ಕನ್ನಡ ಸುದ್ದಿ  /  Nation And-world  /  Business News Gold Silver Rate Today March 6th 2024 India Gold Rate Bengaluru Mangaluru Mysure Davanagere Rst

Gold Rate: ಬಹುದಿನಗಳ ಬಳಿಕ ಭಾರಿ ಏರಿಕೆ ಕಂಡ ಚಿನ್ನದ ದರ, ಆಭರಣ ಪ್ರಿಯರನ್ನು ಕಾಡಲಿದೆ ನಿರಾಸೆ; ಬೆಳ್ಳಿ ದರ ಸ್ಥಿರ

ಆಭರಣ ಪ್ರಿಯರಿಗೆ ಇಂದು (ಮಾರ್ಚ್‌ 5) ಭಾರಿ ನಿರಾಸೆ ಕಾಡಲಿದೆ. ಒಂದಿಷ್ಟು ದಿನಗಳಿಂದ ಸ್ಥಿರ ಹಾಗೂ ಕಡಿಮೆಯಾಗುತ್ತಲಿದ್ದ ಚಿನ್ನದ ದರ ಇಂದು ಒಮ್ಮಿಂದೊಮ್ಮೆಗೆ ದುಪ್ಪಟ್ಟು ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಮೇಲೆ 700 ರೂ ಹೆಚ್ಚಾಗಿದೆ. ಬೆಳ್ಳಿ ದರ ಎಂದಿನಂತೆ ಸ್ಥಿರವಾಗಿದೆ. ಇಂದು ದೇಶದಲ್ಲಿ ಹಳದಿ ಲೋಹದ ಬೆಲೆ ಎಷ್ಟಿದೆ ಗಮನಿಸಿ.

ಬಹುದಿನಗಳ ಬಳಿಕ ಭಾರಿ ಏರಿಕೆ ಕಂಡ ಚಿನ್ನದ ದರ, ಆಭರಣ ಪ್ರಿಯರನ್ನು ಕಾಡಲಿದೆ ನಿರಾಸೆ
ಬಹುದಿನಗಳ ಬಳಿಕ ಭಾರಿ ಏರಿಕೆ ಕಂಡ ಚಿನ್ನದ ದರ, ಆಭರಣ ಪ್ರಿಯರನ್ನು ಕಾಡಲಿದೆ ನಿರಾಸೆ (PTI)

ಬೆಂಗಳೂರು: ಮಹಾಶಿವರಾತ್ರಿ ಹಾಗೂ ಮಹಿಳಾ ದಿನ ಹತ್ತಿರದಲ್ಲೇ ಇದ್ದು, ಚಿನ್ನ ಖರೀದಿ ಮಾಡಬೇಕು ಎಂದು ನೀವು ಬಯಸಿದ್ದರೆ, ಇಂದು ನಿಮಗೆ ಭಾರಿ ನಿರಾಸೆ ಕಾಡುವುದು ಖಚಿತ. ಒಂದಿಷ್ಟು ದಿನಗಳಿಂದ ಕಡಿಮೆಯಾಗುತ್ತಿದ್ದ ಚಿನ್ನದ ದರ ಇಂದು ದುಪ್ಪಟ್ಟು ಏರಿಕೆಯಾಗಿದೆ. ಬೆಳ್ಳಿ ದರ ಸ್ಥಿರವಾಗಿಯೇ ಇದೆ. ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ಎಂದು ಚಿನ್ನದ ದರ ಎಷ್ಟಿದೆ ಎಂಬುದನ್ನು ಗಮನಿಸಿ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

22 ಕ್ಯಾರೆಟ್‌ ಚಿನ್ನದ ಬೆಲೆ

ಇಂದು 1 ಗ್ರಾಂ ಚಿನ್ನಕ್ಕೆ 5,945 ರೂ. ಆಗಿದೆ. ನಿನ್ನೆ 5,875 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 70 ರೂ ಏರಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 47,560 ರೂ. ನೀಡಬೇಕು. ನಿನ್ನೆ 47,000 ರೂ ಇದ್ದು, ನಿನ್ನೆ ದರಕ್ಕೆ ಹೋಲಿಸಿದರೆ ಇಂದು 560 ರೂ. ಹೆಚ್ಚಾಗಿದೆ. 10 ಗ್ರಾಂ ಚಿನ್ನಕ್ಕೆ 59,450 ರೂ ಆಗಿದೆ. ನಿನ್ನೆ 58,750 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 700 ರೂ. ಏರಿಕೆಯಾಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 5,94,500 ರೂ. ನೀಡಬೇಕು. ನಿನ್ನೆ 5,87,500 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 7,000 ರೂ. ಹೆಚ್ಚಾಗಿದೆ.

24 ಕ್ಯಾರೆಟ್‌ ಚಿನ್ನದ ಬೆಲೆ

24 ಕ್ಯಾರೆಟ್‌ ಚಿನ್ನಕ್ಕೆ 1 ಗ್ರಾಂಗೆ 6,485 ರೂ. ಆಗಿದೆ. ನಿನ್ನೆ 6,409 ರೂ. ಇದು ಈ ದರಕ್ಕೆ ಹೋಲಿಸಿದರೆ 76 ರೂ ಹೆಚ್ಚಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 51,880 ರೂ. ನೀಡಬೇಕು. ನಿನ್ನೆ 51,272 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 608 ರೂ. ಹೆಚ್ಚಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 64,850 ನೀಡಬೇಕು. ನಿನ್ನೆ 64,090 ರೂ. ಇದ್ದು, ಈ ದರಕ್ಕೆ ಹೋಲಿಸಿದರೆ 760 ರೂ ಏರಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ 6,48,500 ರೂ. ಇದೆ. ನಿನ್ನೆ 6,40,900 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 7,600 ರೂ ಏರಿಕೆ ಆಗಿದೆ.

ಕರ್ನಾಟಕದಲ್ಲಿ ಚಿನ್ನದ ಬೆಲೆ (10 ಗ್ರಾಂ)

ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 59,450 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 64,850 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.

ಹೊರ ರಾಜ್ಯಗಳಲ್ಲಿ ಚಿನ್ನದ ದರ (10 ಗ್ರಾಂ)

ಚೆನ್ನೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 60,150 ರೂ. 24 ಕ್ಯಾರೆಟ್‌ಗೆ 65,620 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 59,450 ರೂ. 24 ಕ್ಯಾರೆಟ್‌ಗೆ 64,850 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 59,600 ರೂ. 24 ಕ್ಯಾರೆಟ್‌ಗೆ 65,000 ರೂ. ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 59,450 ರೂ. 24 ಕ್ಯಾರೆಟ್‌ಗೆ 64,850 ರೂ. ಇದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 57,450 ರೂ. ಇದ್ದರೆ, 24 ಕ್ಯಾರೆಟ್‌ಗೆ 64,850 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 59,450 ರೂ. 24 ಕ್ಯಾರೆಟ್‌ಗೆ 64,850 ರೂ. ಆಗಿದೆ.

ಬೆಳ್ಳಿ ದರ

ಬೆಳ್ಳಿ ದರ ಇಂದು ಸ್ಥಿರವಾಗಿದೆ. ಒಂದು ಗ್ರಾಂ ಬೆಳ್ಳಿಗೆ 72.75 ರೂ. ಇದೆ. 8 ಗ್ರಾಂಗೆ 582 ರೂ ಇದ್ದರೆ, 10 ಗ್ರಾಂಗೆ 727.50 ರೂ. ಇದೆ. 100 ಗ್ರಾಂಗೆ 7,275 ರೂ. ಹಾಗೂ 1 ಕಿಲೋಗೆ 72,750 ರೂ. ಬೆಲೆ ನಿಗದಿ ಆಗಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point