ಭಾರತದ ಮಾರುಕಟ್ಟೆಗೆ ಬಂತು ಹ್ಯುಂಡೈನ ಗ್ರ್ಯಾಂಡ್ ಐ 10 ನಿಯೋಸ್ ಹೈ-ಸಿಎನ್‌ಜಿ ಡ್ಯುಯೊ, ದರ, ಫೀಚರ್ಸ್ ಚೆಕ್ ಮಾಡಿಲ್ವ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಭಾರತದ ಮಾರುಕಟ್ಟೆಗೆ ಬಂತು ಹ್ಯುಂಡೈನ ಗ್ರ್ಯಾಂಡ್ ಐ 10 ನಿಯೋಸ್ ಹೈ-ಸಿಎನ್‌ಜಿ ಡ್ಯುಯೊ, ದರ, ಫೀಚರ್ಸ್ ಚೆಕ್ ಮಾಡಿಲ್ವ

ಭಾರತದ ಮಾರುಕಟ್ಟೆಗೆ ಬಂತು ಹ್ಯುಂಡೈನ ಗ್ರ್ಯಾಂಡ್ ಐ 10 ನಿಯೋಸ್ ಹೈ-ಸಿಎನ್‌ಜಿ ಡ್ಯುಯೊ, ದರ, ಫೀಚರ್ಸ್ ಚೆಕ್ ಮಾಡಿಲ್ವ

ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ತನ್ನ ಜನಪ್ರಿಯ ಸಿಎನ್‌ಜಿ ಹ್ಯಾಚ್ ಬ್ಯಾಕ್ ಗ್ರ್ಯಾಂಡ್ ಐ 10 ನಿಯೋಸ್ ಹೈ-ಸಿಎನ್‌ಜಿ ಡ್ಯುಯೊದ ಹೊಸ ಮಾದರಿಯನ್ನು ಭಾರತದ ಮಾರುಕಟ್ಟೆಗೆ ಇಂದು (ಆಗಸ್ಟ್ 2) ಪರಿಚಯಿಸಿದೆ. ಇದರ ಫೀಚರ್ಸ್‌, ದರ ಮುಂತಾದ ವಿವರ ಇಲ್ಲಿದೆ.

ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್ ಹೈ-ಸಿಎನ್‌ಜಿ ಡ್ಯುಯೊದ ಹೊಸ ಮಾದರಿ
ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್ ಹೈ-ಸಿಎನ್‌ಜಿ ಡ್ಯುಯೊದ ಹೊಸ ಮಾದರಿ

ನವದೆಹಲಿ: ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಕಾರು ಸುಧಾರಿತ ಅನುಕೂಲಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ. ಹೌದು, ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ತನ್ನ ಜನಪ್ರಿಯ ಸಿಎನ್‌ಜಿ ಹ್ಯಾಚ್ ಬ್ಯಾಕ್ ಗ್ರ್ಯಾಂಡ್ ಐ 10 ನಿಯೋಸ್ ಹೈ-ಸಿಎನ್‌ಜಿ ಡ್ಯುಯೊದ ಹೊಸ ಮಾದರಿಯನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ.

ಹ್ಯುಂಡೈ ಕಂಪನಿಯ ಈ ಹೊಸ ಸಿಎನ್‌ಜಿ ರೂಪಾಂತರವು ಡ್ಯುಯಲ್ ಸಿಲಿಂಡರ್ ತಂತ್ರಜ್ಞಾನವನ್ನು ಒಳಗೊಂಡಿದ್ದು, ಕಾರಿನ ಪ್ರಾಯೋಗಿಕತೆಯನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ. ಗ್ರ್ಯಾಂಡ್ ಐ 10 ನಿಯೋಸ್ ಎಕ್ಸ್‌ಟರ್‌ ಹೈಸಿಎನ್‌ಜಿ ಡ್ಯುಯೊ ನಂತರ ಹ್ಯುಂಡೈ ಸರಣಿಯಲ್ಲಿ ಈ ತಂತ್ರಜ್ಞಾನವನ್ನು ಹೊಂದಿರುವ ಎರಡನೇ ಮಾದರಿಯ ಕಾರು ಇದಾಗಿದೆ.

ಗ್ರ್ಯಾಂಡ್ ಐ10 ನಿಯೋಸ್ ಹೈ-ಸಿಎನ್‌ಜಿ ಡ್ಯುಯೊ ದರ

ದೆಹಲಿಯಲ್ಲಿ ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್ ಹೈ-ಸಿಎನ್‌ಜಿ ಡ್ಯುಯೊ ಕಾರಿನ ಎಕ್ಸ್‌ ಷೋರೂಂ ದರ 7.75 ಲಕ್ಷ ರೂಪಾಯಿ. ಡ್ಯುಯಲ್ ಸಿಲಿಂಡರ್ ಗ್ರ್ಯಾಂಡ್ ಐ 10 ನಿಯೋಸ್ ಸಿಎನ್ ಜಿ ಮ್ಯಾಗ್ನಾ (Grand i10 Nios Hy-CNG Duo Magna) ಮತ್ತು ಸ್ಪೋರ್ಟ್ಜ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಸ್ಪೋರ್ಟ್ಜ್ (Grand i10 Nios Hy-CNG Duo Sportz) ರೂಪಾಂತರದ ಎಕ್ಸ್ ಶೋರೂಂ ದರ 8.30 ಲಕ್ಷ ರೂಪಾಯಿ. ಹೆಚ್ಚುವರಿಯಾಗಿ, ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್ ಅನ್ನು ಸಿಂಗಲ್ ಸಿಲಿಂಡರ್ ಆಯ್ಕೆಯೊಂದಿಗೆ ನೀಡುವುದನ್ನು ಮುಂದುವರಿಸುವುದಾಗಿ ಕಂಪನಿ ಹೇಳಿದೆ.

ಗ್ರ್ಯಾಂಡ್ ಐ10 ನಿಯೋಸ್ ಹೈ-ಸಿಎನ್ ಜಿ ಡ್ಯುಯೊ ಕಾರು 1.2 ಲೀಟರಿನ ಬೈ-ಫ್ಯೂಯಲ್ ಎಂಜಿನ್ ಹೊಂದಿದ್ದು, ಇದರಲ್ಲಿ 5 ಸ್ಪೀಡಿನ ಮ್ಯಾನುವಲ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ಈ ಎಂಜಿನ್ 69 ಅಶ್ವಶಕ್ತಿ ಮತ್ತು 95.2 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಸಮಗ್ರ ವಿದ್ಯುನ್ಮಾನ ನಿಯಂತ್ರಣ ಘಟಕವು ತಡೆರಹಿತ ಚಾಲನಾ ಅನುಭವವನ್ನು ಖಚಿತಪಡಿಸುತ್ತದೆ.

ಗ್ರ್ಯಾಂಡ್ ಐ 10 ನಿಯೋಸ್ ಹೈ-ಸಿಎನ್‌ಜಿ ಡ್ಯುಯೊದ ಫೀಚರ್ಸ್ ಮತ್ತು ಸುರಕ್ಷತಾ ವ್ಯವಸ್ಥೆ

ಹ್ಯಾಚ್ ಬ್ಯಾಕ್ 20.25 ಸೆಂ.ಮೀ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಮ್, ಫುಟ್ ವೆಲ್ ಲೈಟಿಂಗ್, ಪ್ರೊಜೆಕ್ಟರ್ ಹೆಡ್ ಲೈಟ್, ಹಿಂಭಾಗದ ಎಸಿ ವೆಂಟ್ ಗಳು, ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್‌ ಮತ್ತು ಟೈಲ್ ಲೈಟ್‌, ರೂಫ್ ರೈಲ್‌ಗಳು, ಶಾರ್ಕ್ ಫಿನ್ ಆಂಟೆನಾ ಮತ್ತು ಅಡ್ಜಸ್ಟ್ ಮಾಡಬಹುದಾದ ಟಿಲ್ಟ್ ಸ್ಟೀರಿಂಗ್ ನಂತಹ ವಿವಿಧ ಫೀಚರ್‌ಗಳನ್ನು ಹೊಂದಿದೆ.

ಸುರಕ್ಷತೆ ವಿಚಾರಕ್ಕೆ ಬಂದರೆ, ಹ್ಯುಂಡೈ ವಾಹನವು ಆರು ಏರ್ ಬ್ಯಾಗ್ ಗಳು, ಹೈಲೈನ್ ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಂ), ರಿಯರ್ ವ್ಯೂ ಕ್ಯಾಮೆರಾ, ಹಗಲು ಮತ್ತು ರಾತ್ರಿ ಒಳಾಂಗಣ ರಿಯರ್ ವ್ಯೂ ಮಿರರ್ (ಐಆರ್ ವಿಎಂ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್ ಸಿ) ಮತ್ತು ಹಿಲ್-ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ (ಎಚ್ ಎಸಿ) ನಂತಹ ಸುಧಾರಿತ ಫೀಚರ್‌ಗಳನ್ನು ಒಳಗೊಂಡಿದೆ.

“ಗ್ರ್ಯಾಂಡ್ ಐ 10 ನಿಯೋಸ್ ಹೈ-ಸಿಎನ್ ಜಿ ಡ್ಯುಯೊದ ಪರಿಚಯವು ನಮ್ಮ ಗ್ರಾಹಕರ ವಿಕಸನಗೊಳ್ಳುತ್ತಿರುವ ಅವಶ್ಯಕತೆಗಳಿಗೆ ಹೊಂದಿಕೊಳ್ಳುವ ನಾವೀನ್ಯತೆ ಮತ್ತು ಸುಸ್ಥಿರ ಚಲನಶೀಲತೆ ಪರಿಹಾರಗಳಿಗೆ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಸುಧಾರಿತ ಡ್ಯುಯಲ್ ಸಿಲಿಂಡರ್ ಸಿಎನ್‌ಜಿ ಸಿಸ್ಟಮ್, ಪ್ರಭಾವಶಾಲಿ ಇಂಧನ ದಕ್ಷತೆ ಮತ್ತು ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ, ಗ್ರ್ಯಾಂಡ್ ಐ 10 ನಿಯೋಸ್ ಹೈ-ಸಿಎನ್ ಜಿ ಡ್ಯುಯೊವನ್ನು ಆರಾಮದಾಯಕ ಚಾಲನಾ ಅನುಭವವನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ಗ್ರಾಹಕ-ಕೇಂದ್ರಿತ ಕಂಪನಿಯಾಗಿ, ನಾವು ನಮ್ಮ ಗ್ರಾಹಕರ ಅಗತ್ಯಗಳಿಗೆ ಹೊಂದಿಕೊಳ್ಳುತ್ತೇವೆ ಮತ್ತು ನಮ್ಮ ಆವಿಷ್ಕಾರಗಳು ಅವರ ನಿಜವಾದ ಆಸೆಗಳೊಂದಿಗೆ ಹೊಂದಿಕೆಯಾಗುತ್ತವೆ ಎಂದು ಖಚಿತಪಡಿಸಿಕೊಳ್ಳುತ್ತೇವೆ” ಎಂದು ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್‌ನ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ತರುಣ್ ಗಾರ್ಗ್ ಹೇಳಿದರು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.