Gold Rate Today: ಆಭರಣ ಪ್ರಿಯರಿಗೆ ಭಾರಿ ನಿರಾಸೆ, ಸತತ 4 ದಿನಗಳಿಂದ ಏರಿಕೆಯಾಗುತ್ತಿದೆ ಚಿನ್ನದ ದರ; ಬೆಳ್ಳಿ ದರವೂ ಹೆಚ್ಚಳ
ವಾರಾಂತ್ಯದಲ್ಲಾದರೂ ಚಿನ್ನ, ಬೆಳ್ಳಿಯ ದರ ಇಳಿಕೆಯಾಗಬಹುದು ಎಂದು ನಿರೀಕ್ಷೆ ಇರಿಸಿಕೊಂಡವರಿಗೆ ಭಾರಿ ನಿರಾಸೆ ಕಾಡುವುದು ಖಚಿತ. ಯಾಕೆಂದರೆ ಚಿನ್ನ ಹಾಗೂ ಬೆಳ್ಳಿ ಎರಡರ ದರವೂ ಇಂದೂ ಏರಿಕೆಯಾಗಿದೆ. 4 ದಿನಗಳಿಂದ ಬಿಡುವಿಲ್ಲದೇ ಏರಿಕೆಯಾಗುತ್ತಿದೆ ಹಳದಿ ಲೋಹದ ಬೆಲೆ.
ಬೆಂಗಳೂರು: ಮಾರ್ಚ್ ತಿಂಗಳಲ್ಲಿ ಹಬ್ಬ ಹರಿದಿನಗಳು ಜಾಸ್ತಿ, ವಿಶೇಷ ಕಾರ್ಯಕ್ರಮಗಳು ನಡೆಯುವುದು ಈ ತಿಂಗಳಲ್ಲೇ ಹೆಚ್ಚು, ಹಾಗಾಗಿ ಮಾರ್ಚ್‌ನಲ್ಲಿ ಚಿನ್ನ ಖರೀದಿ ಮಾಡೋಣ ಎಂದು ನೀವು ಭಾವಿಸಿದ್ದರೆ ಖಂಡಿತ ನಿರಾಸೆ ಪಡುತ್ತೀರಿ. ಯಾಕೆಂದರೆ ಮಾರ್ಚ್‌ನಲ್ಲಿ ಚಿನ್ನದ ದರ ಭಾರಿ ಏರಿಕೆಯಾಗುವ ಸಾಧ್ಯತೆ ಕಾಣುತ್ತಿದೆ. ಇತ್ತ ಬೆಳ್ಳಿ ದರವೂ ಹೆಚ್ಚುತ್ತಿದೆ. ಮಾರ್ಚ್ ತಿಂಗಳ ಎರಡನೇ ವಾರಾಂತ್ಯದಲ್ಲಿ ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ ಗಮನಿಸಿ.
22 ಕ್ಯಾರೆಟ್ ಚಿನ್ನದ ಬೆಲೆ
ಇಂದು 1 ಗ್ರಾಂ ಚಿನ್ನಕ್ಕೆ 6,025 ರೂ. ಆಗಿದೆ. ನಿನ್ನೆ 6,010 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 15 ರೂ ಏರಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 48,200 ರೂ. ನೀಡಬೇಕು. ನಿನ್ನೆ 48,080 ರೂ ಇದ್ದು, ನಿನ್ನೆ ದರಕ್ಕೆ ಹೋಲಿಸಿದರೆ ಇಂದು 120 ರೂ. ಹೆಚ್ಚಾಗಿದೆ. 10 ಗ್ರಾಂ ಚಿನ್ನಕ್ಕೆ 60,250 ರೂ ಆಗಿದೆ. ನಿನ್ನೆ 60,100 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 150 ರೂ. ಏರಿಕೆಯಾಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 6,02,500 ರೂ. ನೀಡಬೇಕು. ನಿನ್ನೆ 6,01,000 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 1,500 ರೂ. ಹೆಚ್ಚಾಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ
24 ಕ್ಯಾರೆಟ್ ಚಿನ್ನಕ್ಕೆ 1 ಗ್ರಾಂಗೆ 6,573 ರೂ. ಆಗಿದೆ. ನಿನ್ನೆ 6,556 ರೂ. ಇದು ಈ ದರಕ್ಕೆ ಹೋಲಿಸಿದರೆ 17 ರೂ ಹೆಚ್ಚಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 52,584 ರೂ. ನೀಡಬೇಕು. ನಿನ್ನೆ 52,448 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 136 ರೂ. ಹೆಚ್ಚಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 65,730 ನೀಡಬೇಕು. ನಿನ್ನೆ 65,560 ರೂ. ಇದ್ದು, ಈ ದರಕ್ಕೆ ಹೋಲಿಸಿದರೆ 170 ರೂ ಏರಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ 6,57,300 ರೂ. ಇದೆ. ನಿನ್ನೆ 6,55,600 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 1,700 ರೂ ಏರಿಕೆ ಆಗಿದೆ.
ಕರ್ನಾಟಕದಲ್ಲಿ ಚಿನ್ನದ ಬೆಲೆ (10 ಗ್ರಾಂ)
ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 60,250 ರೂ. ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 65,730 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.
ಹೊರ ರಾಜ್ಯಗಳಲ್ಲಿ ಚಿನ್ನದ ದರ (10 ಗ್ರಾಂ)
ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 61,050 ರೂ. 24 ಕ್ಯಾರೆಟ್‌ಗೆ 66,600 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 60,250 ರೂ. 24 ಕ್ಯಾರೆಟ್‌ಗೆ 65,730 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 60,400 ರೂ. 24 ಕ್ಯಾರೆಟ್‌ಗೆ 65,880 ರೂ. ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 60,250 ರೂ. 24 ಕ್ಯಾರೆಟ್‌ಗೆ 65,730 ರೂ. ಇದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 60,250 ರೂ. ಇದ್ದರೆ, 24 ಕ್ಯಾರೆಟ್‌ಗೆ 65,730 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 60,250 ರೂ. 24 ಕ್ಯಾರೆಟ್‌ಗೆ 65,730 ರೂ. ಆಗಿದೆ.
ಬೆಳ್ಳಿ ದರ
ಬೆಳ್ಳಿ ದರ ಕೊಂಚ ಏರಿಕೆಯಾಗಿದೆ. ಒಂದು ಗ್ರಾಂ ಬೆಳ್ಳಿಗೆ 74.50 ರೂ. ಇದೆ. 8 ಗ್ರಾಂಗೆ 596 ರೂ ಇದ್ದರೆ, 10 ಗ್ರಾಂಗೆ 745 ರೂ. ಇದೆ. 100 ಗ್ರಾಂಗೆ 7,450 ರೂ. ಹಾಗೂ 1 ಕಿಲೋಗೆ 74,500 ರೂ. ಬೆಲೆ ನಿಗದಿ ಆಗಿದೆ.