ಚಿನ್ನದ ಬೆಲೆ (10 ಗ್ರಾಂ)
ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 63,000 ರೂ. ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 68,730 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.
ಹೊರ ರಾಜ್ಯಗಳಲ್ಲಿ ಚಿನ್ನದ ದರ (10 ಗ್ರಾಂ)
ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 63,900 ರೂ. 24 ಕ್ಯಾರೆಟ್‌ಗೆ 69,710 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 63,000 ರೂ. 24 ಕ್ಯಾರೆಟ್‌ಗೆ 68,730 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 63,150 ರೂ. 24 ಕ್ಯಾರೆಟ್‌ಗೆ 68,880 ರೂ. ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 63,000 ರೂ. 24 ಕ್ಯಾರೆಟ್‌ಗೆ 68,730 ರೂ. ಇದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 63,000 ರೂ. ಇದ್ದರೆ, 24 ಕ್ಯಾರೆಟ್‌ಗೆ 68,730 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 63,000 ರೂ. 24 ಕ್ಯಾರೆಟ್‌ಗೆ 68,730 ರೂ. ಆಗಿದೆ.
ಬೆಳ್ಳಿ ದರ
ಇಂದು ಬೆಳ್ಳಿ ದರವೂ ತುಸು ಇಳಿಕೆಯಾಗಿದೆ. ಒಂದು ಗ್ರಾಂ ಬೆಳ್ಳಿಗೆ 77 ರೂ. ಇದೆ. 8 ಗ್ರಾಂಗೆ 616 ರೂ ಇದ್ದರೆ, 10 ಗ್ರಾಂಗೆ 770 ರೂ. ಇದೆ. 100 ಗ್ರಾಂಗೆ 7,700 ರೂ. ಹಾಗೂ 1 ಕಿಲೋಗೆ 77,000 ರೂ. ಬೆಲೆ ನಿಗದಿ ಆಗಿದೆ.