ಕನ್ನಡ ಸುದ್ದಿ  /  Nation And-world  /  Business News Huge Hike In Us Visa Fees From April 1 H 1b L1 Eb 5 Fee Details Here Rmy

US Visa Fees: ಏಪ್ರಿಲ್ 1 ರಿಂದ ಯುಎಸ್ ವೀಸಾ ಶುಲ್ಕದಲ್ಲಿ ಭಾರಿ ಏರಿಕೆ; ಎಚ್‌-1ಬಿ, ಎಲ್‌-1, ಇಬಿ-5 ಶುಲ್ಕದ ವಿವರ ಹೀಗಿದೆ

US Visa Fees: ಅಮೆರಿಕಗೆ ಹೋಗಲು ಪ್ಲಾನ್ ಮಾಡುತ್ತಿರುವವರು ವೀಸಾಗಾಗಿ ಇನ್ಮುಂದೆ ದೊಡ್ಡ ಮೊತ್ತದ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಕಾರಣ ಏಪ್ರಿಲ್ 1 ರಿಂದ ಯುಎಸ್ ವೀಸಾದ ಶುಲ್ಕಗಳನ್ನು ಹೆಚ್ಚಿಸಲಾಗಿದೆ.

ಏಪ್ರಿಲ್ 1 ರಿಂದ ಯುಎಸ್ ವೀಸಾಗಳ ಶುಲ್ಕವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಅದರ ವಿವರ ಇಲ್ಲಿದೆ.
ಏಪ್ರಿಲ್ 1 ರಿಂದ ಯುಎಸ್ ವೀಸಾಗಳ ಶುಲ್ಕವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಅದರ ವಿವರ ಇಲ್ಲಿದೆ.

ಬೆಂಗಳೂರು: ಸೋಮವಾರದಿಂದ (ಏಪ್ರಿಲ್ 1) ವಲಸೆಯೇತರ ಯುಎಸ್ ವೀಸಾಗಳಾದ ಹೆಚ್‌-1ಬಿ (H-1B Visa), ಇಬಿ-5 (EB-5 Visa) ಹಾಗೂ ಎಲ್‌-1 (L-1 Visa) ವೀಸಾಗಳ ಮೇಲಿನ ಶುಲ್ಕವನ್ನು ಹೆಚ್ಚಿಸಲಾಗಿದೆ. ವೀಸಾ ಸೇವೆಗಳು, ವಲಸೆ ನೀತಿಗಳು ಮತ್ತು ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಆಮೂಲಾಗ್ರ ಬದಲಾವಣೆಗಳು ಅಧ್ಯಕ್ಷೀಯ ಚುನಾವಣೆಗಳ ಮುಂದೆ ನಿರ್ಣಾಯಕವಾಗುತ್ತವೆ. ಭಾರತೀಯರು ಹೆಚ್ಚಾಗಿ ಎಚ್‌-1ಬಿ, ಎಲ್‌-1 ಮತ್ತು ಇಬಿ-5 ವೀಸಾಗಳ ಮೂಲಕ ಅಮೆರಿಕಗೆ ಭೇಟಿ ನೀಡಲು ವೀಸಾಗಳನ್ನು ಪಡೆಯುತ್ತಾರೆ. 2016 ರಿಂದ ಎಚ್‌-1ಬಿ, ಎಲ್‌-1 ಮತ್ತು ಇಬಿ-5 ವೀಸಾ ವರ್ಗಗಳ ಶುಲ್ಕದಲ್ಲಿ ಇದೇ ಮೊದಲ ಬಾರಿಗೆ ಹೆಚ್ಚಳವನ್ನು ಮಾಡಲಾಗಿದೆ. ಎಚ್‌-1ಬಿ ವೀಸಾ, ಎಲ್-1 ವೀಸಾ ಮತ್ತು ಇಬಿ-5 ವೀಸಾಗಳ ಹೊಸ ಶುಲ್ಕ ಹೆಚ್ಚಳವು ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ.

ಎಲ್‌-1ಬಿ ವೀಸಾ ಶುಲ್ಕದಲ್ಲಿ ಏರಿಕೆ

ಎಚ್‌-1ಬಿ ವೀಸಾ ಅರ್ಜಿ ಶುಲ್ಕವನ್ನು (ಫಾರ್ಮ್ I-129) 460 ಡಾಲರ್ (38,000 ರೂಪಾಯಿಗಿಂತ ಹೆಚ್ಚು) ನಿಂದ 780 ಡಾಲರ್‌ಗೆ (64,000 ರೂ ಕ್ಕಿಂತ ಹೆಚ್ಚು) ಹೆಚ್ಚಿಸಲಾಗಿದೆ. ಈ ಹೆಚ್ಚಳವು ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ಎಚ್‌-1ಬಿ ನೋಂದಣಿ ಕೂಡ ಮುಂದಿನ ವರ್ಷದಿಂದ 10 ಡಾಲರ್‌ಗಳಿಂದ (829 ರೂ ಗಿಂತ ಹೆಚ್ಚು) 215 ಡಾಲರ್‌ಗಳಿಗೆ (17,000 ರೂ ಕ್ಕಿಂತ ಹೆಚ್ಚು) ಹೆಚ್ಚಾಗುತ್ತದೆ. H-1B ವೀಸಾ ವಲಸೆ ರಹಿತ ವೀಸಾ ಆಗಿದೆ. ಇದು US ಕಂಪನಿಗಳಿಗೆ ಸೈದ್ಧಾಂತಿಕ ಅಥವಾ ತಾಂತ್ರಿಕ ಪರಿಣತಿಯ ಅಗತ್ಯವಿರುವ ವಿಶೇಷ ಉದ್ಯೋಗಗಳಲ್ಲಿ ವಿದೇಶಿ ಕೆಲಸಗಾರರನ್ನು ನೇಮಿಸಿಕೊಳ್ಳಲು ಅನುಮತಿಸುತ್ತದೆ. ಐಟಿ ಕಂಪನಿಗಳು ಈ ವೀಸಾದೊಂದಿಗೆ ಪ್ರತಿ ವರ್ಷ ಭಾರತ ಮತ್ತು ಚೀನಾದಂತಹ ದೇಶಗಳಿಂದ ಹತ್ತು ಸಾವಿರ ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತವೆ.

ಎಲ್‌-1 ವೀಸಾ ಶುಲ್ಕ ಎಷ್ಟಿದೆ?

ಎಲ್1 ವೀಸಾ ಶುಲ್ಕವನ್ನು 460 ಡಾಲರ್‌ಗಳಿಂದ (38,000 ರೂಪಾಯಿಕ್ಕಿಂತ ಹೆಚ್ಚು) 1,385 ಡಾಲರ್‌ಗಳಿಗೆ (1,10,000 ರೂಪಾಯಿಕ್ಕಿಂತ ಹೆಚ್ಚು) ಹೆಚ್ಚಿಸಲಾಗಿದೆ. ಈ ಹೆಚ್ಚಳವು ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ಎಲ್‌-1 ವೀಸಾ ಕೂಡ ವಲಸೆರಹಿತ ವೀಸಾ ವರ್ಗದ ಅಡಿಯಲ್ಲಿ ಬರುತ್ತದೆ. ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಕೆಲವು ಉದ್ಯೋಗಿಗಳನ್ನು ತಮ್ಮ ಸಾಗರೋತ್ತರ ಕಚೇರಿಗಳಿಂದ ಯುಎಸ್‌ನಲ್ಲಿ ಕೆಲಸ ಮಾಡಲು ತಾತ್ಕಾಲಿಕವಾಗಿ ವರ್ಗಾಯಿಸಲು ಇದು ಅನುಮತಿಸುತ್ತದೆ.

ಇಬಿ-5 ವೀಸಾ ಶುಲ್ಕದ ವಿವರ

ಇಬಿ-5 ವೀಸಾವನ್ನು ಹೂಡಿಕೆದಾರರ ವೀಸಾ ಎಂದೂ ಕರೆಯುತ್ತಾರೆ. ಈ ವೀಸಾದ ಅರ್ಜಿ ಶುಲ್ಕವನ್ನು 3,675 ಡಾಲರ್‌ಗಳಿಂದ (3,00,000 ರೂಪಾಯಿಕ್ಕಿಂತ ಹೆಚ್ಚು) 11,160 ಡಾಲರ್‌ಗಳಿಗೆ (9,00,000 ರೂಪಾಯಿಕ್ಕಿಂತ ಹೆಚ್ಚು) ಹೆಚ್ಚಿಸಲಾಗಿದೆ. ಈ ಹೆಚ್ಚಳವು ಏಪ್ರಿಲ್ 1ರ ಸೋಮವಾರದಿಂದ ಜಾರಿಗೆ ಬರಲಿದೆ.

ಅಮೆರಿಕ ಸರ್ಕಾರವು ಈ ಇಬಿ-5 ವೀಸಾ ನೀಡಿಕೆಯನ್ನು 1990 ರಲ್ಲಿ ಪ್ರಾರಂಭಿಸಿತು. ಕನಿಷ್ಠ 5 ಲಕ್ಷ ಡಾಲರ್‌ಗಳೊಂದಿಗೆ ಅಮೆರಿಕದಲ್ಲಿ ಯಾವುದೇ ವ್ಯವಹಾರವನ್ನು ಪ್ರಾರಂಭಿಸುವ ವಿದೇಶದ ಶ್ರೀಮಂತ ಉದ್ಯಮಿಗಳು, ಅವರು ಮತ್ತು ಅವರ ಕುಟುಂಬ ಸದಸ್ಯರಿಗೆ ಈ ವೀಸಾ ನೀಡಲಾಗುತ್ತದೆ. ವ್ಯಾಪಾರವು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕನಿಷ್ಠ 10 ಅಮೆರಿಕನ್ನರನ್ನು ನೇಮಿಸಿಕೊಳ್ಳುತ್ತದೆ. ವಿದೇಶದಲ್ಲಿ ವ್ಯಾಸಂಗ ಮಾಡುವ ಸಲುವಾಗಿ ವಿದ್ಯಾರ್ಥಿಗಳು ಕೂಡ ವಿದ್ಯಾರ್ಥಿ ವೀಸಾ ಮೂಲಕ ಅಮೆರಿಕಗೆ ಹೋಗುತ್ತಾರೆ. ಕೆಲವರು ಅಲ್ಲೇ ಉದ್ಯೋಗವನ್ನು ಹುಡುಕಿಕೊಂಡಿರುವ ಉದಾಹರಣೆಗಳೂ ಇವೆ.

IPL_Entry_Point

ವಿಭಾಗ