ಕನ್ನಡ ಸುದ್ದಿ  /  Nation And-world  /  Business News Gold Silver Rate Today March 7th 2024 India Gold Rate Bengaluru Mangaluru Mysure Davanagere Rst

Gold Rate: ಶಿವರಾತ್ರಿ ದಿನವೂ ಕಡಿಮೆಯಾಗಿಲ್ಲ ಹಳದಿ ಲೋಹದ ಬೆಲೆ; ಅಂತರರಾಷ್ಟ್ರೀಯ ಮಹಿಳಾದಿನದಂದು ಬೆಳ್ಳಿ ದರವೂ ಏರಿಕೆ

ಮಹಾಶಿವರಾತ್ರಿ ಹಾಗೂ ಮಹಿಳಾ ದಿನವಾದ ಇಂದು (ಮಾರ್ಚ್‌ 8) ಕೂಡ ಚಿನ್ನದ ದರ ಏರಿಕೆಯಾಗಿದೆ. ಕಳೆದ ಮೂರು ದಿನಗಳಿಂದ ಚಿನ್ನ ಹಾಗೂ ಬೆಳ್ಳಿ ಎರಡರ ದರವೂ ಏರಿಕೆಯಾಗುತ್ತಿದ್ದು, ಇಂದು ದೇಶದಲ್ಲಿ ಚಿನ್ನ-ಬೆಳ್ಳಿ ದರ ಎಷ್ಟಿದೆ ಗಮನಿಸಿ.

ಶಿವರಾತ್ರಿ ದಿನವೂ ಕಡಿಮೆಯಾಗಿಲ್ಲ ಹಳದಿ ಲೋಹದ ಬೆಲೆ; ಮಹಿಳಾದಿನದಂದು ಬೆಳ್ಳಿ ದರವೂ ಏರಿಕೆ
ಶಿವರಾತ್ರಿ ದಿನವೂ ಕಡಿಮೆಯಾಗಿಲ್ಲ ಹಳದಿ ಲೋಹದ ಬೆಲೆ; ಮಹಿಳಾದಿನದಂದು ಬೆಳ್ಳಿ ದರವೂ ಏರಿಕೆ

ಬೆಂಗಳೂರು: ಹಬ್ಬಗಳು ಹಾಗೂ ವಿಶೇಷ ದಿನಗಳ ಸಂದರ್ಭ ಚಿನ್ನ ಖರೀದಿಸುವುದು ಭಾರತೀಯರ ವಾಡಿಕೆ. ಇಂದು ಭಾರತೀಯರಿಗೆ ಬಹಳ ವಿಶೇಷ, ಅದಕ್ಕೆ ಕಾರಣ ಅಂತರರಾಷ್ಟ್ರೀಯ ಮಹಿಳಾ ದಿನ ಹಾಗೂ ಮಹಾಶಿವರಾತ್ರಿ ಎರಡೂ ಒಂದೇ ದಿನ ಬಂದಿದೆ. ಈ ವಿಶೇಷ ದಿನದಂದು ಚಿನ್ನ, ಬೆಳ್ಳಿ ಖರೀದಿ ಮಾಡೋಣ ಎಂದು ಹಣ ಕೂಡಿಸಿ ಇಟ್ಟುಕೊಂಡವರಿಗೆ ಇಂದು ನಿರಾಸೆ ಕಾಡುವುದು ಖಚಿತ. ಅದಕ್ಕೆ ಕಾರಣ ಎರಡು ದಿನಗಳಿಂದ ಏರುಗತಿಯತ್ತ ಸಾಗುತ್ತಿದೆ ಚಿನ್ನದ ದರ ಇಂದೂ ಕೂಡ ಏರಿಕೆಯಾಗಿದೆ. ಬೆಳ್ಳಿ ಕೂಡ ತುಸು ಹೆಚ್ಚಾಗಿದೆ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

22 ಕ್ಯಾರೆಟ್‌ ಚಿನ್ನದ ಬೆಲೆ

ಇಂದು 1 ಗ್ರಾಂ ಚಿನ್ನಕ್ಕೆ 6,010 ರೂ. ಆಗಿದೆ. ನಿನ್ನೆ 5,970 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 40 ರೂ ಏರಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 48,080 ರೂ. ನೀಡಬೇಕು. ನಿನ್ನೆ 47,760 ರೂ ಇದ್ದು, ನಿನ್ನೆ ದರಕ್ಕೆ ಹೋಲಿಸಿದರೆ ಇಂದು 320 ರೂ. ಹೆಚ್ಚಾಗಿದೆ. 10 ಗ್ರಾಂ ಚಿನ್ನಕ್ಕೆ 60,100 ರೂ ಆಗಿದೆ. ನಿನ್ನೆ 59,700 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 400 ರೂ. ಏರಿಕೆಯಾಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 6,01,000 ರೂ. ನೀಡಬೇಕು. ನಿನ್ನೆ 5,97,000 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 4,000 ರೂ. ಹೆಚ್ಚಾಗಿದೆ.

24 ಕ್ಯಾರೆಟ್‌ ಚಿನ್ನದ ಬೆಲೆ

24 ಕ್ಯಾರೆಟ್‌ ಚಿನ್ನಕ್ಕೆ 1 ಗ್ರಾಂಗೆ 6,556 ರೂ. ಆಗಿದೆ. ನಿನ್ನೆ 6,513 ರೂ. ಇದು ಈ ದರಕ್ಕೆ ಹೋಲಿಸಿದರೆ 43 ರೂ ಹೆಚ್ಚಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 52,448 ರೂ. ನೀಡಬೇಕು. ನಿನ್ನೆ 52,104 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 334 ರೂ. ಹೆಚ್ಚಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 65,560 ನೀಡಬೇಕು. ನಿನ್ನೆ 65,130 ರೂ. ಇದ್ದು, ಈ ದರಕ್ಕೆ ಹೋಲಿಸಿದರೆ 430 ರೂ ಏರಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ 6,55,600 ರೂ. ಇದೆ. ನಿನ್ನೆ 6,51,300 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 4,300 ರೂ ಏರಿಕೆ ಆಗಿದೆ.

ಕರ್ನಾಟಕದಲ್ಲಿ ಚಿನ್ನದ ಬೆಲೆ (10 ಗ್ರಾಂ)

ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 60,100 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 65,560 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.

ಹೊರ ರಾಜ್ಯಗಳಲ್ಲಿ ಚಿನ್ನದ ದರ (10 ಗ್ರಾಂ)

ಚೆನ್ನೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 60,900 ರೂ. 24 ಕ್ಯಾರೆಟ್‌ಗೆ 66,440 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 60,100 ರೂ. 24 ಕ್ಯಾರೆಟ್‌ಗೆ 65,560 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 60,250 ರೂ. 24 ಕ್ಯಾರೆಟ್‌ಗೆ 65,710 ರೂ. ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 60,100 ರೂ. 24 ಕ್ಯಾರೆಟ್‌ಗೆ 65,560 ರೂ. ಇದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 60,100 ರೂ. ಇದ್ದರೆ, 24 ಕ್ಯಾರೆಟ್‌ಗೆ 65,560 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 60,100 ರೂ. 24 ಕ್ಯಾರೆಟ್‌ಗೆ 65,560 ರೂ. ಆಗಿದೆ.

ಬೆಳ್ಳಿ ದರ

ಬೆಳ್ಳಿ ದರ ಕೊಂಚ ಏರಿಕೆಯಾಗಿದೆ. ಒಂದು ಗ್ರಾಂ ಬೆಳ್ಳಿಗೆ 74.10 ರೂ. ಇದೆ. 8 ಗ್ರಾಂಗೆ 592.80 ರೂ ಇದ್ದರೆ, 10 ಗ್ರಾಂಗೆ 741 ರೂ. ಇದೆ. 100 ಗ್ರಾಂಗೆ 7,410 ರೂ. ಹಾಗೂ 1 ಕಿಲೋಗೆ 74,100 ರೂ. ಬೆಲೆ ನಿಗದಿ ಆಗಿದೆ.

IPL_Entry_Point