Samsung Galaxy M14 5G: ಪವರ್ ಪ್ಯಾಕ್ಡ್ 5G ಸ್ಮಾರ್ಟ್‌ಫೋನ್ ಬೇಕು ಅಂತ ಹುಡುಕ್ತಿದ್ದೀರಾ? ಈ ಫೋನ್‌ನ ಫೀಚರ್ಸ್ ಗಮನಿಸಿ ನೋಡಿ
Samsung Galaxy M14 5G: ಇದು ಮಾನ್‌ಸ್ಟರ್ 5ಜಿ ಫೋನ್. 50MP ಟ್ರಿಪಲ್ ಕ್ಯಾಮೆರಾ, 6000mAh ಬ್ಯಾಟರಿ ಮತ್ತು 5nm ಪ್ರೊಸೆಸರ್ ಮುಂತಾದ Gen Z ಫೀಚರ್ಸ್ ಹೊಂದಿರುವಂಥದ್ದು ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 14 5G ವಿಶೇಷತೆ. ಇದು ಮಾರುಕಟ್ಟೆಗೆ ಬಂದಿದೆ. ಇನ್ನು ತಡವೇಕೆ… ನಿಮ್ಮದಾಗಿಸಿಕೊಳ್ಳಿ.
ನೀವು ಪವರ್-ಪ್ಯಾಕ್ಡ್ 5G ಸ್ಮಾರ್ಟ್‌ಫೋನ್ ಬೇಕು ಅಂತ ಹುಡುಕ್ತಿದ್ದೀರಾ? ಇಲ್ನೋಡಿ - ಅತ್ಯುತ್ತಮ 50MP ಟ್ರಿಪಲ್ ಕ್ಯಾಮೆರಾ, 6000mAh ಬ್ಯಾಟರಿ, 5nm ಪ್ರೊಸೆಸರ್ ಮತ್ತು ಅದ್ಭುತ 5G ಸಾಮರ್ಥ್ಯ - Gen Z ನಲ್ಲಿ ಇದಕ್ಕಿಂತ ಹೆಚ್ಚು ಕಾರ್ಯಕ್ಷಮತೆ ಮತ್ತು ಅತ್ಯಧಿಕ ಫೀಚರ್ಸ್ ಇರುವಂಥ ಸ್ಮಾರ್ಟ್‌ಫೋನ್ ಒಂದು ಬರುತ್ತಿದೆ. ಹೌದು.. ನಿಮ್ಮ ಊಹೆ ಸರಿಯಾಗಿಯೇ ಇದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 14 5G (Samsung Galaxy M14 5G) ಮಾರುಕಟ್ಟೆ ಪ್ರವೇಶಿಸಿದೆ.
ಭಾರತದ ಅತ್ಯಂತ ಪ್ರೀತಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳಲ್ಲಿ ಒಂದಾದ ಸ್ಯಾಮ್‌ಸಂಗ್‌ನ ಲೇಟೆಸ್ಟ್ ಮಾಡೆಲ್ ಇದು. ಈ ಹಿಂದಿನ ಸ್ಮಾರ್ಟ್‌ಫೋನ್‌ಗಳಿಗೆ ಹೋಲಿಸಿದರೆ ಇದು ಹೆಚ್ಚಿನ ರೀತಿಯಲ್ಲಿ ಅಂದರೆ ದೊಡ್ಡ ಪ್ರಮಾಣದಲ್ಲಿ ಅಪ್‌ಗ್ರೇಡ್ ಆಗಿ ಗ್ರಾಹಕರ ಕೈಗೆ ತಲುಪುವ ನಿರೀಕ್ಷೆ ಇದೆ. ಈ ಬೆಲೆಯ ವಿಭಾಗದಲ್ಲಿ ಲಭ್ಯವಿರುವ ಸ್ಮಾರ್ಟ್‌ಫೋನ್‌ಗಳ ಪೈಕಿ ಅತ್ಯುತ್ತಮ ಸ್ಪೈಕ್ಸ್ ಅನ್ನು ಇದು ನೀಡಿದ್ದು, ಏಪ್ರಿಲ್ 17 ರಂದು ಇದು ಮಾರುಕಟ್ಟೆಗೆ ಬಂದಿದೆ. ಈ ಬೆರಗುಗೊಳಿಸುವ ಸ್ಮಾರ್ಟ್‌ಫೋನ್‌ನ ಆರಂಭಿಕ ಬೆಲೆ 13,000 ರೂಪಾಯಿ ಆಸುಪಾಸಿನಲ್ಲಿದೆ.
ಇದು ಅಮೆಜಾನ್‌ನಲ್ಲಿ ನಾಳೆಯೇ ಅಂದರೆ ಏ.21ರಂದು ಮಧ್ಯಾಹ್ನ12ಕ್ಕೆ ಮಾರಾಟಕ್ಕೆ ಲಭ್ಯವಾಗುತ್ತಿದ್ದು, ಆರಂಭಿಕ ಬೆಲೆ 13,490 ರೂಪಾಯಿ ನಿಗದಿಯಾಗಿದೆ.
ಗ್ಯಾಲಕ್ಸಿ ಎಂ ಸರಣಿಯು 2019 ರಲ್ಲಿ ಪ್ರಾರಂಭವಾದಾಗಿನಿಂದ Gen Z ನ ಅಚ್ಚುಮೆಚ್ಚಿನ ಫೋನ್ ಆಗಿ ಜನಪ್ರಿಯವಾಗಿದೆ. ಆರಂಭದಿಂದಲೂ ಗ್ಯಾಲಕ್ಸಿ ಎಂ ಸರಣಿಯು ನಂಬಲಾಗದ ಬೆಲೆಯಲ್ಲಿ ಅದ್ಭುತ ಸ್ಪೈಕ್ಸ್ ಅನ್ನು ನೀಡುತ್ತಾ ಬಂದಿದೆ. ಈ ಸರಣಿಯ ಮೊದಲ ಫೋನ್ ಗ್ಯಾಲಕ್ಸಿ ಎಂ 10 (Galaxy M10), ಅಲ್ಟ್ರಾ-ವೈಡ್ ಲೆನ್ಸ್‌ನೊಂದಿಗೆ ಡ್ಯುಯಲ್ ಕ್ಯಾಮೆರಾವನ್ನುಹೊಂದಿತ್ತು.
ಈ ಕೆಲವು ವರ್ಷಗಳಲ್ಲಿ, ಗ್ಯಾಲಕ್ಸಿ ಎಂ ಸರಣಿಯಲ್ಲಿ ಈ ವಿಭಾಗದ ಹಲವು ಅಗ್ರ ವಿಶೇಷತೆಗಳನ್ನು ಹೊಂದಿದೆ. ಈ ವಿಭಾಗದಲ್ಲೇ ಪ್ರಬಲವಾದ 6000mAh ಬ್ಯಾಟರಿ ಹೊಂದಿದ ಗ್ಯಾಲಕ್ಸಿ ಎಂ30s (Galaxy M30s), ಅದ್ಭುತ ಕ್ಯಾಮರಾ ಅನುಭವ ನೀಡುವ ಸಿಂಗಲ್ ಟೇಕ್ ಯುಕ್ತ 64 MP ಇಂಟೆಲ್ಲಿ-ಕ್ಯಾಮ್ ಹೊಂದಿದ ಗ್ಯಾಲಕ್ಸಿ M31s (Galaxy M31s) ಹಾಗು ಇದರ ನಂತರದ, 5nm ಪ್ರೊಸೆಸರ್ ಜತೆಗಿನ ವಾಯ್ಸ್ ಫೋಕಸ್‌ನಂತಹ ನಾವೀನ್ಯತೆಗಳಿಂದ ಕೂಡಿದ ಗ್ಯಾಲಕ್ಸಿ ಎಂ33 (Galaxy M33) ಮತ್ತು ಗ್ಯಾಲಕ್ಸಿ ಎಂ53 (Galaxy M53) 5G ಯನ್ನು ಬಿಡುಗಡೆ ಮಾಡಲಾಗಿದೆ.
ಗ್ರಾಹಕರು ಈ ಮಾನ್‌ಸ್ಟರ್ ಅನ್ನು ಮುಕ್ತವಾಗಿ ಸ್ವೀಕರಿಸಿದ್ದಾರೆ. ಈ ಬಜೆಟ್‌ನಲ್ಲಿ ವೈವಿಧ್ಯಮಯ ಫೀಚರ್ಸ್ ಹೊಂದಿರುವ ಕಾರಣ, ಅತಿವೇಗವಾಗಿ ಜನರ ಅಚ್ಚುಮೆಚ್ಚಿನ ಫೋನ್ ಆಗಿ ಗುರುತಿಸಿಕೊಂಡಿದೆ. ಅಷ್ಟೇ ಅಲ್ಲ, ಗ್ಯಾಲಕ್ಸಿ ಎಂ Galaxy M ಸರಣಿಯು ಸತತವಾಗಿ ಅಮೆಜಾನ್ (Amazon) ನಲ್ಲಿ ಹೆಚ್ಚು ಮಾರಾಟವಾಗುವ ಸರಣಿಯಾಗಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 14 5G (Samsung Galaxy M14 5G) ಫೀಚರ್ಸ್ ಹೀಗಿದೆ ನೋಡಿ
ಅದ್ಭುತ ಕ್ಯಾಮೆರಾ
ನೀವು ಫೋಟೋ ಕ್ಲಿಕ್ ಮಾಡಲು ಇಷ್ಟಪಡುವವರಾಗಿದ್ದು ಸ್ಮಾರ್ಟ್‌ಫೋನ್‌ನಲ್ಲಿ ಅತ್ಯುತ್ತಮ ಕ್ಯಾಮೆರಾ ನಿಮ್ಮ ಅತ್ಯಗತ್ಯವಾಗಿದ್ದರೆ, ಹೊಚ್ಚ ಹೊಸ ಗ್ಯಾಲಕ್ಸಿ ಎಂ 14 5G (Galaxy M14 5G) ನಿಮಗೆ ಸೂಕ್ತ ಆಯ್ಕೆ. ಈ ಸ್ಮಾರ್ಟ್‌ಫೋನ್ ಪ್ರಭಾವಶಾಲಿ 50MP ಟ್ರಿಪಲ್ ರಿಯರ್ ಕ್ಯಾಮೆರಾ (50MP triple rear camera) ಮತ್ತು 13MP ಫ್ರಂಟ್ ಕ್ಯಾಮೆರಾ (13MP front camera)ವನ್ನು ಹೊಂದಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 14 5G (Samsung Galaxy M14 5G) ಸ್ಮಾರ್ಟ್‌ಫೋನ್ ಅನ್ನು "ಮೊಮೆಂಟ್ಸ್ ಮಾನ್‌ಸ್ಟರ್"(Moments Monster) ಎಂದು ಕರೆಯಲಾಗಿದೆ. ಏಕೆಂದರೆ 50MP ರಿಯರ್ ಕ್ಯಾಮೆರಾದ ಲೆನ್ಸ್ f1.8 ರ ಅಪರ್ಚರ್ ಹೊಂದಿದೆ. ಇದರರ್ಥ ನಿಮ್ಮ ಎಲ್ಲ ಅಮೂಲ್ಯಕ್ಷಣಗಳನ್ನು ನೀವು ಸಂಪೂರ್ಣವಾಗಿ ಸೆರೆಹಿಡಿಯಬಹುದು. ಎಂ 14 5G ನಿಮಗೆ ಕಡಿಮೆ ಬೆಳಕಿನಲ್ಲಿಯೂ ಮಸುಕು-ರಹಿತಮತ್ತು ಆಕರ್ಷಕ ಫೋಟೋಗಳನ್ನು ಸೆರೆಹಿಡಿಯಲು ನೆರವಾಗುತ್ತದೆ. ಇಡೀ ದಿನದ ಛಾಯಾಗ್ರಹಣಕ್ಕೂ ಅವಕಾಶ ನೀಡುತ್ತದೆ.
ಹೈಪರ್-ಫಾಸ್ಟ್ ಕಾರ್ಯಕ್ಷಮತೆ
ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ 14 5G Samsung Galaxy M14 5G ಸುಧಾರಿತ CPU ಮತ್ತು GPU ಕಾರ್ಯಕ್ಷಮತೆಗಾಗಿ ಈ ವಿಭಾಗಕ್ಕೆ ಸೀಮಿತ 5nm ಪ್ರೊಸೆಸರ್ ಜೊತೆಗೆ ಮುಂದಿಯ ಪೀಳಿಗೆಯ AP ನಿಂದ ಚಾಲಿತವಾಗಿದೆ. ಹೊಸ ಗ್ಯಾಲಕ್ಸಿ ಎಂ 14 5G Galaxy M14 5G ನ ಸುಗಮವಾದ ಮತ್ತು ವೇಗದ ಕಾರ್ಯಕ್ಷಮತೆಯನ್ನು ನೋಡಿ ಗೇಮರ್ ಗಳು ಹಾಗು ಮಲ್ಟಿಟಾಸ್ಕರ್‌ಗಳು ಇದನ್ನು ಪ್ರೀತಿಸಲಿದ್ದಾರೆ . ಇಂತಹ ನಂಬಲಾಗದ ಪ್ರೊಸೆಸರ್ 13 5G ಬ್ಯಾಂಡ್‌ಗಳೊಂದಿಗೆ ನಿಮಗೆ ನಂಬಲಾಗದ ಸ್ಪೀಡನ್ನು ನೀಡಲಿದೆ. ನೀವು ಆಪ್ಪ್ ಗಳನ್ನು ತ್ವರಿತವಾಗಿ ಬಳಸಿ ಕಣ್ಬಿಡುವುದರೊಳಗೆ ಕಂಟೆಂಟ್ ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ, ಮುಂದಿನ ಬಾರಿ ನೀವುಗೇಮ್ ಆಡುತ್ತಾ ಅದೇ ವೇಳೆ ಮೆಸೇಜ್ ಗೆ ಉತ್ತರಿಸಲು ಪ್ರಯತ್ನಿಸುತ್ತಿರುವಾಗ, ಈ ಅದ್ಭುತ ಸ್ಮಾರ್ಟ್‌ಫೋನ್‌ನ ಸಾಮರ್ಥ್ಯಗಳನ್ನು ಕಂಡು ನೀವು ಆಶ್ಚರ್ಯಪಡುವಿರಿ.
ಶಕ್ತಿಯುತ ಬ್ಯಾಟರಿ
ಈ ವಿಭಾಗಕ್ಕೆ ಸೀಮಿತವಾದ 5nm ಪ್ರೊಸೆಸರ್, 5G ವೇಗ ಜತೆಗೆ 6000mAh ಬ್ಯಾಟರಿ ಯನ್ನು ಕಲ್ಪಿಸಿಕೊಳ್ಳಿ. ನೀವು ಅಡಚಣೆಗಳನ್ನು ಇಷ್ಟಪಡದೆ ನಿಮ್ಮ ಬ್ಯಾಟರಿ ನಿರಂತರವಾಗಿ ನಡೆಯಬೇಕೆಂದರೆ ಈ ಫೋನ್ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ. ಈ ದೈತ್ಯಾಕಾರದ ಬ್ಯಾಟರಿ ನಿಮಗೆ 2 ದಿನಗಳವರೆಗೆ ಪವರ್ ನೀಡುತ್ತದೆ. ಇದು 25W ವೇಗದ ಚಾರ್ಜಿಂಗ್ ಫೀಚರ್‌ನೊಂದಿಗೆ ಬಂದಿದೆ. ಆದ್ದರಿಂದ ನೀವು ಸ್ಮಾರ್ಟ್‌ಫೋನ್ ಅನ್ನು ತ್ವರಿತವಾಗಿ ಬೂಸ್ಟ್ ಅಪ್ ಮಾಡಬಹುದು. ಇದರರ್ಥ ನಿಮ್ಮ ಫೋನ್ ಬ್ಯಾಟರಿ ಖಾಲಿಯಾಗುವ ಬಗ್ಗೆ ಚಿಂತಿಸದೆ ನಿಮ್ಮ ನೆಚ್ಚಿನ OTT ಶೋಗಳನ್ನು ವೀಕ್ಷಿಸಬಹುದು. ಇದಕ್ಕಿಂತ ಇನ್ನೇನು ಬೇಕು!