Gold Rate: ಏರಿಕೆಯ ಪರ್ವದತ್ತ ಆಭರಣ ದರ, ಬೆಳ್ಳಿ ದರವೂ ಹೆಚ್ಚಳ; ಚಿನ್ನ ಖರೀದಿಸುವ ಯೋಚನೆ ಇದ್ದರೆ ಕೊಂಚ ತಡೆಯಿರಿ
ಹಳದಿ ಲೋಹದ ಬೆಲೆ ಮತ್ತೆ ಮತ್ತೆ ಹೆಚ್ಚಾಗುತ್ತಿದೆ. ನಿನ್ನೆ ಭಾರಿ ಏರಿಕೆ ಕಂಡಿದ್ದ ಚಿನ್ನದ ದರ ಇಂದೂ (ಮಾರ್ಚ್ 7) ಹೆಚ್ಚಾಗಿದೆ. ಬಹುದಿನಗಳ ಬಳಿಕೆ ಬೆಳ್ಳಿ ದರವು ತುಸು ಹೆಚ್ಚೇ ಏರಿಕೆಯಾಗಿದೆ. ದೇಶದಲ್ಲಿ ಇಂದು ಚಿನ್ನ, ಬೆಳ್ಳಿ ದರ ಎಷ್ಟಿದೆ ಗಮನಿಸಿ.
ಬೆಂಗಳೂರು: ಚಿನ್ನದ ದರ ಇಳಿಕೆಯಾಗಿ ಸಂತಸವಾದರೆ ಕೆಲ ದಿನಗಳಲ್ಲೇ ದುಪ್ಪಟ್ಟು ಏರಿಕೆ ಕಾಣುವ ಮೂಲಕ ಬೇಸರ ಮೂಡಿಸುತ್ತದೆ. ಮಾರ್ಚ್ ತಿಂಗಳ ಆರಂಭದಲ್ಲಿ ಇಳಿಕೆಯಾಗಿದ್ದ ಚಿನ್ನದ ದರ ಇದೀಗ ಭಾರಿ ಏರಿಕೆ ಕಾಣುತ್ತಿದೆ. ಬೆಳ್ಳಿ ದರದಲ್ಲೂ ಇಂದು ಹೆಚ್ಚಾಗಿದೆ. ಚಿನ್ನ ಖರೀದಿ ಮಾಡಬೇಕು ಎಂದು ನೀವು ಯೋಚಿಸಿದ್ದರೆ ಕೊಂಚ ತಡೆಯುವುದು ಉತ್ತಮ. ಕರ್ನಾಟಕದ ಹಾಗೂ ದೇಶದ ವಿವಿಧ ರಾಜ್ಯಗಳಲ್ಲಿ ಇಂದು ಹಳದಿ ಲೋಹ ಬೆಲೆ ಏರಿಕೆಯಾಗಿದ್ದು, ಇಂದಿನ ದರ ಗಮನಿಸಿ.
22 ಕ್ಯಾರೆಟ್ ಚಿನ್ನದ ಬೆಲೆ
ಇಂದು 1 ಗ್ರಾಂ ಚಿನ್ನಕ್ಕೆ 5,970 ರೂ. ಆಗಿದೆ. ನಿನ್ನೆ 5,945 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 25 ರೂ ಏರಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 47,760 ರೂ. ನೀಡಬೇಕು. ನಿನ್ನೆ 47,560 ರೂ ಇದ್ದು, ನಿನ್ನೆ ದರಕ್ಕೆ ಹೋಲಿಸಿದರೆ ಇಂದು 200 ರೂ. ಹೆಚ್ಚಾಗಿದೆ. 10 ಗ್ರಾಂ ಚಿನ್ನಕ್ಕೆ 59,700 ರೂ ಆಗಿದೆ. ನಿನ್ನೆ 59,450 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 250 ರೂ. ಏರಿಕೆಯಾಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 5,97,000 ರೂ. ನೀಡಬೇಕು. ನಿನ್ನೆ 5,94,500 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 2,500 ರೂ. ಹೆಚ್ಚಾಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ
24 ಕ್ಯಾರೆಟ್ ಚಿನ್ನಕ್ಕೆ 1 ಗ್ರಾಂಗೆ 6,513 ರೂ. ಆಗಿದೆ. ನಿನ್ನೆ 6,485 ರೂ. ಇದು ಈ ದರಕ್ಕೆ ಹೋಲಿಸಿದರೆ 28 ರೂ ಹೆಚ್ಚಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 52,104 ರೂ. ನೀಡಬೇಕು. ನಿನ್ನೆ 51,880 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 224 ರೂ. ಹೆಚ್ಚಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 65,130 ನೀಡಬೇಕು. ನಿನ್ನೆ 64,850 ರೂ. ಇದ್ದು, ಈ ದರಕ್ಕೆ ಹೋಲಿಸಿದರೆ 280 ರೂ ಏರಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ 6,51,300 ರೂ. ಇದೆ. ನಿನ್ನೆ 6,48,500 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 2,800 ರೂ ಏರಿಕೆ ಆಗಿದೆ.
ಕರ್ನಾಟಕದಲ್ಲಿ ಚಿನ್ನದ ಬೆಲೆ (10 ಗ್ರಾಂ)
ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 59,700 ರೂ. ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 65,130 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.
ಹೊರ ರಾಜ್ಯಗಳಲ್ಲಿ ಚಿನ್ನದ ದರ (10 ಗ್ರಾಂ)
ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 60,400 ರೂ. 24 ಕ್ಯಾರೆಟ್‌ಗೆ 65,890 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 59,700 ರೂ. 24 ಕ್ಯಾರೆಟ್‌ಗೆ 65,130 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 59,850 ರೂ. 24 ಕ್ಯಾರೆಟ್‌ಗೆ 65,280 ರೂ. ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 59,700 ರೂ. 24 ಕ್ಯಾರೆಟ್‌ಗೆ 65,130 ರೂ. ಇದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 59,700 ರೂ. ಇದ್ದರೆ, 24 ಕ್ಯಾರೆಟ್‌ಗೆ 65,130 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 59,700 ರೂ. 24 ಕ್ಯಾರೆಟ್‌ಗೆ 65,130 ರೂ. ಆಗಿದೆ.
ಬೆಳ್ಳಿ ದರ
ಬೆಳ್ಳಿ ದರ ಕೊಂಚ ಏರಿಕೆಯಾಗಿದೆ. ಒಂದು ಗ್ರಾಂ ಬೆಳ್ಳಿಗೆ 74 ರೂ. ಇದೆ. 8 ಗ್ರಾಂಗೆ 592 ರೂ ಇದ್ದರೆ, 10 ಗ್ರಾಂಗೆ 740 ರೂ. ಇದೆ. 100 ಗ್ರಾಂಗೆ 7,400 ರೂ. ಹಾಗೂ 1 ಕಿಲೋಗೆ 74,000 ರೂ. ಬೆಲೆ ನಿಗದಿ ಆಗಿದೆ.
(This copy first appeared in Hindustan Times Kannada website. To read more like this please logon to kannada.hindustantimes.com)