HDFC Merger: ವಿಲೀನದ ಬಳಿಕ ಜಗತ್ತಿನ ಅತಿಮೌಲ್ಯಯುತ ಬ್ಯಾಂಕ್‌ಗಳ ಸಾಲಿಗೆ ಎಚ್‌ಡಿಎಫ್‌ಸಿ ಸೇರ್ಪಡೆ, ನಾಳೆಯಿಂದ ಎಚ್‌ಡಿಎಫ್‌ಸಿ ಲೆವಲ್ಲೇ ಬೇರೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Hdfc Merger: ವಿಲೀನದ ಬಳಿಕ ಜಗತ್ತಿನ ಅತಿಮೌಲ್ಯಯುತ ಬ್ಯಾಂಕ್‌ಗಳ ಸಾಲಿಗೆ ಎಚ್‌ಡಿಎಫ್‌ಸಿ ಸೇರ್ಪಡೆ, ನಾಳೆಯಿಂದ ಎಚ್‌ಡಿಎಫ್‌ಸಿ ಲೆವಲ್ಲೇ ಬೇರೆ

HDFC Merger: ವಿಲೀನದ ಬಳಿಕ ಜಗತ್ತಿನ ಅತಿಮೌಲ್ಯಯುತ ಬ್ಯಾಂಕ್‌ಗಳ ಸಾಲಿಗೆ ಎಚ್‌ಡಿಎಫ್‌ಸಿ ಸೇರ್ಪಡೆ, ನಾಳೆಯಿಂದ ಎಚ್‌ಡಿಎಫ್‌ಸಿ ಲೆವಲ್ಲೇ ಬೇರೆ

HDFC Murger: ಜುಲೈ 1ರಿಂದ ಅನ್ವಯವಾಗುವಂತೆ ಎಚ್‌ಡಿಎಫ್‌ಸಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ ವಿಲೀನವಾಗಲಿದೆ. ಇದರಿಂದ ಎಚ್‌ಡಿಎಫ್‌ಸಿಯು 12 ಕೋಟಿ ಗ್ರಾಹಕರನ್ನು (ಜರ್ಮನಿ ಜನಸಂಖ್ಯೆಗೂ ಅಧಿಕ) ಹೊಂದಿರುವ ಕಂಪನಿಯಾಗಲಿದೆ. ಜಗತ್ತಿನ ಅತ್ಯಧಿಕ ಮೌಲ್ಯಯುತ ಕಂಪನಿಗಳ ಸಾಲಿಗೆ ಎಚ್‌ಡಿಎಫ್‌ಸಿ ಸೇರ್ಪಡೆಗೊಳ್ಳಲಿದೆ.

HDFC Merger: ವಿಲೀನದ ಬಳಿಕ ಜಗತ್ತಿನ ಅತಿಮೌಲ್ಯಯುತ ಬ್ಯಾಂಕ್‌ಗಳ ಸಾಲಿಗೆ ಎಚ್‌ಡಿಎಫ್‌ಸಿ ಸೇರ್ಪಡೆ
HDFC Merger: ವಿಲೀನದ ಬಳಿಕ ಜಗತ್ತಿನ ಅತಿಮೌಲ್ಯಯುತ ಬ್ಯಾಂಕ್‌ಗಳ ಸಾಲಿಗೆ ಎಚ್‌ಡಿಎಫ್‌ಸಿ ಸೇರ್ಪಡೆ (Reuters)

ಬೆಂಗಳೂರು: ಭಾರತದ ಸ್ವದೇಶಿ ಖಾಸಗಿ ಕಂಪನಿಯೊಂದು ಮೊದಲ ಬಾರಿಗೆ ಜಗತ್ತಿನ ಅತ್ಯಧಿಕ ಮೌಲ್ಯಯುತ ಬ್ಯಾಂಕ್‌ಗಳ ಸಾಲಿಗೆ ಸೇರಲು ಸಿದ್ಧವಾಗಿದೆ. ಎಚ್‌ಡಿಎಫ್‌ಸಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಮಹಾ ವಿಲೀನದ ಬಳಿಕ ಎಚ್‌ಡಿಎಫ್‌ಸಿಯು ವಿಶ್ವ ಶ್ರೇಣಿಯ ಬ್ಯಾಂಕ್‌ ಆಗಿ ಬದಲಾಗಲಿದೆ. ಈಗಾಗಲೇ ಇರುವ ಅಮೆರಿಕ ಮತ್ತು ಚೀನಾದ ಬೃಹತ್‌ ಬ್ಯಾಂಕ್‌ಗಳ ಸಾಲಿಗೆ ಭಾರತದ ಬ್ಯಾಂಕ್‌ ಸೇರಲಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್ ಲಿಮಿಟೆಡ್ ಮತ್ತು ಹೌಸಿಂಗ್ ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪೊರೇಷನ್‌ನ ವಿಲೀನದ ಬಳಿಕ ಜೆಪಿ ಮೋರ್ಗಾನ್ ಚೇಸ್ & ಕಂ., ಇಂಡಸ್ಟ್ರಿಯಲ್ ಮತ್ತು ಕಮರ್ಷಿಯಲ್ ಬ್ಯಾಂಕ್ ಆಫ್ ಚೀನಾ ಲಿಮಿಟೆಡ್ ಮತ್ತು ಬ್ಯಾಂಕ್ ಆಫ್ ಅಮೇರಿಕಾ ಕಾರ್ಪೊರೇಷನ್ ಬಳಿಕದ ನಾಲ್ಕನೇ ಸ್ಥಾನವನ್ನು ಎಚ್‌ಡಿಎಫ್‌ಸಿ ಪಡೆಯಲಿದೆ. ಎಚ್‌ಡಿಎಫ್‌ಸಿ ಮೌಲ್ಯ 172 ಬಿಲಿಯನ್‌ ಡಾಲರ್‌ ಇರಲಿದೆ.

ಎಚ್‌ಡಿಎಫ್‌ಸಿ ವಿಲೀನವು ಜುಲೈ 1ರಿಂದ ಜಾರಿಗೆ ಬರುವ ನಿರೀಕ್ಷೆಯಿದೆ. ನೂತನ ಎಚ್‌ಡಿಎಫ್‌ಸಿ ಬ್ಯಾಂಕ್‌ ಘಟಕವು ಸುಮಾರು 12 ಕೋಟಿ ಗ್ರಾಹಕರನ್ನು ಹೊಂದಿರಲಿದೆ. ಇದು ಜರ್ಮನಿಯ ಜನಸಂಖ್ಯೆಗಿಂತ ಹೆಚ್ಚು. ಇದರಿಂದ ಬ್ಯಾಂಕ್‌ನ ಶಾಖೆಯ ನೆಟ್‌ವರ್ಕ್‌ 8,300ಕ್ಕಿಂತ ಹೆಚ್ಚಿರಲಿದೆ. ಒಟ್ಟು 1,77,000ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರಲಿದೆ.

ಎಚ್‌ಡಿಎಫ್‌ಸಿ ಮಾರುಕಟ್ಟೆ ಬಂಡವಾಳ

ಎಚ್‌ಎಸ್‌ಬಿಸಿ ಹೋಲ್ಡಿಂಗ್ಸ್ ಪಿಎಲ್‌ಸಿ ಮತ್ತು ಸಿಟಿಗ್ರೂಪ್ ಇಂಕ್ ಸೇರಿದಂತೆ ಹಲವು ಬ್ಯಾಂಕ್‌ಗಳಿಗಿಂತ ಎಚ್‌ಡಿಎಫ್‌ಸಿ ಮುನ್ನಡೆ ಸಾಧಿಸಿದೆ. ಜೂನ್ 22 ರ ವೇಳೆಗೆ ಕ್ರಮವಾಗಿ ಸುಮಾರು 62 ಶತಕೋಟಿ ಡಾಲರ್‌ ಮತ್ತು 79 ಶತಕೋಟಿ ಡಾಲರ್‌ ಮಾರುಕಟ್ಟೆ ಬಂಡವಾಳ ಹೊಂದಿರುವ ತನ್ನ ಭಾರತೀಯ ಗೆಳೆಯರಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಐಸಿಐಸಿಐ ಬ್ಯಾಂಕ್‌ಗಳ ಬಳಿಕದ ಸ್ಥಾನ ಪಡೆದಿತ್ತು.

"ಈ ಗಾತ್ರ ಮತ್ತು ಪ್ರಮಾಣವನ್ನು ಹೊಂದಿರುವ ಬ್ಯಾಂಕ್‌ಗಳು ಜಗತ್ತಿನಲ್ಲಿ ಕೆಲವೇ ಕೆಲವು ಇವೆ. ನಮ್ಮ ಬಂಡವಾಳವನ್ನು ನಾಲ್ಕು ವರ್ಷಗಳ ಅವಧಿಯಲ್ಲಿ ದ್ವಿಗುಣಗೊಳಿಸಲು ಬಯಸುತ್ತೇವೆ" ಎಂದು ಮ್ಯಾಕ್ವಾರಿ ಗ್ರೂಪ್ ಲಿಮಿಟೆಡ್‌ನ ಬ್ರೋಕರೇಜ್ ಘಟಕದಲ್ಲಿ ಭಾರತದ ಹಣಕಾಸು ಸೇವೆಗಳ ಸಂಶೋಧನೆಯ ಮುಖ್ಯಸ್ಥರಾಗಿರುವ ಸುರೇಶ್ ಗಣಪತಿ ಹೇಳಿದ್ದಾರೆ. "ಬ್ಯಾಂಕ್‌ ಶೇಕಡ 18ರಿಂದ ಶೇಕಡ 20ರಷ್ಟು ಬೆಳವಣಿಗೆಯ ನಿರೀಕ್ಷೆಯಲ್ಲಿದೆ. ಗಳಿಕೆಯ ಬೆಳವಣಿಗೆಯಲ್ಲಿ ಉತ್ತಮ ಸ್ಪಷ್ಟತೆ ಕಾಣಿಸುತ್ತದೆ. ಬ್ಯಾಂಕ್‌ ತಮ್ಮ ಶಾಖೆಗಳನ್ನು ಮುಂದಿನ ನಾಲ್ಕು ವರ್ಷದಲ್ಲಿ ದ್ವಿಗುಣಗೊಳಿಸಲು ಯೋಜಿಸಿದೆ. ಇದರಿಂದ ಎಚ್‌ಡಿಎಫ್‌ಸಿ ಬ್ಯಾಂಕ್‌ ಅಸಾಧಾರಣ ಸಂಸ್ಥೆಯಾಗಿ ಉಳಿಯಲಿದೆ" ಎಂದು ಅವರು ಹೇಳಿದ್ದಾರೆ.

ಠೇವಣಿ ಬೆಳವಣಿಗೆ

ಎಚ್‌ಡಿಎಫ್‌ಸಿ ಬ್ಯಾಂಕ್ ಠೇವಣಿಗಳನ್ನು ಗಳಿಸುವಲ್ಲಿ ತನ್ನ ಗೆಳೆಯ ಬ್ಯಾಂಕ್‌ಗಳನ್ನು ಸತತವಾಗಿ ಮೀರಿಸಿದೆ. ವಿಲೀನದ ಬಳಿಕ ಈ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ. ಎಚ್‌ಡಿಎಫ್‌ಸಿಯ ಶೇಖಡ 70ರಷ್ಟು ಗ್ರಾಹಕರು ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಖಾತೆಗಳನ್ನು ಹೊಂದಿಲ್ಲ. ಮುಂದಿನ ದಿನಗಳಲ್ಲಿ ಅವರು ಕೂಡ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಖಾತೆ ಹೊಂದಿದರೆ ಠೇವಣಿ ಸಂಖ್ಯೆ, ಖಾತೆ ಸಂಖ್ಯೆ ಗಮನಾರ್ಹವಾಗಿ ಏರಿಕೆ ಕಾಣಲಿದೆ.

ವಿಶ್ವಾಸ ಪರಿಶೀಲನೆ

ಎಚ್‌ಡಿಎಫ್‌ಸಿ ಬ್ಯಾಂಕ್, ಜೆಪಿ ಮೋರ್ಗಾನ್ ಅನ್ನು ತನ್ನ ಅತಿದೊಡ್ಡ ಹೂಡಿಕೆದಾರ ಎಂದು ಪರಿಗಣಿಸುತ್ತದೆ. ಇದು ಹೆಚ್ಚಿನ ಮಟ್ಟದ ಹೂಡಿಕೆದಾರರ ವಿಶ್ವಾಸವನ್ನು ಹೊಂದಿದೆ. ಅದರ ಅನಿಶ್ಚಿತ ಕನ್ವರ್ಟಿಬಲ್ ಬಾಂಡ್‌ಗಳು (ಸಾಲದಾತನು ತೊಂದರೆಗೆ ಸಿಲುಕಿದರೆ ಈಕ್ವಿಟಿಗೆ ಪರಿವರ್ತಿಸಬಹುದಾದ ಅಪಾಯಕಾರಿ ರೀತಿಯ ಸಾಲ) ಇತ್ಯಾದಿಗಳು ಉತ್ತಮವಾಗಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.