ಕನ್ನಡ ಸುದ್ದಿ  /  Nation And-world  /  Business News Gold Silver Rate Today March 30th 2024 India Gold Rate Bengaluru Mangaluru Mysure Davanagere Rst

Gold Rate Today: ಭಾರಿ ಏರಿಕೆಯ ಬಳಿಕ ತುಸು ಇಳಿಕೆ ಕಂಡ ಚಿನ್ನದ ದರ, ನಿಟ್ಟುಸಿರು ಬಿಟ್ಟ ಆಭರಣ ಪ್ರಿಯರು; ತಿಂಗಳಾಂತ್ಯಕ್ಕೆ ಬೆಳ್ಳಿ ತಟಸ್ಥ

ಒಂದೇ ದಿನದಲ್ಲಿ ಸಾವಿರ ರೂಪಾಯಿ ಏರಿಕೆ ಕಂಡಿದ್ದ ಚಿನ್ನದ ದರ ಇದೀಗ ತುಸು ಇಳಿಕೆಯಾಗಿದೆ. ಆ ಮೂಲಕ ಆಭರಣ ಪ್ರಿಯರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಮಾರ್ಚ್‌ ತಿಂಗಳ ಕೊನೆಯ ದಿನ (ಮಾರ್ಚ್‌ 31) ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಮಾರ್ಚ್‌ 31ರ ಚಿನ್ನ, ಬೆಳ್ಳಿ ದರ
ಮಾರ್ಚ್‌ 31ರ ಚಿನ್ನ, ಬೆಳ್ಳಿ ದರ (REUTERS)

ಬೆಂಗಳೂರು: 2023-24ನೇ ಸಾಲಿನ ಆರ್ಥಿಕ ವರ್ಷದ ಕೊನೆಯ ದಿನವಿಂದು. ಈ ವರ್ಷ ಬಹುತೇಕ ಚಿನ್ನದ ದರ ಏರಿಕೆಯತ್ತಲೇ ಸಾಗಿತ್ತು. ಕೆಲವು ದಿನ ಇಳಿಕೆಯಾದರೂ ಮತ್ತೆ ದುಪ್ಪಟ್ಟು ಏರಿಕೆಯಾಗುತ್ತಿತ್ತು. ನಿನ್ನೆ (ಮಾರ್ಚ್‌ 30) ಭಾರಿ ಏರಿಕೆ ಕಂಡು ಗಾಬರಿ ಮೂಡಿಸಿದ್ದ ಆಭರಣ ಬೆಲೆ ಇಂದು ಕೊಂಚ ಇಳಿಕೆಯಾಗಿದೆ. ಬೆಳ್ಳಿ ದರ ಇಂದು ತಟಸ್ಥವಾಗಿದೆ. ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಇಂದು ಚಿನ್ನ ಹಾಗೂ ಬೆಳ್ಳಿ ದರ ಎಷ್ಟಾಗಿದೆ ಗಮನಿಸಿ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

22 ಕ್ಯಾರೆಟ್‌ ಚಿನ್ನದ ಬೆಲೆ

ಇಂದು 1 ಗ್ರಾಂ ಚಿನ್ನಕ್ಕೆ 6,275 ರೂ. ಆಗಿದೆ. ನಿನ್ನೆ 6,300 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 25 ರೂ ಕಡಿಮೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 50,200 ರೂ. ನೀಡಬೇಕು. ನಿನ್ನೆ 50,400 ರೂ ಇದ್ದು, ನಿನ್ನೆ ದರಕ್ಕೆ ಹೋಲಿಸಿದರೆ ಇಂದು 200 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನಕ್ಕೆ 62,750 ರೂ ಆಗಿದೆ. ನಿನ್ನೆ 63,000 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 250 ರೂ. ಕಡಿಮೆಯಾಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 6,27,500 ರೂ. ನೀಡಬೇಕು. ನಿನ್ನೆ 6,30,000 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 2,500 ರೂ. ಇಳಿಕೆಯಾಗಿದೆ.

24 ಕ್ಯಾರೆಟ್‌ ಚಿನ್ನದ ಬೆಲೆ

24 ಕ್ಯಾರೆಟ್‌ ಚಿನ್ನಕ್ಕೆ 1 ಗ್ರಾಂಗೆ 6,845 ರೂ. ಆಗಿದೆ. ನಿನ್ನೆ 6,873 ರೂ. ಇದು ಈ ದರಕ್ಕೆ ಹೋಲಿಸಿದರೆ 28 ರೂ ಕಡಿಮೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 54,760 ರೂ. ನೀಡಬೇಕು. ನಿನ್ನೆ 54,984 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 224 ರೂ. ಕಡಿಮೆಯಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 68,450 ನೀಡಬೇಕು. ನಿನ್ನೆ 68,730 ರೂ. ಇದ್ದು, ಈ ದರಕ್ಕೆ ಹೋಲಿಸಿದರೆ 280 ರೂ ಕಡಿಮೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ 6,84,500 ರೂ. ಇದೆ. ನಿನ್ನೆ 6,87,300 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 2,800 ರೂ ಕಡಿಮೆಯಾಗಿದೆ.

ಕರ್ನಾಟಕದಲ್ಲಿ ಚಿನ್ನದ ಬೆಲೆ (10 ಗ್ರಾಂ)

ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 62,750 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 68,450 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.

ಹೊರ ರಾಜ್ಯಗಳಲ್ಲಿ ಚಿನ್ನದ ದರ (10 ಗ್ರಾಂ)

ಚೆನ್ನೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 63,700 ರೂ. 24 ಕ್ಯಾರೆಟ್‌ಗೆ 69,490 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 62,750 ರೂ. 24 ಕ್ಯಾರೆಟ್‌ಗೆ 68,450 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 62,900 ರೂ. 24 ಕ್ಯಾರೆಟ್‌ಗೆ 68,600 ರೂ. ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 62,750 ರೂ. 24 ಕ್ಯಾರೆಟ್‌ಗೆ 68,450 ರೂ. ಇದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 62,750 ರೂ. ಇದ್ದರೆ, 24 ಕ್ಯಾರೆಟ್‌ಗೆ 68,450 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 62,750 ರೂ. 24 ಕ್ಯಾರೆಟ್‌ಗೆ 68,450 ರೂ. ಆಗಿದೆ.

ಬೆಳ್ಳಿ ದರ

ಇಂದು ಬೆಳ್ಳಿ ದರ ಸ್ಥಿರವಾಗಿದೆ. ಒಂದು ಗ್ರಾಂ ಬೆಳ್ಳಿಗೆ 77 ರೂ. ಇದೆ. 8 ಗ್ರಾಂಗೆ 616 ರೂ ಇದ್ದರೆ, 10 ಗ್ರಾಂಗೆ 770 ರೂ. ಇದೆ. 100 ಗ್ರಾಂಗೆ 7,700 ರೂ. ಹಾಗೂ 1 ಕಿಲೋಗೆ 77,000 ರೂ. ಬೆಲೆ ನಿಗದಿ ಆಗಿದೆ.

IPL_Entry_Point