ITR filing 2023: ಆದಾಯ ತೆರಿಗೆ ರಿಟರ್ನ್ ಸಲ್ಲಿಸುವಿರಾ? ಫಾರ್ಮ್ 16ರಲ್ಲಿ ಈ ವಿಷಯಗಳನ್ನು ಪರಿಶೀಲಿಸಲು ಮರೆಯಬೇಡಿ
Income tax return (ITR) filing 2023: ವೇತನ ಪಡೆಯು ಉದ್ಯೋಗಿಗಳಿಗೆ ಜೂನ್ 15ರಂದು ಫಾರ್ಮ್ 16 ದೊರಕಲಿದೆ. ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡುವವರು ನಮೂನೆ 16ರಲ್ಲಿ ಏನೆಲ್ಲ ವಿಷಯಗಳನ್ನು ಪರಿಶೀಲಿಸಬೇಕು ಎಂಬ ಮಾಹಿತಿ ಇಲ್ಲಿದೆ.
ವೇತನ ಪಡೆಯುವ ಉದ್ಯೋಗಿಗಳಿಗೆ ಜೂನ್ 15ರಂದು ಫಾರ್ಮ್ 16 ದೊರಕಲಿದೆ. ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡುವವರಿಗೆ ಇದು ಪ್ರಮುಖ ದಾಖಲೆ. ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಸಂದರ್ಭದಲ್ಲಿ ಇದು ಅಗತ್ಯಕ್ಕೆ ಬರುತ್ತದೆ. ಇದರಲ್ಲಿ ನಿಮಗೆ ಪಾವತಿಯಾದ ವೇತನದ ವಿವರ, ಕಡಿತದ ವಿವರ, ಟಿಡಿಎಸ್ ವಿವರ ಇತ್ಯಾದಿಗಳು ದೊರಕುತ್ತದೆ.
ಇದನ್ನೂ ಓದಿ: ITR filing: 2023-24 ಸಾಲಿನ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಮೊದಲು ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯಗಳು, ಓದಿ ಐಟಿಆರ್ ಮಾರ್ಗದರ್ಶಿ
1961 ರ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 203ರ ಪ್ರಕಾರ ಉದ್ಯೋಗದಾತರು ತಮ್ಮ ಉದ್ಯೋಗಿಗಳಿಗೆ ನಮೂನೆ 16 ಅನ್ನು ನೀಡುವುದು ಕಡ್ಡಾಯ. ಇದು ಇವರ ಆದಾಯದ ಮೇಲೆ ಒಟ್ಟು ಟಿಡಿಎಸ್ ಅನ್ನು ಪ್ರತಿನಿಧಿಸುತ್ತದೆ. ಫಾರ್ಮ್ 16 ದೊರಕಿದ ಬಳಿಕ ಅದರಲ್ಲಿರುವ ವಿವರಗಳನ್ನು ಪರಿಶೀಲಿಸುವುದು ಅಗತ್ಯವಾಗಿದೆ. "ನೀವು ಫಾರ್ಮ್ 16 ಅನ್ನು ಸ್ವೀಕರಿಸಿದ ನಂತರ ಎಲ್ಲಾ ವಿನಾಯಿತಿ ಭತ್ಯೆಗಳನ್ನು ಫಾರ್ಮ್ 16ನಲ್ಲಿ ಸರಿಯಾಗಿ ತೋರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಅದರಲ್ಲಿ ನಮೂದಿಸಲಾದ ವಿವರಗಳನ್ನು ಕೂಲಂಕಷವಾಗಿ ಪರಿಶೀಲಿಸಿ. ಅಂತಹ ಭತ್ಯೆಗಳಲ್ಲಿ ಮುಖ್ಯವಾಗಿ ಮನೆ ಬಾಡಿಗೆ ಭತ್ಯೆ (HRA) ಮತ್ತು ರಜೆ ಪ್ರಯಾಣ ಸಹಾಯ (LTA) ಸೇರಿವೆ" ಎಂದು ತೆರಿಗೆ ಮತ್ತು ಹೂಡಿಕೆ ತಜ್ಞ ಬಲ್ವಂತ್ ಜೈನ್ ಹೇಳಿದ್ದಾರೆ.
ಫಾರ್ಮ್ 16ನಲ್ಲಿ ಈ ಅಂಶಗಳನ್ನು ಗಮನಿಸಿ
- ಮೊದಲಿಗೆ ನಮೂನೆ 16ರಲ್ಲಿ ನಮೂದಿಸಿರುವ ನಿಮ್ಮ ಪ್ಯಾನ್ ಸಂಖ್ಯೆಯನ್ನು ಪರಿಶೀಲಿಸಿ. ಎಲ್ಲಾದರೂ ಪ್ಯಾನ್ ಕಾರ್ಡ್ ಸಂಖ್ಯೆ ತಪ್ಪಿದ್ದರೆ ನಿಮ್ಮಿಂದ ಕಡಿತವಾದ ತೆರಿಗೆಯು Form 26ASನಲ್ಲಿ ಕಾಣಿಸದು. ಇದರಿಂದ ಐಟಿಆರ್ ಸಲ್ಲಿಕೆ ಸಮಯದಲ್ಲಿ ಕ್ರೆಡಿಟ್ ಕ್ಲೇಮ್ ಮಾಡಲು ಸಾಧ್ಯವಾಗದು.
- ನಿಮ್ಮ ಹೆಸರು ವಿಳಾಸ, ಉದ್ಯೋಗಿಗಳ ಟ್ಯಾನ್ ಸಂಖ್ಯೆ ಸರಿಯಾಗಿದೆಯೇ ಎಂದು ಪರಿಶೀಲಿಸಿ.
- ನಿಮ್ಮ ವೇತನ ಆದಾಯದಲ್ಲಿ ನಿಜವಾಗಿ ಕಡಿತವಾದ ತೆರಿಗೆಯನ್ನು ಪರಿಶೀಲಿಸಿ. ಫಾರ್ಮ್ 16, ಫಾರ್ಮ್ 26ಎಎಸ್ ಮತ್ತು ಎಐಎಸ್‌ನಲ್ಲಿ ಇರುವ ತೆರಿಗೆ ವಿವರದ ಜತೆ ಹೋಲಿಕೆ ಮಾಡಿ. ಎಲ್ಲಾದರೂ ತಪ್ಪು ಮಾಹಿತಿ ಇದ್ದರೆ ನಿಮ್ಮ ಉದ್ಯೋಗದಾತರ ಗಮನಕ್ಕೆ ತನ್ನಿ.
- ನೀವು ಹಳೆ ತೆರಿಗೆ ಪದ್ಧತಿ ಅಥವಾ ಹೊಸ ತೆರಿಗೆ ಪದ್ಧತಿಗಳಲ್ಲಿ ಯಾವುದಾದರೂ ಒಂದು ಆಯ್ಕೆ ಮಾಡಿಕೊಂಡಿರುವಿರಿ. ಇದು ಫಾರ್ಮ್ 16ನಲ್ಲಿ ಸರಿಯಾಗಿ ನಮೂದಿಸಲಾಗಿದೆಯೇ ಎಂದು ನೋಡಿ.
- 2022-23 ಹಣಕಾಸು ವರ್ಷದಲ್ಲಿ ಉದ್ಯೋಗ ಬದಲಾಯಿಸಿದ್ದರೆ ಹಳೆ ಮತ್ತು ಹೊಸ ಕಂಪನಿಗಳೆರಡಲ್ಲೂ ಫಾರ್ಮ್ 16 ಪಡೆಯಲು ಮರೆಯದಿರಿ.
- ನಿಮ್ಮ ಸ್ಯಾಲರಿ ಸ್ಲಿಪ್‌ನಲ್ಲಿರುವ ವಿವರಕ್ಕೂ ಫಾರ್ಮ್ 16ನಲ್ಲಿರುವ ವಿವರಕ್ಕೂ ಮತ್ತು ಎಐಎಸ್ ವಿವರಕ್ಕೂ ಹೋಲಿಕೆಯಾಗುತ್ತದೆಯೇ ಎಂದು ಪರಿಶೀಲಿಸಿ.
- ಹೀಗೆ ಫಾರ್ಮ್ 16 ಮೇಲೆ ಕಣ್ಣಾಡಿಸಲು ಮರೆಯಬೇಡಿ.
ಇದನ್ನೂ ಓದಿದ್ದೀರಾ: ITR filing: ತೆರಿಗೆ ಬಾಧ್ಯತೆ ಇಲ್ಲದೆ ಇದ್ದರೂ ಆದಾಯ ತೆರಿಗೆ ರಿಟರ್ನ್ ಸಲ್ಲಿಸಬೇಕೆ? ಕಡಿಮೆ ವೇತನದ ಉದ್ಯೋಗಿಗಳ ಪ್ರಶ್ನೆಗೆ ಇಲ್ಲಿದೆ ಉತ್ತರ
ಜುಲೈ 31 ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಅಂತಿಮ ದಿನವಾಗಿದ್ದು, ಈಗಾಗಲೇ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಸಾಕಷ್ಟು ಜನರು ಮುಂದಾಗಿದ್ದಾರೆ. ಆನ್‌ಲೈನ್ ಮೂಲಕ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವಾಗ ಟೆಕ್ನಿಕಲ್ ಆಗಿಯೂ ಕೆಲವು ಎಚ್ಚರಿಕೆವಹಿಸಬೇಕಾಗುತ್ತದೆ. ಎಲ್ಲಾದರೂ ಸಣ್ಣ ತಪ್ಪು ಮಾಡಿದರೂ ದೊಡ್ಡ ಎರರ್‌ಗೆ ಕಾರಣವಾಗಬಹುದು. ನೀವು ಉದ್ಯೋಗದಲ್ಲಿರುವ ವ್ಯಕ್ತಿಯಾಗಿದ್ದರೆ, ಆದಾಯ ತೆರಿಗೆ ರಿಟರ್ನ್ ಸಲ್ಲಿಸುವವರಾಗಿದ್ದಾರೆ ಕೆಲವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಆದಾಯ ತೆರಿಗೆ ರಿಟರ್ನ್ ಸಲ್ಲಿಸಬಹುದು. ನೀವು ವೇತನ ಪಡೆಯುತ್ತಿದ್ದು, ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಬಾಧ್ಯತೆ ಹೊಂದಿರುವಿರೋ ಇಲ್ಲವೋ ಎಂದು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ವಿಭಾಗ